ಬೆಂಗಳೂರು: ಮಾಜಿ ಸಚಿವ ಜೆಡಿಎಸ್ನ ಹೆಚ್.ಡಿ.ರೇವಣ್ಣ ಹಿರಿಯ ಪುತ್ರ ಡಾ. ಸೂರಜ್ ರೇವಣ್ಣ ವಿಚಾರವಾಗಿ ಅಧಿಕೃತವಾಗಿ ಯಾರಿಂದಲೂ ದೂರು ಬಂದಿಲ್ಲ.ಪತ್ರ ಬರೆಯುವುದಕ್ಕೂ, ದೂರು ಕೊಡುವುದಕ್ಕೆ ವ್ಯತ್ಯಾಸ ಇದೆ. ಅಧಿಕೃತ ದೂರು ಬಂದ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ಗೃಹಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೂರಜ್ ರೇವಣ್ಣ ವಿರುದ್ಧ ಕೇಳಿ ಬರುತ್ತಿರುವ ಆರೋಪ ವಿಚಾರವಾಗಿ ಇನ್ನೂ ಯಾರ ಕಡೆಯಿಂದಲೂ ದೂರು ಬಂದಿಲ್ಲ. ಟಿವಿಯಲ್ಲಿ ಬಂದಿದೆ.
ಇದನ್ನೂ ಓದಿ: ಸೂರಜ್ ರೇವಣ್ಣ ವಿರುದ್ಧ ದೂರು ನೀಡಿದವನ ವಿರುದ್ಧ ಎಫ್ಐಆರ್
ಖಾಸಗಿ ವಾಹಿನಿಯಲ್ಲಿ ಮಾತ್ರ ಈ ಬಗ್ಗೆ ಬಂದಿದ್ದು, ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ ಎಂದಿದ್ದಾರೆ.ಆದರೆ ತಮಗೆ ಯಾವುದೇ ಪತ್ರ ಬಂದಿಲ್ಲ. ತನಿಖೆ ನಡೆಸುತ್ತೇವೆ ಸಿಐಡಿಗೆ ಕೊಡುವ ಮುನ್ನ ನೈಜತೆ ತಿಳಿದುಕೊಳ್ಳುತ್ತೇವೆ. ಖಾಸಗಿ ವಾಹಿನಿ ಅವರೊಂದಿಗೆ ಮಾತನಾಡುತ್ತೇವೆ ಎಂದರು.
ಇದನ್ನೂ ನೋಡಿ: ಅಂಗನವಾಡಿಗಳಲ್ಲಿ ಎಲ್ಕೆಜಿ- ಯುಕೆಜಿ ಆರಂಭಿಸಿ – ಅಂಗನವಾಡಿ ನೌಕರರ ಬೃಹತ್ ಪ್ರತಿಭಟನೆ Janashakthi Media