ರೈಲಿನಲ್ಲಿ ಶೀಘ್ರವೇ 10 ಸಾವಿರ ಜನರಲ್ ಬೋಗಿಗಳ ಸೇರ್ಪಡೆ: ವಿ. ಸೋಮಣ್ಣ

ಲಬುರಗಿ: ‘ಸಾಮಾನ್ಯ ಪ್ರಯಾಣಿಕರ ಅಗತ್ಯಗಳನ್ನು ಪೂರೈಸಲು ಹಾಗೂ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ಭಾರತೀಯ ರೈಲ್ವೆಯು ಶೀಘ್ರವೇ 10 ಸಾವಿರ ಜನರಲ್ ಬೋಗಿಗಳನ್ನು ಪ್ರಯಾಣಿಕರ ಸೇವೆಗೆ ಸೇರ್ಪಡೆ ಮಾಡಿಕೊಳ್ಳಲಿದೆ’ ಎಂದು ಜೂನ್‌ 1 ಭಾನುವಾರದಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೇಲ್ವರ್ಗದವರ ಅನುಕೂಲಕ್ಕಾಗಿ ಎ.ಸಿ. ಬೋಗಿಗಳಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದನ್ನು ಹೋಗಲಾಡಿಸಲು 10 ಸಾವಿರ ಹೊಸ ಜನರಲ್‌ ಬೋಗಿಗಳು ಸಿದ್ಧವಾಗಿವೆ. ಹಂತ-ಹಂತವಾಗಿ ಹಳೇ ಬೋಗಿಗಳನ್ನು ತೆಗೆದು ಹೊಸ ಬೋಗಿಗಳನ್ನು ಅಳವಡಿಸಲಾಗುವುದು’ ಎಂದು ಹೇಳಿದರು.

ಇದನ್ನೂ ಓದಿ: ಕುರಿಗಾಹಿಗಳಿಗೆ ಜೀವದ ರಕ್ಷಣೆಗೆ ಬಂದೂಕು ಪರವಾನಗಿ ಕೊಡಬೇಕು: ಸಿಎಂ ಸಿದ್ದರಾಮಯ್ಯ

‘ರಾಜ್ಯದಲ್ಲಿ 13 ಜಿಲ್ಲೆಗಳಲ್ಲಿ ವಂದೇ ಭಾರತ್ ರೈಲುಗಳು ಓಡುತ್ತಿವೆ. ಮಂಗಳೂರು-ಬೆಂಗಳೂರು, ಬೆಳಗಾವಿ- ಬೆಂಗಳೂರು ನಡುವೆ ವಂದೇ ಭಾರತ್ ರೈಲು ಓಡಿಸುವಂತೆ ಬೇಡಿಕೆ ಬರುತ್ತಿದ್ದು, ಶೀಘ್ರವೇ ಆ ರೈಲುಗಳಿಗೆ ಚಾಲನೆ ನೀಡಲಾಗುವುದು’ ಎಂದು ಹೇಳಿದರು.

‘ವಿದ್ಯುದ್ದೀಕರಣದಿಂದ ರೈಲ್ವೆಗೆ ಪ್ರತಿ ವರ್ಷ ಸುಮಾರು ₹ 18 ಸಾವಿರ ಕೋಟಿ ಉಳಿತಾಯ ಆಗುತ್ತಿದೆ. ಹೀಗಾಗಿ, ಪ್ರತಿಯೊಂದು ಹೊಸ ರೈಲು ಹಳಿಯನ್ನು ವಿದ್ಯುದ್ದೀಕರಣದ ಮೂಲಕ ಆರಂಭಿಸುತ್ತಿದ್ದೇವೆ’ ಎಂದರು.

ಇದನ್ನೂ ನೋಡಿ: ಕೊಠಡಿ ನಿರ್ಮಿಸಿ ಎಂದ ಶಿಕ್ಷಕ |ಸನ್ಮಾನಿಸುವ‌ ಜಾಗದಲ್ಲಿ ಅಮಾನತಿನ ಬಹುಮಾನ Janashakthi Media

Donate Janashakthi Media

Leave a Reply

Your email address will not be published. Required fields are marked *