“ಮೋದಿ  ದ್ವೇಷವನ್ನು ಉತ್ತೇಜಿಸುತ್ತಿದ್ದಾರೆ” ಪ್ರಧಾನಿಗಳ  ವಿರುದ್ಧ ಸಿಪಿಐ(ಎಂ) ಮುಖಂಡರ ದೂರು: ದಿಲ್ಲಿ ಪೋಲೀಸ್‍ ಕಮಿಷನರ್‍ ಗೆ ಪತ್ರ

ಸಿಪಿಐ(ಎಂ) ಪೊಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್, ಮತ್ತು ಸಿಪಿಐ(ಎಂ)ನ ದಿಲ್ಲಿ ರಾಜ್ಯ ಕಾರ್ಯದರ್ಶಿ ಪುಷ್ಪಿಂದರ್ ಸಿಂಗ್ ಗ್ರೆವಾಲ್ ಪ್ರಧಾನಮಂತ್ರಿ ನರೇಂದ್ರ ಮೋದಿ, ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಲು ಮತ್ತು ರಾಷ್ಟ್ರೀಯ ಸಮಗ್ರತೆಗೆ ಮಾರಕವಾದ  ಸುಳ್ಳು ಆರೋಪಣೆಗಳು ಮತ್ತು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ದಿಲ್ಲಿಯ ಮಂದಿರ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಎಸ್‌ಎಚ್‌ಒ ಗೆ ದೂರು ನೀಡಿದ್ದಾರೆ. ತಕ್ಷಣವೇ ಎಫ್‌ಐಆರ್ ಅನ್ನು ದಾಖಲಿಸಲು ಮತ್ತು ಸೂಕ್ತವಾಗಿ ಮತ್ತು ತುರ್ತಾಗಿ ತನಿಖೆ ನಡೆಸುವಂತೆ ಅವರು ವಿನಂತಿಸಿದ್ದಾರೆ
ಅ ಲ್ಲಿ  ಈ  ದೂರನ್ನು ಸ್ವೀಕರಿಸಲು ನಿರಾಕರಿಸಿದ್ದರಿಂದ ಅದನ್ನು ದಿಲ್ಲಿ  ಪೊಲೀಸ್ ಆಯುಕ್ತರಿಗೆ ಕಳುಹಿಸಿರುವುದಾಗಿ ಹೇಳಿರುವ  ಅವರು ಇದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

21.04.2024 ರಂದು ರಾಜಸ್ಥಾನದ ಭನ್ಸ್ ವಾರಾದಲ್ಲಿ ಚುನಾವಣಾ ರ್ಯಾಲಿಯಲ್ಲಿ ನೀಡಿದ ಭಾಷಣದಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು  ಮೋದಿ ಉದ್ದೇಶಪೂರ್ವಕವಾಗಿ ಮತ್ತು ವ್ಯೂಹಾತ್ಮಕವಾಗಿ ಮುಸ್ಲಿಂ ವಿರೋಧಿ ರೂಪಕಗಳನ್ನು ಬಳಸಿ ಹಿಂದೂ ಸಮುದಾಯದಲ್ಲಿ ಅವರ ಆಸ್ತಿ ಬೆದರಿಕೆಗೊಳಗಾಗಿದೆ,  ಏಕೆಂದರೆ ಸಮುದಾಯದ ಆಸ್ತಿಗಳು, ವಿಶೇಷವಾಗಿ (ಹಿಂದೂ) ಮಹಿಳೆಯರ ಚಿನ್ನ ಮತ್ತು ಮಂಗಳಸೂತ್ರವನ್ನು ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯದ ಸದಸ್ಯರಿಗೆ ಹಂಚುತ್ತದೆ ಎಂಬ ಭಾವನೆಯನ್ನು ಮೂಡಿಸಿದ್ದಾರೆ.  ಇದು ಒಂದು ನಿರ್ದಿಷ್ಟ ಗುಂಪಿನ ಸದಸ್ಯತ್ವದ ಆಧಾರದ ಮೇಲೆ ವ್ಯಕ್ತಿಗಳನ್ನು ಗುರಿಯಾಗಿಸುವ ಪರಿಣಾಮವನ್ನು ಹೊಂದಿದೆ ಮತ್ತುಆ ಗುಂಪನ್ನು ದ್ವೇಷಕ್ಕೆ ಒಡ್ಡುತ್ತದೆ.

 “ಇದು ಐಪಿಸಿ ಸೆಕ್ಷನ್ 153A/153B/298/504/505 ಅಡಿಯಲ್ಲಿ ದ್ವೇಷಭಾಷಣವಾಗುತ್ತದೆ ಎಂದು ನಾವು ನಂಬುತ್ತೇವೆ. ಪ್ರಧಾನಿಗಳು ಮಾಡಿರುವಂತೆ ಭಾಷಣವನ್ನು ಬಳಸಿ ಮತ ಯಾಚನೆ ಮಾಡುವುದು ಸಂಪೂರ್ಣ ಕಾನೂನುಬಾಹಿರ” ಎಂದು ಈ ಪತ್ರದಲ್ಲಿ ಹೇಳಲಾಗಿದೆ.

ಭಾರತೀಯ ಮುಸ್ಲಿಮರನ್ನು ನುಸುಳುಕೋರರು, ಲೂಟಿಕೋರರು ಮತ್ತು ಹಿಂದೂಗಳಿಗೆ ಮತ್ತು ವಿಶೇಷವಾಗಿ ಹಿಂದೂ ಮಹಿಳೆಯರಿಗೆ ಬೆದರಿಕೆ ಎಂದು ನಿರೂಪಿಸುವುದು ಕೋಮುವಾದದ ಅಸಾಮಾನ್ಯ ಲಕ್ಷಣವೇನಲ್ಲ.  ಸುಪ್ರೀಂ ಕೋರ್ಟ್ ಬಾಬು ರಾವ್ ಪಟೇಲ್ vs ದೆಹಲಿ (ಆಡಳಿತ) (1980)2 SCC 402 ಪ್ರಕರಣದ ತೀರ್ಪಿನಲ್ಲಿ ಹಾಗೆಂದು ಖಂಡಿಸಿರುವ ಹಿಂದಿನ ನಿದರ್ಶನವಿದೆ. ಈಗಲೂ ಸಹ ಕೇವಲ ಗೂಗಲ್ ಹುಡುಕಾಟ ನಡೆಸಿದರೆ, ಭಾರತದಲ್ಲಿ ಮುಸ್ಲಿಮರು (ಹೆಚ್ಚಾಗಿ ಮೊಗಲ್ ಕೊಂಡಿ ಹೊಂದಿರುವವರು) “ಅತಿಕ್ರಮಣಕಾರರು” ಎಂದು ವರ್ಣಿಸು ವ ಭಾಷಣಗಳು ಮತ್ತು ಲೇಖನಗಳನ್ನು ಕಾಣಬಹುದು. ಮೋದಿ

ಇದನ್ನು ಓದಿ : ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದ ಈಶ್ವರಪ್ಪ

ಪ್ರಧಾನಮಂತ್ರಿಗಳು ಹಿಂದೂಗಳ ಆಸ್ತಿಯನ್ನು ಯಾರಿಗೆ ಹಂಚಲಾಗುತ್ತದೆ ಎಂಬುದನ್ನು ವರ್ಣಿಸಲು ಅಸಾಂವಿಧಾನಿಕವಾಗಿ ಮತ್ತು ಉದ್ದೇಶಪೂರ್ವಕವಾಗಿ, “ಘುಸ್‍ಪೈಂಟಿಯೋಂ” (ಅಂದರೆ “ನುಸುಳುಕೋರರು” ಅಥವಾ “ಅತಿಕ್ರಮಣಕಾರರು”) ಎಂಬ ಪದ ಬಳಸಿದ್ದಾರೆ,. ರಾಷ್ಟ್ರದ ಸಂಪನ್ಮೂಲಗಳ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕಿದೆ ಎಂದು ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಪ್ರತಿಪಾದಿಸಿರುವುದಾಗಿ ಹೇಳುತ್ತಲೇ  ಈ ಮಾತು  ಹೇಳಿದ್ದಾರೆ. ಇದು ಹಿಂದುಗಳು ಮತ್ತು ಅವರ ಆಸ್ತಿಗಳನ್ನು ಹೆಚ್ಚು ಮಕ್ಕಳನ್ನು ಹೊಂದಿರುವ (ಮುಸ್ಲಿಂ) ನುಸುಳುಕೋರರಿಗೆ  ಕೊಡಲಾಗುತ್ತದೆ ಎಂದು ಅರ್ಥಮೂಡಿಸುತ್ತದೆ. ಆದ್ದರಿಂದ ಪ್ರಧಾನಿಯವರ ಭಾಷಣವು ಮುಸ್ಲಿಮರು ಹಿಂದುಗಳನ್ನು ಅಂಚಿಗೆ ತಳ್ಳುತ್ತಾರೆ ಎಂಬ  ಭಯವನ್ನು ಹುಟ್ಟಿಸುತ್ತದೆ ಮತ್ತು  ಪ್ರಚಾರ ಮಾಡುತ್ತದೆ. ಇದು ದ್ವೇಷ ಭಾಷಣವಾಗುತ್ತದೆ ಮಾತ್ರವಲ್ಲದೆ ರಾಷ್ಟ್ರೀಯ ಏಕತೆಗೆ ಬೆದರಿಕೆಯಾಗಿದೆ ಎಂದಿರುವ ಸಿಪಿಐ(ಎಂ) ಮುಖಂಡರ ಈ ಪತ್ರ, ಯೂಟ್ಯೂಬ್ ಚಾನೆಲ್‌ನಲ್ಲಿ ಕೇರುವ ಮತ್ತು ಮತ್ತಷ್ಟು ವ್ಯಾಪಕವಾಗಿ ವರದಿ ಮಾಡಲಾದ ಮತ್ತು ರಾಷ್ಟ್ರವ್ಯಾಪಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡಿರುವ ಭಾಷಣದ ಸಂಬಂಧಿತ ಅಂಶವನ್ನು ಉಲ್ಲೇಖಿಸುತ್ತದೆ. ಮೋದಿ

ಪ್ರಧಾನಮಂತ್ರಿಯವರ ಈ ಹೇಳಿಕೆಗಳು ಪ್ರಚೋದನಕಾರಿ  ಮತ್ತು ಕಾನೂನುಬಾಹಿರ ಮತ್ತು ಸಮುದಾಯಗಳ ನಡುವೆ ಕೆಟ್ಟ ಭಾವನೆಯನ್ನು ಉತ್ತೇಜಿಸುತ್ತವೆ. ತಾಯಂದಿರು ಮತ್ತು ಸಹೋದರಿಯರ “ಮಂಗಲಸೂತ್ರ” ಮತ್ತು “ಚಿನ್ನ” ವನ್ನು ಎನ್ನುವಾಗ ಅವರು ಹಿಂದೂ ಸಮುದಾಯವನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತಿದ್ದಾರೆ. ಅದೇ ರೀತಿ, ಪ್ರಧಾನಮಂತ್ರಿಯವರು “ಜಿನಕೆ ಜ್ಯಾದಾ ಬಚ್ಚೆ ಹೇಂ” ಮತ್ತು “ಘುಸ್‍ ಪೈಂಟಿಯೋಂ” ಎನ್ನುವಾಗ ಮುಸ್ಲಿಂ ಸಮುದಾಯದ ಉಲ್ಲೇಖವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಅವರು ತಮ್ಮ ಭಾಷಣದಲ್ಲಿ ‘ಮುಸ್ಲಿಂ’ ಎಂಬ  ಪದಗಳನ್ನು ಸ್ಪಷ್ಟವಾಗಿ ಬಳಸಿದ್ದಾರೆ. ಈ ಸ್ಟೀರಿಯೊಟೈಪ್‌ಗಳು ಮತ್ತು ರೂಪಕಗಳನ್ನು ಬಳಸುವುದು ಮುಸ್ಲಿಂ ಸಮುದಾಯದ ನಿಂದನೆಯಾಗುತ್ತದೆ ಮತ್ತು ತನ್ನ ಎಲ್ಲಾ ನಾಗರಿಕರಿಗೆ ಜಾತ್ಯತೀತತೆ ಮತ್ತು ಸಮಾನತೆಯ ಮೌಲ್ಯಗಳನ್ನು ಪ್ರತಿಪಾದಿಸುವ ಈ ದೇಶದ ರಾಷ್ಟ್ರೀಯ ಸಮಗ್ರತೆ ಮತ್ತು ಏಕತೆಗೆ ತೀವ್ರವಾಗಿ ತೊಂದರೆಯನ್ನು ಉಂಟುಮಾಡುತ್ತದೆ, ಮತ್ತು ಮುಸ್ಲಿಮರು ಮತ್ತು ಭಾರತೀಯ ಪ್ರಜೆಗಳು ಇವೆರಡೂ ಆಗಿದ್ದಾರೆ ಎಂಬ ಅವರ ಅಸ್ಮಿತೆಗೆ ಮತ್ತು ಧಾರ್ಮಿಕ ನಂಬಿಕೆಗಳಿಗೆ ಅವಮಾನವ ಮಾಡುತ್ತದೆ ಎಂದು ಬೃಂದಾಕಾರಟ್ ಮತ್ತು ಗ್ರೆವಾಲ್‍ ಈ ದೂರಿನಲ್ಲಿ ಹೇಳಿದ್ದಾರೆ.

ಸೆಕ್ಷನ್ 153A/153B ಅಡಿಯಲ್ಲಿ ಅಪರಾಧಗಳು ದಂಡಾರ್ಹ ಎಂದು ಗುರುತಿಸಬಹುದಾದ್ದರಿಂದ, ಈ ಘಟನೆಗೆ ಸಂಬಂಧಿಸಿದಂತೆ ತಕ್ಷಣವೇ ಎಫ್‌ಐಆರ್ ಅನ್ನು ದಾಖಲಿಸಲು ಮತ್ತು ಸೂಕ್ತವಾಗಿ ಮತ್ತು ತುರ್ತಾಗಿ ತನಿಖೆ ನಡೆಸುವಂತೆ ಅವರು ವಿನಂತಿಸಿದ್ದಾರೆ.”ಪ್ರಚಾರದ ಭಾಗವಾಗಿ ಭಾಷಣದ ಸಂದರ್ಭವನ್ನು ಗಮನಿಸಿದರೆ ಮತ್ತು ಮುಂಬರುವ ಚುನಾವಣೆಗಳನ್ನು ಗಮನಿಸಿದರೆ, ಪ್ರಧಾನ ಮಂತ್ರಿಗಳ ಮಾತುಗಳು ಪ್ರಚೋದನಕಾರಿ ಮತ್ತು ಹಾನಿಕಾರಕ ಪರಿಣಾಮಗಳಿಗೆ ಕಾರಣವಾಗಬಹುದು. ಇದಲ್ಲದೆ, ಇಂತಹ ಸಂದರ್ಭದಲ್ಲಿ, ಭಾಷಣದ ಸಂಬಂಧಿತ ಭಾಗವನ್ನು ಭಾರತದಾದ್ಯಂತ ಪ್ರಸಾರ ಮಾಡಲಾಗಿರುವುದರಿಂದ, ಈ ಹೇಳಿಕೆಗಳ ಪ್ರಭಾವವು ದೇಶವ್ಯಾಪಿಯಾಗಿದ್ದು ನಿಮ್ಮ ಪೊಲೀಸ್ ಠಾಣೆಯ ವ್ಯಾಪ್ತಿಗೂ ಬರುತ್ತದೆ. ಯಾವುದೇ ನಾಗರಿಕರು ಅವರ ಸ್ಥಾನಮಾನ ಎಷ್ಟೇ ಉನ್ನತವಾಗಿದ್ದರೂ ಸಹ ಕಾನೂನನ್ನು ಮೀರಿ ಹೋಗಲು ಸಾಧ್ಯವಿಲ್ಲ. ಆದ್ದರಿಂದ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ವಿರುದ್ಧ ಉಲ್ಲೇಖಿಸಲಾದ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸುವುದು ನಿಮ್ಮ ಜವಾಬ್ದಾರಿಯಾಗಿದೆ” ಎಂದು ಈ  ಪತ್ರ ಸಂಬಂಧಿತ ಪೋಲಿಸ್‍ ಠಾಣೆಯ ಮುಖ್ಯಸ್ಥರ ಗಮನಕ್ಕೆ ತರುತ್ತದೆ.

ಆರಂಭದಲ್ಲಿ ಹೇಳಿರುವಂತೆ, ಅ ಲ್ಲಿ  ಈ  ದೂರನ್ನು ಸ್ವೀಕರಿಸಲು ನಿರಾಕರಿಸಿದ್ದರಿಂದ ಅದನ್ನು ಬೃಂದಾಕಾರಟ್ ಮತ್ತು ಗ್ರೆವಾಲ್‍ ದಿಲ್ಲಿ  ಪೊಲೀಸ್ ಆಯುಕ್ತರಿಗೆ ಕಳುಹಿಸಿದ್ದಾರೆ.

ಇದನ್ನು ನೋಡಿ : ಕೋಮುವಾದಿಗಳನ್ನು ಸೋಲಿಸುವುದು ಜಾಗೃತ ನಾಗರಿಕರ ಜವಾಬ್ದಾರಿ – ಬಂಜಗೆರೆ ಜಯಪ್ರಕಾಶ್ Janashakthi Media

Donate Janashakthi Media

Leave a Reply

Your email address will not be published. Required fields are marked *