ಬೆಂಗಳೂರು : ಭ್ರೂಣ ಲಿಂಗ ಪತ್ತೆ ಮಾಡಿ ಬಹಿರಂಗಪಡಿಸುವಂತಹ ಸ್ಕ್ಯಾನಿಂಗ್ ಸೆಂಟರ್ಗಳನ್ನು ಮತ್ತು ನಕಲಿ ವೈದ್ಯರನ್ನೂ ಪತ್ತೆ ಹಚ್ಚಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಆರೋಗ್ಯ ಅಧಿಕಾರಿಗಳು ರಾಜ್ಯಾದ್ಯಂತ ದಾಳಿ ನಡೆಸಿದ ವೇಳೆ ಮತ್ತೊಂದು ಭಯಾನಕ ವಿಷಯ ಹೊರ ಬಿದ್ದಿದ್ದು, ರಾಜ್ಯಾದ್ಯಂತ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಭರ್ಜರಿ ಕಾರ್ಯಾಚರಣೆಯಿಂದ ಬರೋಬ್ಬರಿ 34 ಸ್ಕ್ಯಾನಿಂಗ್ ಸೆಂಟರ್ ಗಳನ್ನು ಅಧಿಕಾರಿಗಳು ಸಿಸ್ ಮಾಡಿದ್ದಾರೆ. 469 ಸ್ಕ್ಯಾನಿಂಗ್ ಸೆಂಟರಗಳಿಗೆ ಆರೋಗ್ಯ ಇಲಾಖೆ ನೋಟಿಸ್ ಜಾರಿಗೊಳಿಸಿದೆ.ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ವೇಳೆ 156 ನಕಲಿ ವೈದ್ಯರು ಪತ್ತೆಯಾಗಿದ್ದಾರೆ. ಸ್ಕ್ಯಾನಿಂಗ್
ಇದನ್ನು ಓದಿ : ಜನವರಿ 30ರಂದು ರಾಜ್ಯದೆಲ್ಲೆಡೆ ಮಾನವ ಸರಪಳಿ | ‘ಸೌಹಾರ್ದ ಕರ್ನಾಟಕ’ ರಾಜ್ಯ ಸಮಾವೇಶದಲ್ಲಿ ನಿರ್ಣಯ
ಬೆಂಗಳೂರು ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಸ್ಕ್ಯಾನಿಂಗ್ ಸೆಂಟರ್ ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಮೈಸೂರಿನಲ್ಲಿ ನಡೆದಂತಹ ಭ್ರೂಣ ಹತ್ಯೆ ಘಟನೆಗೆ ಸಂಬಂಧಿಸಿದಂತೆ ಸ್ಕ್ಯಾನಿಂಗ್ ಸೆಂಟರ್ ಗಳ ಕಳ್ಳಾಟ ಹೊರ ಹಾಕಲು ಇಲಾಖೆ ಮುಂದಾಗಿತ್ತು.ಮೈಸೂರಿನ ಪ್ರಕರಣ ಬಯಲಾಗುತ್ತಿದ್ದಂತೆ ಅಧಿಕಾರಿಗಳು ರಾಜ್ಯಾದ್ಯಂತ ದಾಳಿಗೆ ಮುಂದಾಗಿದ್ದರು. ಡಿಸೆಂಬರ್ 31ರ ಒಳಗೆ ರಾಜ್ಯದ ಎಲ್ಲಾ ಸ್ಕ್ಯಾನಿಂಗ್ ಸೆಂಟರ್ ಗಳಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದರು. ಸ್ಕ್ಯಾನಿಂಗ್
ಅಕ್ರಮ ಸ್ಕ್ಯಾನಿಕ್ ಸೆಂಟರ್ ವಿರುದ್ಧ ಕ್ರಮವಹಿಸಿ ವರದಿ ನೀಡಲು ಎಲ್ಲಾ ಡಿಎಚ್ಓ ಹಾಗೂ ಸಿ ಹೆಚ್ ಓ ಗಳಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿತ್ತು. ಎಲ್ಲ ಸ್ಕ್ಯಾನಿಂಗ್ ಸೆಂಟರ್ ಮೇಲ್ ದಾಳಿ ಪರಿಶೀಲನೆ ನಡೆಸಿ ಈಗಾಗಲೇ ಅಧಿಕಾರಿಗಳು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿವೆ.ಜೊತೆಗೆ ಅಧಿಕಾರಿಗಳ ಪರಿಶೀಲನೆ ವೇಳೆ 156 ನಕಲಿ ವೈದ್ಯರು ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.ಒಟ್ಟು 583 ಸ್ಕ್ಯಾನಿಕ್ ಸೆಂಟರ್ ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಸ್ಕ್ಯಾನಿಂಗ್
ಇದನ್ನು ನೋಡಿ : ಸೌಹಾರ್ದ ಪರಂಪರೆ ಮತ್ತು ಸಮಕಾಲೀನತೆ” ರಾಜ್ಯ ಸಮಾವೇಶ