ಗೋ ಬ್ಯಾಕ್‌ ಮೋದಿ…ಗೋ ಬ್ಯಾಕ್‌ ಅಮಿತ್‌ ಶಾ.. ಎಂಡ್‌ ಗೋ ಬ್ಯಾಕ್‌ ನಿರ್ಮಲಾ ಸೀತಾರಾಮನ್‌

ಬೆಂಗಳೂರು:  ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಬರಬೇಕಾಗಿರುವ ಬರ ಪರಿಹಾರದಲ್ಲಿ ತಾರತಮ್ಯ ವಿರೋಧಿಸಿ, ಕೇಂದ್ರದ ತಾರತಮ್ಯ ಧೋರಣೆ ಖಂಡಿಸಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಂಪುಟದ ಸಚಿವರು ಹಾಗೂ ಶಾಸಕರು, ವಿಧಾನಸೌಧ ಮುಂಭಾಗ ಇರುವ ಗಾಂಧಿ ಪ್ರತಿಮೆಯ ಎದುರು ಧರಣಿ ನಡೆಸಿ, ಗೋ ಬ್ಯಾಕ್‌ ಮೋದಿ…ಗೋ ಬ್ಯಾಕ್‌ ಅಮಿತ್‌ ಶಾ.. ಎಂಡ್‌ ಗೋ ಬ್ಯಾಕ್‌ ನಿರ್ಮಲಾ ಸೀತಾರಾಮನ್‌ ಎಂದು ಧಿಕ್ಕಾರ ಕೂಗಿದರು.

ಧರಣಿ ಬಳಿಕ ಮಾಧ್ಯದ ಪ್ರತಿನಿಧಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಮಾತನಾಡಿ, ಕೇಂದ್ರ ಸರ್ಕಾರ ಕರ್ನಾಟಕದ ಬಗ್ಗೆ ತೋರಿರುವ ಮಲತಾಯಿ ಧೋರಣೆ ಖಂಡಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದೇವೆ. ಮೋದಿ ಮತ್ತು ಅಮಿತ್‌ ಶಾ ಕರ್ನಾಟಕವನ್ನು ಹಾಗೂ ಕರ್ನಾಟಕದ ರೈತರನ್ನು ದ್ವೇಷಿಸುತ್ತಾರೆ. ಸೆಪ್ಟೆಂಬರ್‌ 22 ರಂದೇ ನಾವು ಕೇಂದ್ರಕ್ಕೆ ಮೆಮೋರಂಡಮ್‌ ನೀಡಿದ್ದೆವು. ಬಳಿಕ ನಾಲ್ಕು ದಿನಕಳ ಕೇಂದ್ರದ ಬರಪರಿಹಾರ ತಂಡ ಬಂದು ಕರ್ನಾಟಕದಲ್ಲಿ ಪರಿಶೀಲನೆ ನಡೆಸಿ, ಸಂಬಂಧಿಸಿದ ಸಚಿವರು ಅವರಿಗೆಲ್ಲಾ ವಿವರಣೆ ನೀಡಿದ್ದಾರೆ ಆದರೂ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರಿದೆ ಎಂದು ಸಿಡುಕಿದರು.

ನೂರು ವರ್ಷಗಳ ನಂತರ ಕರ್ನಾಟಕ ಭೀಕರ ಬರಗಾಲವನ್ನು ಎದುರಿಸುತ್ತಿಗು, ರಾಜ್ಯದ 224 ತಾಲೂಕುಗಳ ಪೈಕಿ 223 ತಾಲೂಕುಗಳನ್ನು ಬರಗಾಲ ಪೀಡಿತ ಎಂದು ಘೋಷಿಸಲಾಗಿದೆ. ಆದರೆ ಅಮಿತ್‌ ಶಾ ಚೆನ್ನಪಟ್ಟಣದಲ್ಲಿ ಭಾಷಣದಲ್ಲಿ ಕರ್ನಾಟಕದವರು ಬರ ಪರಿಹಾರಕ್ಕೆ ಮನವಿಯನ್ನು ತಡವಾಗಿ ಕರ್ನಾಟಕ ಸರ್ಕಾರ ಕೊಟ್ಟಿದೆ ಎಂದು ಸುಳ್ಳು ಹೇಳಿದ್ದಾರೆ. ಇನ್ನು ನಿರ್ಮಲಾ ಸೀತಾರಾಮನ್‌ ಕರ್ನಾಟಕ ಸರ್ಕಾರ ಬರಪರಿಹಾರಕ್ಕೆ ದುಡ್ಡು ಕೇಳುತ್ತಿಲ್ಲ. ಗ್ಯಾರೆಂಟಿ ಯೋಜನೆಗಳಿಗೆ ಹಣ ಕೇಳುತ್ತಿದ್ದಾರೆ ಎಂದು ಮತ್ತೊಂದು ಸುಳ್ಳು ಹೇಳಿದ್ದಾರೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಅವರಿಗೆ ಫ್ರೀ ಟಿಕೆಟ್ ಹಾರ ಅರ್ಪಣೆ

ನಾವು ಗ್ಯಾರೆಂಟಿ ಯೋಜನೆಗಳಿಗೆ ಕೇಂದ್ರಕ್ಕೆ ಹಣ ಕೇಳಿಯೇ ಇಲ್ಲ, ಕೇಂದ್ರದ ಹಣ ನಮ್ಮ ಗ್ಯಾರೆಂಟಿ ಯೋಜನೆಗಳಿಗೆ ಬೇಕಾಗಿಯೂ ಇಲ್ಲ. ಗ್ಯಾರೆಂಟಿ ಯೋಜನೆಗಳಿಗೆ ಅಗತ್ಯವಾದ ಹಣವನ್ನು ನಾವು ತೆಗೆದಿಟ್ಟಿದ್ದೇವೆ. ಅಲ್ಲದೇ ಬಜೆಟ್‌ನಲ್ಲೂ ಸಹ ಹಣ ತೆಗೆದಿಟ್ಟಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಡಿಸೆಂಬರ್‌ 23 ಕ್ಕೆ ಮೀಟಿಂಗ್‌ ಕರೆದಿರುವುದಾಗಿ ಕೇಂದ್ರ ಹೇಳಿತ್ತು. ನಾವು ಹೋಗಿದ್ದೇವಾದರೂ ಅವರು ಮೀಟಿಂಗ್‌ ಮಾಡಿಲ್ಲ. ಕರ್ನಾಟಕದ ಮುಂದೆ ಬರಲು ಅವರಿಗೆಲ್ಲಾ ನೈತಿಕತೆ ಇಲ್ಲ. ಯಾವ ಮುಖವನ್ನು ಹೊತ್ತುಕೊಂಡು ಮೋದಿ, ಶಾ ಮತ್ತು ನಿರ್ಮಲಾ ಸೀತಾರಾಮ್‌ ಸೇರಿದಂತೆ ಕೇಂದ್ರದ ಸಚಿವರು ಕರ್ನಾಟಕಕ್ಕೆ ಯಾವ ಮುಖವನ್ನಿಟ್ಟುಕೊಂಡು ಬರುತ್ತಾರೆಯೋ ಗೊತ್ತಿಲ್ಲ .ಇದೂವರೆಗೂ ರಾಷ್ಟ್ರೀಯ ಯೋಜನೆಯೂ ಆಗಿಲ್ಲ, 15 ನೇ ಹಣಕಾಸಿನ ಆಯೋಗದಲ್ಲಿ ವಿಶೇಷ ಅನುದಾನವೂ ಸಿಕ್ಕಿಲ್ಲ. ಇದಕ್ಕೆ ಕೊಡದೇ ಇರೂವುದಕ್ಕೆ ಕಾರಣ, ಮೋದಿ ಮತ್ತು ನಿರ್ಮಲಾ ಸೀತಾರಾಮನ್‌ ಕಾರಣ. ಬೆಂಗಳೂರಿನ ಕೆರೆ ಅಭಿವೃದ್ಧಿಗೂ ಹಣವೂ ಕೇಂದ್ರ ಕೊಟ್ಟಿಲ್ಲ. ಬರಪರಿಹಾರಕ್ಕೆ ಒಂದೂ ಪೈಸೆಯನ್ನೂ ಕೊಟ್ಟಿಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾಘ ಹಿಂದೆ, ಪ್ರವಾಹ ಬಂದಾಗ ಮೋದಿ ಬಂದಿಲ್ಲ, ಭೀಕರ ಬರಗಾಲ ಬಂದಿದೆ ಈಗಲೂ ಮೋದಿ ಬಂದಿಲ್ಲ. ಆದರೆ,ಚುನಾವಣೆ ಬಂದಾಗ ಮಾತ್ರವೇ ಮೋದಿ ಕರ್ನಾಟಕಕ್ಕೆ ಬರುತ್ತಾರೆ ಎಂದರೆ, ಇವರಿಗೆ ಜನರ ಬವಣೆಗಿಂತ, ರೈತರ ನೋವಿಗಿಂತಲೂ ರಾಜಕಾರಣವೇ ಮುಖ್ಯ ಎನ್ನುವುದು ಸಾಬೀತಾಗುತ್ತದೆ

ಗೋಬ್ಯಾಕ್‌ ನರೇಂದ್ರ ಮೋದಿ, ಗೋಬ್ಯಾಕ್‌ ಅಮಿತ್‌ ಶಾ ಎನ್ನುತ್ತಿದ್ದೇವೆ. ಇವತು ಅವರುಬರುತಿದ್ದಾರೆ. 18,121  ಕೋಟಿ ರೂ.ಗಳನ್ನು ಕೊಟ್ಟು ನಂತರ ಕರ್ನಾಟಕಕ್ಕೆ ಬನ್ನಿ. ನ್ಯಾಯಯುತವಾಗಿ ನಾವು ಬೇಡಿಕೆ ಇಡುತ್ತಿದ್ದೇವೆ.

ಕೇಂದ್ರ ಹೇಳಿದ್ದೆಲ್ಲವೂ ಸುಳ್ಳು. ಒಬ್ಬ ಪ್ರಧಾನಮಂತ್ರಿಯಾಗಿ, ಕೇಂದ್ರದ ಗೃಹಮಂತ್ರಿಯಾಗಿ ಶಾ ಕೇಂದ್ರದ ಹಣಕಾಸು ಮಂತ್ರಿಯಾಗಿ ನಿರ್ಮಲಾ ಸೀತಾರಾಮ್‌ ಇವರೆಲ್ಲಾ ಆ ಸ್ಥಾನಗಳಿಗೆ ಯೋಗ್ಯರಲ್ಲ. ಕೇಂದ್ರ ಬರಪರಿಹಾರಕ್ಕೆ ವಿಳಂಬ ತೋರಿದ್ದರಿಂದ ಕರ್ನಾಟಕ ಸರ್ಕಾರ ಅನಿವಾರ್ಯವಾಗಿ ಸುಪ್ರೀಂಕೋರ್ಟಿನ ಕದ ತಟ್ಟುವಂತಾಯಿತು. ಅಟಾರ್ನಿ ಜನರಲ್‌ ಆಗಲೀ ಯಾರೇ ಆಗಲೀ ಮೋದಿ ಹೇಳಿದ ಸುಳ್ಳನ್ನು ನಿರ್ಮಲಾ ಸೀತಾರಾಮನ್‌ ಹೇಳಿರುವ ಸುಳ್ಳನ್ನಾಗಲೀ ಒಂದು ಮಾತನ್ನು ಹೇಳಿಲ್ಲ. ನಾವು ದೂರಿನಲ್ಲಿ ಕೊಟ್ಟಿದ್ದೆಲ್ಲಾ ಸತ್ಯವಾಗಿದೆ. ಸುಪ್ರೀಂಕೋರ್ಟ್‌ ಕರುಣೆಯಿಂದ ಕರ್ನಾಟಕದ ಪರವಾಗಿದೆ. ನಾವು ಸುಪ್ರೀಂಕೋರ್ಟ್ಗೆ ಹೋಗದೇ ಇದ್ದಿದ್ದರೆ, ನ್ಯಾಯ ಸಿಗುತ್ತಿರಲಿಲ್ಲ ಎಂದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿಗಳೂ ಕೆಪಿಸಿಸಿ ಉಸ್ತುವಾರಿ ಸುರ್ಜೇವಾಲ, ಸಚಿವರಾದಕೃಷ್ಣಬೈರೇಗೌಡ, ಕೆ.ಜೆ.ಜಾರ್ಜ್‌ ಸೇರಿದಂತೆ ಮತ್ತಿತ್ತರ ಸಚಿವರು, ಪಕ್ಷದ ಶಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಇಂದು ಕರ್ನಾಟಕಕ್ಕೆ ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಬರುತ್ತಿದ್ದು, ಈ ಹಿನ್ನೆಲಯಲ್ಲಿ ಈ ಗೋಬ್ಯಾಕ್‌ ಧರಣಿ ನಡೆದಿರುವುದು ಗಮನಾರ್ಹ.

ಇದನ್ನೂ ನೋಡಿ: ಸುಳ್ಳಿನಾ ಸರದಾರಾ ಮೋದಿಯ ಸರಕಾರ Janashakthi Media

Donate Janashakthi Media

Leave a Reply

Your email address will not be published. Required fields are marked *