ಯುವತಿಯ ಮೇಲೆ ಹಲ್ಲೆ ಮಾಡಿದ್ದ ಚಾಲಕ ಪೊಲೀಸ್ ವಶಕ್ಕೆ

ಬೆಂಗಳೂರು :ಬುಕಿಂಗ್ ಕ್ಯಾನ್ಸಲ್​​ ಮಾಡಿದ್ದಕ್ಕೆ ಓಲಾ ಆಟೋ ಚಾಲಕ ಯುವತಿಯ ಮೇಲೆ ಹಲ್ಲೆ ನಡೆಸಿ ಅವಾಚ್ಯ ಪದಗಳಿಂದ ನಿಂದಿಸಸಿದ್ದು, ಮಾಗಡಿ ಸಂಚಾರಿ ಪೊಲೀಸರು ವಶಕ್ಕೆ ಪಡೆದು ಕಾನೂನು ಕ್ರಮಕೈಗೊಂಡಿದ್ದಾರೆ.

ಕಳೆದ ಸೆ.2 ರಂದು ಮಾಗಡಿ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿಯೋರ್ವಳು ಹಾಗೂ ಆಕೆಯ ಸ್ನೇಹಿತೆ ಇಬ್ಬರೂ ಓಲಾ ಆಟೋ ಬುಕ್ ಮಾಡಿದ್ದರು. ಬುಕ್ಕಿಂಗ್ ಮಾಡಿದ್ದ ಆಟೋ ಸ್ಥಳಕ್ಕೆ ಆಗಮಿಸಲು ತಡವಾಗಿದ್ದಕ್ಕೆ ಬುಕಿಂಗ್ ಕ್ಯಾನ್ಸಲ್​​ ಮಾಡಿ  ಮತ್ತೊಂದು ಆಟೋವನ್ನು ಬುಕ್ ಮಾಡಿಕೊಂಡಿದ್ದರು.

ಇದನ್ನು ಓದಿ : ಅತ್ಯಾಚಾರ ಮತ್ತು ಕೊಲೆ ಪ್ರಕರಣ; ಮನೆಯಿಂದ ನಾಪತ್ತೆಯಾಗಿದ್ದ ಯುವತಿ ಶವವಾಗಿ ಪತ್ತೆ

ಹೀಗಾಗಿ ಮೊದಲು ಬಂದ ಆಟೋದಲ್ಲಿ ಹತ್ತಿ ಹೋಗಿದ್ದರು. ಆಗ ಅವರನ್ನು ಕ್ಯಾನ್ಸಲ್​​ ಆಗಿದ್ದ ಆಟೋ ಚಾಲಕ ಹಿಂಬಾಲಿಸಿ, ಯುವತಿಯರಿದ್ದ ಆಟೋವನ್ನು ಅಡ್ಡಗಟ್ಟಿ ಬಾಯಿಗೆ ಬಂದಹಾಗೆ ಬೈದು ಹಲ್ಲೆ ಮಾಡಿದ್ದ. ಘಟನೆಯನ್ನು ಯುವತಿಯು ತನ್ನ ಮೊಬೈಲ್​ನಲ್ಲಿ ಸೆರೆ ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಳು.

ಅಲ್ಲದೇ ಸೂಕ್ತ ಕ್ರಮಕ್ಕಾಗಿ ಮನವಿ ಮಾಡಿ ಬೆಂಗಳೂರು ಸಿಟಿ ಪೊಲೀಸರಿಗೆ ಟ್ಯಾಗ್ ಮಾಡಿದ್ದಳು. ಪ್ರಕರಣ ಭೇದಿಸಿರುವ ಪೊಲೀಸರು, ಇದೀಗ ಆಟೋ ಚಾಲಕನನ್ನು ಅರೆಸ್ಟ್ ಮಾಡಿದ್ದಾರೆ. ಆಟೋ ಚಾಲಕನ ಪರವಾನಗಿ ರದ್ದು ಮಾಡಿ ಎಂದು ಕೆಲ ನೆಟ್ಟಿಗರು ಕಮೆಂಟಿಸುತ್ತಿದ್ದಾರೆ.

ಇದನ್ನು ನೋಡಿ : ಬೀದರ್: 19 ವರ್ಷದ ಯುವತಿಯ ಮೇಲೆ ಅತ್ಯಾಚಾರ, ಕೊಲೆ

Donate Janashakthi Media

Leave a Reply

Your email address will not be published. Required fields are marked *