ಸಿಪಿಐ(ಎಂ) ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ,ಭಾರತ ಚುನಾವಣಾ ಆಯೋಗವು ನರೇಂದ್ರ ಮೋದಿಯವರ ದ್ವೇಷದ ಭಾಷಣಗಳಿಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. “ಸೂಕ್ತ ಕ್ರಮವನ್ನು ತೆಗೆದುಕೊಳ್ಳುವಲ್ಲಿ ಚುನಾವಣಾ ಆಯೋಗ ಕಡೆಯಿಂದ ಯಾವುದೇ ವೈಫಲ್ಯವು ಸ್ವಾಯತ್ತ ಸಂಸ್ಥೆಯಾಗಿ ಅದರ ವಿಶ್ವಾಸಾರ್ಹತೆಯನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ ಮತ್ತು ಮುಕ್ತ ಹಾಗೂ ನ್ಯಾಯಸಮ್ಮತವಾದ ಮತದಾನದ ಪರಿಸರದ ಮತ್ತಷ್ಟು ಕೆಟ್ಟು ಹೋಗಲು ಕಾರಣವಾಗುತ್ತದೆ” ಎಂದು ಯೆಚುರಿಯವರು ಈ ಪತ್ರದಲ್ಲಿ ಹೇಳಿದ್ದಾರೆ.
ದಿ ಹಿಂದೂ, ಇಂಡಿಯನ್ ಎಕ್ಸ್ಪ್ರೆಸ್ ಮತ್ತು ಟೈಮ್ಸ್ ಆಫ್ ಇಂಡಿಯಾದ ದೆಹಲಿ ಆವೃತ್ತಿಗಳ ಏಪ್ರಿಲ್ 22, 2024 ರ ಮೊದಲ ಪುಟಗಳಲ್ಲಿ ಈ ಕುರಿತು ವರದಿಗಳು ಪ್ರಕಟವಾಗಿವೆ ಎಂದು ಅವುಗಳ ಕ್ಲಿಪಿಂಗ್ಗಳನ್ನು ಲಗತ್ತಿಸುತ್ತ “ಈ ಎಲ್ಲ ವರದಿಗಳು 2024 ರ ಲೋಕಸಭಾ ಚುನಾವಣೆಯ ಪ್ರಚಾರದ ಸಮಯದಲ್ಲಿ ಭಾರತೀಯ ಜನತಾ ಪಕ್ಷದ ಪ್ರಮುಖ ಪ್ರಚಾರಕ ನರೇಂದ್ರ ಮೋದಿಯವರು ವ್ಯಕ್ತಪಡಿಸಿರುವ ಹಲವಾರು ಕೊಂಕುನುಡಿಗಳು ಅತ್ಯಂತ ಪ್ರಚೋದನಕಾರಿ ಅಂಶಗಳನ್ನು ಒಳಗೊಂಡಿವೆ” ಎಂದು ಅವರು ಮುಖ್ಯ ಚುನಾವಣಾ ಆಯುಕ್ರ ಗಮನಕ್ಕೆ ತಂದಿದ್ದಾರೆ.
ಏಪ್ರಿಲ್ 21 ರಂದು ರಾಜಸ್ಥಾನದ ಬನ್ಸ್ವಾರಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವಾಗ, ಮುಸ್ಲಿಮರತ್ತ ಬೊಟ್ಟು ಮಾಡುತ್ತ ಪ್ರಧಾನಿ “ನೀವು ಕಷ್ಟಪಟ್ಟು ದುಡಿದ ಹಣವನ್ನು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ, ನುಸುಳುಕೋರರಿಗೆ ನೀಡಬೇಕೇ?” ಎಂದು ಕೇಳಿದರು. ಈ ಮೂರು ಪತ್ರಿಕೆಗಳ ಹೊರತಾಗಿ, ಮುಖ್ಯವಾಹಿನಿಯ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಈ ಭಾಷಣವು ವ್ಯಾಪಕವಾಗಿ ವರದಿಯಾಗಿದೆ.
ಯಾವುದೇ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸುವುದು, ಇದು ಜನ ಪ್ರಾತಿನಿಧ್ಯ ಕಾಯಿದೆಯ ಸೆಕ್ಷನ್ 123(3) ಮತ್ತು ಮಾದರಿ ನೀತಿ ಸಂಹಿತೆಯ ಸಂಪೂರ್ಣ ಉಲ್ಲಂಘನೆಯಾಗಿದೆ ಎಂಬುದನ್ನು ಚುನಾವಣಾ ಆಯೋಗವೂ ಒಪ್ಪುತ್ತದೆ ಎಂದು ಆಶಿಸುತ್ತ ಇವುಗಳ ಹೊರತಾಗಿ, ಆಯೋಗ , ಇತ್ತೀಚಿನ ಮಾರ್ಚ್ 1, 2024 ರ ಅದರ ಸುತ್ತೋಲೆ ಸೇರಿದಂತೆ ಕಾಲಕಾಲಕ್ಕೆ ರಾಜಕೀಯ ಪಕ್ಷಗಳಿಗೆ ಸಾರ್ವಜನಿಕ ಪ್ರವಚನಗಳು, ನಕಲಿ ಸುದ್ದಿಗಳು, ಧರ್ಮ, ದ್ವೇಷ ಇತ್ಯಾದಿಗಳನ್ನು ಪ್ರಚೋದಿಸುವುದರ ವಿರುದ್ಧದ ಬಗ್ಗೆ ಸಲಹೆಗಳನ್ನು ಕಳುಹಿಸುತ್ತಿದೆ ಎಂದೂ ಯೆಚುರಿ ತಮ್ಮ ಪತ್ರದಲ್ಲಿ ನೆನಪಿಸಿದ್ದಾರೆ.
ಇದನ್ನು ಓದಿ : ಸಿಎಂ ಸಿದ್ದರಾಮಯ್ಯ ಅವರಿಗೆ ಫ್ರೀ ಟಿಕೆಟ್ ಹಾರ ಅರ್ಪಣೆ
ಈ ಹಿಂದೆಯೂ ಆಯೋಗದ ನಿರ್ದೇಶನವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವ ಇಂತಹ ಸ್ಪಷ್ಟ ಉಲ್ಲಂಘನೆಗಳನ್ನು ಆಯೋಗದ ಮುಂದೆ ಸಿಪಿಐ(ಎಂ) ತಂದಿತ್ತು ಎಂದು ಹೇಳುತ್ತ , ಏಪ್ರಿಲ್ 13,2024 ರಂದು ಅಂತಹ ಕೊನೆಯ ದೂರನ್ನು ಮಾಡಲಾಗಿದ್ದು, ಇದರಲ್ಲಿ ಬಿಜೆಪಿಯ ಸ್ಟಾರ್ ಪ್ರಚಾರಕ ನರೇಂದ್ರ ಮೋದಿ ಅವರು ಧರ್ಮವನ್ನು ಆವಾಹನೆ ಮಾಡಿದ್ದಾರೆ, ಅಯೋಧ್ಯೆಯಲ್ಲಿನ ಮಂದಿರದ ಪ್ರತಿಷ್ಠಾಪನೆಯ ಬಗ್ಗೆ ಉಲ್ಲೇಖಗಳನ್ನು ಮಾಡಿದ್ದಾರೆ ಮತ್ತು ವಿರೋಧ ಪಕ್ಷಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ ಮತ್ತು ಅವು “ಶ್ರೀರಾಮನ ವಿರೋಧಿಗಳು’ ಎಂದು ಹಣಪಟ್ಟಿ ಹಚ್ಚಿದ್ದಾರೆ ಎಂದು ಆ ಪತ್ರದಲ್ಲಿ ವಿವಿಧ ಉದಾಹರಣೆಗಳನ್ನು ಉಲ್ಲೇಖಿಸಿದ್ದೇರುವದನ್ನು ನೆನಪಿಸಿದ್ದಾರೆ. “ದುಃಖಕರವೆಂದರೆ, ಈ ದೂರಿನ ಬಗ್ಗೆ ಆಯೋಗದ ಪ್ರತಿಕ್ರಿಯೆಯ ಕುರಿತು ನಮಗೆ ಇನ್ನೂ ಯಾವುದೇ ಸೂಚನೆ ಬಂದಿಲ್ಲ” ಎಂದು ಖೇದ ವ್ಯಕ್ತಪಡಿಸಿದ್ದಾರೆ.
ಇದು ಒಂದುಸಮುದಾಯದ ವಿರುದ್ಧ ದ್ವೇಷದ ಭಾಷಣದಲ್ಲಿ ತೊಡಗಿಸಿಕೊಳ್ಳುವಷ್ಟು ಲಜ್ಜೆಗೆಟ್ಟದ್ದಾಗಿದೆ. ಇಂತಹ ದ್ವೇಷಪೂರಿತ ಭಾಷಣಗಳಿಗಾಗಿ ನಾಯಕರನ್ನು ನಿಷೇಧಿಸುವ ಹಿಂದಿನ ನಿದರ್ಶನಗಳು ನಮ್ಮ ಮುಂದಿವೆ ಎನ್ನುತ್ತ ಯೆಚುರಿಯವರು “ಈ ಇತ್ತೀಚಿನ ದೂರಿನ ಬಗ್ಗೆಯೂ ಗಮನಹರಿಸಬೇಕು ಮತ್ತು ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಕ್ಷದ ವಿರುದ್ಧ ತಕ್ಷಣವೇ ಕ್ರಮ ಜರುಗಿಸುವುದನ್ನು ಪ್ರಾರಂಭಿಸಲು ನಾವು ಆಯೋಗವನ್ನು ಒತ್ತಾಯಿಸುತ್ತೇವೆ. ಕೋಮುಭಾವನೆ ಮತ್ತು ದ್ವೇಷವನ್ನು ಪ್ರಚೋದಿಸಿದ್ದಕ್ಕಾಗಿ ಅವರ ವಿರುದ್ಧ ಎಫ್ಐಆರ್ ಕೂಡ ದಾಖಲಿಸಬೇಕಾಗಿದೆ. ಸಾರ್ವಜನಿಕ ಚರ್ಚೆಗಳು ಮತ್ತು ಚರ್ಚೆಗಳು ಮತ್ತಷ್ಟು ಆಳಕ್ಕೆ ಇಳಿಯದಂತೆ ತಡೆಯಲು ತಕ್ಷಣದ ಕ್ರಮ ಕೈಗೊಳ್ಳಬೇಕಾಗಿದೆ” ಎಂದು ಹೇಳಿದ್ದಾರೆ.
“ಸೂಕ್ತ ಕ್ರಮವನ್ನು ತೆಗೆದುಕೊಳ್ಳುವಲ್ಲಿ ಚುನಾವಣಾ ಆಯೋಗ ಕಡೆಯಿಂದ ಯಾವುದೇ ವೈಫಲ್ಯವು ಸ್ವಾಯತ್ತ ಸಂಸ್ಥೆಯಾಗಿ ಅದರ ವಿಶ್ವಾಸಾರ್ಹತೆಯನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ ಮತ್ತು ಮುಕ್ತ ಹಾಗೂ ನ್ಯಾಯಸಮ್ಮತವಾದ ಮತದಾನದ ಪರಿಸರದ ಮತ್ತಷ್ಟು ಕೆಟ್ಟು ಹೋಗಲು ಕಾರಣವಾಗುತ್ತದೆ” ಎಂದು ಯೆಚುರಿಯವರು ಈ ಪತ್ರದಲ್ಲಿ ಹೇಳಿದ್ದಾರೆ.
ಇದನ್ನು ನೋಡಿ : ಪ್ರಧಾನಿ ಮೋದಿ ಭ್ರಷ್ಟಾಚಾರದ ಚಕ್ರವರ್ತಿ – ಕೆ. ವಿ.ನಾಗರಾಜ ಮೂರ್ತಿ Janashakthi Media