ಬಳ್ಳಾರಿ: ಡಿವೈಎಫ್‌ಐ ಸಂಘಟನೆಯ ಸಂಘಟನೆಯ ಕಾರ್ಯಕರ್ತ ಆಲಂ ಬಾಷ ಎಂಬುವವರು ಆರ್‌ಟಿಐ ಮಾಹಿತಿ ಕೆಳಿದಕ್ಕೆ ಮಾಲಿನ್ಯ ನಿಯಂತ್ರಣಾ ಮಂಡಳಿಯ ಪರಿಸರ ಅಧಿಕಾರಿ ಸಿದ್ದೇಶ್ವರ ಬಾಬು ವಾಟ್ಸ್‌ಆ್ಯಪ್ ಕರೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿ ಸಂಘಟನೆ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ಡಿವೈಎಫ್‌ಐ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಯರ‍್ರಿಸ್ವಾಮಿ ಮಾತನಾಡಿ, ‘ಕಾರೆಕಲ್ಲು ಮತ್ತು ಶಿಡಿಗಿನಮೊಳ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಕಾರ್ಖಾನೆಗಳಿಂದ ಸುತ್ತಲ ಕೃಷಿ ಜಮೀನುಗಳ ಮೇಲೆ ಆಗುತ್ತಿರುವ ಪರಿಣಾಮದ ಕುರಿತು ಸಂಘಟನೆಯ ಕಾರ್ಯಕರ್ತ ಆಲಂ ಬಾಷ ಎಂಬುವವರು ದೂರು ನೀಡಿದ್ದರು. ಜತೆಗೆ ಕೆಲವು ಮಾಹಿತಿಯನ್ನು ಆರ್‌ಟಿಐನಲ್ಲಿ ಕೇಳಿದ್ದರು. ಇದರಿಂದ ಆಕ್ರೋಶಗೊಂಡ ಮಾಲಿನ್ಯ ನಿಯಂತ್ರಣಾ ಮಂಡಳಿ ಪರಿಸರ ಅಧಿಕಾರಿ ಸಿದ್ದೇಶ್ವರ ಬಾಬು ವಾಟ್ಸ್‌ಆ್ಯಪ್ ಕರೆ ಮಾಡಿ ನಿಂದಿಸಿದ್ದಾರೆ’ ಎಂದು ಆರೋಪಿಸಿದರು.
ಇದನ್ನೂ ಓದಿ: ತೆಲಂಗಾಣ |ನೌಕಾಪಡೆ-ಸೇನೆ ಪರೀಕ್ಷೆಗೆ ಸಿದ್ದತೆ ಮಾಡುತ್ತಿರುವ ಯುವಕರಿಗೆ ಸ್ವಯಂ ಕ್ರೀಡಾ ತರಬೇತಿ ನೀಡುತ್ತಿರುವ ದೈಹಿಕ ಶಿಕ್ಷಕ
