ಅಪ್ರಾಪ್ತ ಬಾಲಕಿ ಮೇಲೆ 6 ಮಂದಿ ಸಾಮೂಹಿಕ ಅತ್ಯಾಚಾರ

Please follow and like us:
ಬೆಳಗಾವಿ: 15 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಆಕೆಯ ಸ್ನೇಹಿತ ಸೇರಿ 6 ಮಂದಿ ಸಾಮೂಹಿಕವಾಗಿ ಬಲಾತ್ಕಾರ ಎಸಗಿದ ಘಟನೆ ಜಿಲ್ಲೆಯ ಕಾಕತಿಯಲ್ಲಿ ನಡೆದಿದ್ದೂ, ಅವರು ಮೊಬೈಲ್‌ನಲ್ಲಿ ಇದರ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಬಳಿಕ, ಆರೋಪಿಗಳು ಈ ವಿಡಿಯೋ ತೋರಿಸಿ, ಬ್ಲ್ಯಾಕ್ ಮೇಲ್ ಮಾಡಿ, ಪದೇ ಪದೆ ಆಕೆಯ ಮೇಲೆ ಅತ್ಯಾಚಾರಎಸಗಿದ್ದಾರೆ.

ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಇಬ್ಬರು ಬಾಲಕರು ಸೇರಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ. ಒಂದು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ನಡೆದ 2ನೇ ಗ್ಯಾಂಗ್ ರೇಪ್‌ ಪ್ರಕರಣ ಇದಾಗಿದೆ.

ಕಳೆದ ಡಿಸೆಂಬರ್‌ನಿಂದ ಬಲಾತ್ಕಾರ

ಕಳೆದ ಡಿಸೆಂಬರ್‌ ನಲ್ಲಿ ಈ ಬಾಲಕಿಯ ಸ್ನೇಹಿತನಾಗಿರುವ ಓರ್ವ ಆರೋಪಿ, ಆಕೆಯನ್ನು ಪುಸಲಾಯಿಸಿ ಕಾಕತಿ ಗುಡ್ಡಕ್ಕೆ ಕರೆದೊಯ್ದಿದ್ದ. ಅಲ್ಲಿಗೆ ತೆರಳಿದ ಬಳಿಕ, ಮತ್ತೆ ಐವರು ಸ್ನೇಹಿತರನ್ನು ಕರೆಸಿಕೊಂಡಿದ್ದ. ಬಳಿಕ, ಆರು ಜನ ಕಾಮುಕರು ಸೇರಿ ಬಾಲಕಿ ಮೇಲೆ ಸಾಮೂಹಿಕವಾಗಿ ಬಲಾತ್ಕಾರವೆಸಗಿದ್ದರು. ಅಲ್ಲದೆ, ಈ ಕೃತ್ಯವನ್ನು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದರು.

ಇದನ್ನೂ ಓದಿ: ಮಂಡ್ಯ| ವೈದ್ಯರ ನಿರ್ಲಕ್ಷ್ಯಕ್ಕೆ 7 ವರ್ಷದ ಮಗು ಸಾವು

ಬಳಿಕ, ಜನವರಿಯಲ್ಲಿ ಮತ್ತೆ ಕರೆ ಮಾಡಿ, ವಿಡಿಯೋ ತೋರಿಸಿ, ಬ್ಲ್ಯಾಕ್‌ಮೇಲ್‌ ಮಾಡಿ, ಮತ್ತೆ ಆಕೆಯ ಮೇಲೆ ಸಾಮೂಹಿಕವಾಗಿ ಬಲಾತ್ಕಾರ ಎಸಗಿದ್ದರು. ಆ ನಂತರವೂ ಬಾಲಕಿಗೆ ಈ ವಿಡಿಯೋ ತೋರಿಸಿ, ಬ್ಲ್ಯಾಕ್‌ಮೇಲ್‌ ಮಾಡಿ, ಪದೇ ಪದೆ ಬಲಾತ್ಕಾರ ಎಸಗಿದ್ದರು. ಇದರಿಂದ ಬೇಸತ್ತ ಬಾಲಕಿ, ತಾಯಿಗೆ ವಿಷಯ ತಿಳಿಸಿದ್ದಾಳೆ.

ಪೋಷಕರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರು ಅಪ್ರಾಪ್ತ ಬಾಲಕರು ಸೇರಿದಂತೆ ಐ‍ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮತ್ತೋರ್ವ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಈ ಕುರಿತು ಎಪಿಎಂಸಿ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಭೂಷಣ ಗುಲಾಬರಾವ್‌ ಬೊರಸೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದನ್ನೂ ನೋಡಿ: ಕಾನೂನು ಅರಿವು | ಕೌಟುಂಬಿಕ ಹಿಂಸಾಚಾರದಿಂದ ಮಹಿಳೆ ತನ್ನನ್ನು ರಕ್ಷಿಸಿಕೊಳ್ಳುವುದು ಹೇಗೆ? ದೂರು ದಾಖಲಿಸುವುದು ಹೇಗೆ?

Please follow and like us:
Donate Janashakthi Media

Leave a Reply

Your email address will not be published. Required fields are marked *