16 ವರ್ಷದ ಬಾಲಕಿಯ ಮೇಲೆ  ಅತ್ಯಾಚಾರ; ಮೂವರು ಬಾಲಕರ ಬಂಧನ

Please follow and like us:
ಉತ್ತರ ಪ್ರದೇಶ : ಉತ್ತರಪ್ರದೇಶದ ಭದೋಹಿಯಲ್ಲಿ ಮೂವರು ಬಾಲಕರು ಸೇರಿ 16 ವರ್ಷದ ಬಾಲಕಿಯ ಮೇಲೆ  ಅತ್ಯಾಚಾರ ನಡೆಸಿದ್ದು, ವಿಡಿಯೊ ಚಿತ್ರೀಕರಿಸಿ ಅಂತರ್ಜಾಲದಲ್ಲಿ ಪೋಸ್ಟ್‌ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೂನ್‌ 1ರಂದು ಬಾಲಕಿ ಮನೆ ಪಕ್ಕದ ಅಂಗಡಿಗೆ ಹೋಗಿದ್ದ ವೇಳೆ ಮೂವರು ಬಾಲಕರು ಅವಳನ್ನು ಬಲವಂತವಾಗಿ ಕೋಣೆಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಜತೆಗೆ, ಕೃತ್ಯದ ವಿಡಿಯೊ ಚಿತ್ರೀಕರಿಸಿ, ಆಕೆಗೆ ಬೆದರಿಕೆ ಹಾಕಿದ್ದಾರೆ ಎಂದು ಗೋಪಿಗಂಜ್‌ ಎಸ್‌ಎಚ್‌ಒ ಸಂತೋಷ್‌ ಕುಮಾರ್‌ ಸಿಂಗ್‌ ಹೇಳಿದ್ದಾರೆ.

ಇದನ್ನು ಓದಿ : ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪ

ಮತ್ತೆ ಅಂಗಡಿಗೆ ಬರುವಂತೆ ಬಾಲಕಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ. ಬಾಲಕಿ ಬರಲು ಒಪ್ಪದಿದ್ದಾಗ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಘಟನೆಯ ಬಗ್ಗೆ ತಿಳಿದ ಸಂತ್ರಸ್ತೆಯ ಕುಟುಂಬದವರು ಮೂವರು ಬಾಲಕರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಮೂವರು ಬಾಲಕರು 15 ರಿಂದ 17 ವರ್ಷದೊಳಗಿನವರು ಎಂದು ಸಿಂಗ್‌ ಹೇಳಿದ್ದಾರೆ.

ಇದನ್ನು ನೋಡಿ : ಸ್ಪೀಕರ್‌ ಹುದ್ದೆಯ ಮೇಲೆ ಎಲ್ಲರ ಕಣ್ಣು – ಸ್ಪೀಕರ್‌ ಯಾರಾಗ್ತಾರೋ ಅವರದ್ದೆ ಸರ್ಕಾರ! Janashakthi Media

Please follow and like us:
Donate Janashakthi Media

Leave a Reply

Your email address will not be published. Required fields are marked *