ನವದೆಹಲಿ: ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ನಡೆಯುವ ದ್ವೇಷಾಪರಾಧಗಳು ಮತ್ತು ದ್ವೇಷ ಭಾಷಣಗಳನ್ನು ದಾಖಲಿಸುವ ಸ್ವತಂತ್ರ ಸಂಶೋಧನಾ ಸಂಸ್ಥೆಯಾದ ‘ಹಿಂದುತ್ವ ವಾಚ್’ ಎಕ್ಸ್ ಖಾತೆಯನ್ನು ಕೇಂದ್ರ ಸರ್ಕಾರದ ಆದೇಶದ ಮೇಲೆ ಮಂಗಳವಾರ ತಡೆಹಿಡಿಯಲಾಗಿದೆ ಎಂದು ವರದಿಯಾಗಿದೆ. ಹಿಂದುತ್ವ ವಾಚ್ ದೇಶದ ಮೂಲಭೂತವಾದಿ ಹಿಂದೂಗಳು ಮತ್ತು ಹಿಂದುತ್ವ ಉಗ್ರಗಾಮಿ ಗುಂಪುಗಳು ಮಾಡಿದ ದ್ವೇಷದ ಅಪರಾಧಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯನ್ನು ಕೇಂದ್ರೀಕರಿಸಿ ಕೆಲಸ ಮಾಡುತ್ತದೆ.
ಸಾಮಾಜಿಕ ಮಾಧ್ಯಮ ವೇದಿಕೆಯಾದ ‘ಎಕ್ಸ್’ ಕೇಂದ್ರ ಸರ್ಕಾರದಿಂದ ಬಂದ ‘ಕಾನೂನು ಬೇಡಿಕೆಗೆ ಪ್ರತಿಕ್ರಿಯೆಯಾಗಿ’ ಭಾರತದಲ್ಲಿ ಹಿಂದುತ್ವ ವಾಚ್ನ ಖಾತೆಯನ್ನು ತಡೆಹಿಡಿದಿದೆ. ಮಂಗಳವಾರ ಸಂಜೆ ಈ ಕ್ರಮವನ್ನು ತೆಗೆದುಕೊಳ್ಳಲಾಗಿದ್ದು, ಖಾತೆಯನ್ನು ತಡೆಹಿಡಿಯಲಾದ ಮೂರು ಗಂಟೆಗಳ ನಂತರ ಅಧಿಸೂಚನೆಯನ್ನು ಸ್ವೀಕರಿಸಿದ್ದಾಗಿ ಸಂಸ್ಥೆಯ ಸಂಸ್ಥಾಪಕ ರಖೀಬ್ ಹಮೀದ್ ನಾಯಕ್ ಹೇಳಿದ್ದಾರೆ.
ಇದನ್ನೂ ಓದಿ: ಗೂಗಲ್ ಜಾಹೀರಾತು ಮಾರಾಟ ವಿಭಾಗದ ನೂರಾರು ಉದ್ಯೋಗಿಗಳು ವಜಾ
ಹಿಂದುತ್ವ ವಾಚ್ ಖಾತೆಯು ಭಾರತದ ಮಾಹಿತಿ ತಂತ್ರಜ್ಞಾನ ಕಾಯಿದೆಯನ್ನು ಉಲ್ಲಂಘಿಸುತ್ತದೆ ಎಂದು ಹೇಳಿರುವ ಕೇಂದ್ರ ಸರ್ಕಾರ ಖಾತೆಯನ್ನು ತಡೆಹಿಡಿಯುವಂತೆ ಕೇಳಿಕೊಂಡಿದೆ ಎಂದು ಎಕ್ಸ್ ಅವರಿಗೆ ಇ ಮೇಲ್ ಮಾಡಿದೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಈ ನಡೆಗೆ ಪ್ರತಿಕ್ರಿಯೆ ನೀಡಿರುವ ರಖೀಬ್ ಹಮೀದ್, “ಇದು ಆಘಾತಕಾರಿದೆ. ಆದರೂ ಪ್ರಧಾನಿ ಮೋದಿ ಆಡಳಿತದ ಮುಕ್ತ ಪತ್ರಿಕಾ ಮತ್ತು ವಿಮರ್ಶಾತ್ಮಕ ಧ್ವನಿಗಳನ್ನು ನಿಗ್ರಹಿಸುವ ಇತಿಹಾಸವನ್ನು ನೋಡುವುದಾದರೆ ಇದರಲ್ಲಿ ಆಶ್ಚರ್ಯವೇನಿಲ್ಲ. ಅವರ ಈ ನಡೆಯು ನಮ್ಮನ್ನು ತಡೆಯುವುದಿಲ್ಲ! ನಾವು ನಮ್ಮ ಕೆಲಸಕ್ಕೆ ಬದ್ಧರಾಗಿರುತ್ತೇವೆ! ಭಾರತದಲ್ಲಿ ನಮ್ಮ ಖಾತೆಯನ್ನು ತಡೆದಿದ್ದು, ನಮ್ಮ ಕೆಲಸವನ್ನು ಅಡೆತಡೆಯಿಲ್ಲದೆ ಮುಂದುವರಿಸುವ ನಮ್ಮ ಸಂಕಲ್ಪವನ್ನು ಮತ್ತಷ್ಟು ಉತ್ತೇಜಿಸುತ್ತದೆ” ಎಂದು ಹೇಳಿದ್ದಾರೆ.
While shocking, it's not surprising, considering Prime Minister Modi regime's history of suppressing free press & critical voices.
This won't deter us!
We remain committed!
The suppression of our account in India only fuels our determination to continue our work undeterred
— Raqib Hameed Naik (@raqib_naik) January 16, 2024
ರಖೀಬ್ ಹಮೀದ್ ಅವರು ಎಕ್ಸ್ ಖಾತೆಯ ಬದಲಿಗೆ ಇನ್ಸ್ಟ್ರಾಗ್ರಾಂ, ಟೆಲಿಗ್ರಾಮ ಮತ್ತು ವೆಬ್ಸೈಟ್ಗಳನ್ನು ಫಾಲೋ ಮಾಡಲು ಕೋರಿಕೊಂಡಿದ್ದಾರೆ. ಅವುಗಳ ಲಿಂಕ್ ಕೆಳಗಿನಂತಿದೆ.
ಇನ್ಸ್ಟಾಗ್ರಾಂ – instagram.com/hindutvawatchin
ಟೆಲಿಗ್ರಾಂ – https://t.co/y9AIrUVcnb
ವೆಬ್ಸೈಟ್ – https://hindutvawatch.org/
ಹಿಂದುತ್ವ ವಾಚ್ ಟ್ವಿಟರ್ ಖಾತೆಯನ್ನು ಕೇಂದ್ರ ಸರ್ಕಾರ ತೆಡೆಹಿಡಿಯುವಂತೆ ಕೇಳಿಕೊಂಡ ನಡೆಯನ್ನು ಖ್ಯಾತ ಪತ್ರಕರ್ತರಾದ ಮೊಹಮ್ಮದ್ ಜುಬೇರ್, ರಾಣಾ ಅಯೂಬ್ ಸೇರಿದಂತೆ ಹಲವಾರು ವ್ಯಕ್ತಿಗಳು ಖಂಡಿಸಿದ್ದು, ಭಾರತದಲ್ಲಿ ಮುಸ್ಲಿಮರ ವಿರುದ್ಧ ದ್ವೇಷದ ಅಪರಾಧವನ್ನು ದಾಖಲಿಸುವುದು ಅಪರಾಧವೆ ಎಂದು ಆಶ್ವರ್ಯ ವ್ಯಕ್ತಪಡಿಸಿದ್ದಾರೆ.
ವಿಡಿಯೊ ನೋಡಿ:ಉದ್ಯೋಗ ಖಾತ್ರಿ ಕಾರ್ಮಿಕರಿಗೆ ಆಧಾರ್ ಆಧಾರಿತ ವೇತನ : ಮೋದಿ ಸರ್ಕಾರದ ಕ್ರೂರ ಉಡುಗೊರೆ Janashakthi Media