ಯುವ ನೀತಿಯೋ, ಬಿಜೆಪಿ ನೀತಿಯೋ

ಬೆಂಗಳೂರು: 2021ರ ಕರ್ನಾಟಕ ಯುವ ನೀತಿ ರೂಪಿಸಲು ರಾಜ್ಯ ಸರ್ಕಾರವು 13 ಸದಸ್ಯರ ತಜ್ಞರ ಸಮಿತಿಯನ್ನು ರಚಿಸಿದೆ. ಈ ಸಮಿತಿಯಲ್ಲಿ ಹೆಚ್ಚಿನ ಸದಸ್ಯರು ಬಿಜೆಪಿಯೊಂದಿಗೆ ಸಂಪರ್ಕ ಹೊಂದಿರುವವರು ಮತ್ತು ಕೆಲವರು ಮಾಜಿ ಸಚಿವರ ಮಕ್ಕಳಾಗಿದ್ದಾರೆ.

ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪಕಾರ್ಯದರ್ಶಿ ಗುರುವಾರ ಹೊರಡಿಸಿದ ಸರ್ಕಾರಿ ಆದೇಶದ ಪ್ರಕಾರ, ಸ್ವಾಮಿ ವಿವೇಕಾನಂದ ಯುವ ಚಳವಳಿಯ ಸಂಸ್ಥಾಪಕ, ಸಮಿತಿಯು ಯುವ ನೀತಿಯ ನೇತೃತ್ವ ವಹಿಸಲಿದೆ.

ಶಾಲಿನಿ ರಜನೀಶ್ (ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ), ಆಯುಕ್ತರು (ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ), ಪ್ರತಾಪ್ ಲಿಂಗಯ್ಯ (ಎನ್‌ಎಸ್‌ಎಸ್ ಅಧಿಕಾರಿ) ಮತ್ತು ಎಂಎನ್ ನಟರಾಜ್ (ನಿರ್ದೇಶಕರು, ನೆಹರು ಯುವ ಕೇಂದ್ರ) ಸರ್ಕಾರದ ಪ್ರತಿನಿಧಿಗಳಾಗಲಿದ್ದಾರೆ.

ಸಮಿತಿಯಲ್ಲಿ ಬಿಜೆಪಿ ಬೆಂಬಲಿಗರು: ಸಮಿತಿಯ ಸದಸ್ಯರಲ್ಲಿ ಪ್ರಬಲ ಬಿಜೆಪಿ ಬೆಂಬಲಿಗ ಮತ್ತು ಬಲಪಂಥೀಯ ವಾಗ್ಮಿ, ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಪುತ್ರ ಸಂಕಲ್ಪ ಶೆಟ್ಟರ್, ದಿವಂಗತ ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಪುತ್ರಿ ಐಶ್ವರ್ಯ ದಿವೇಶ್ ಸದಸ್ಯರಾಗಿದ್ದಾರೆ.

ಚನ್ನಮಲ್ಲಿಕಾರ್ಜುನ ಬಿ ಪಾಟೀಲ್ ಬಿಜೆಪಿ ಕರ್ನಾಟಕ ಸಾಮಾಜಿಕ ಮಾಧ್ಯಮ ತಂಡದ ಸಂಚಾಲಕ ಮತ್ತು ವಿನೋದ್ ಕೃಷ್ಣಮೂರ್ತಿ ಪ್ರಸ್ತುತ ಸಾಮಾಜಿಕ ಮಾಧ್ಯಮ ಸಂಚಾಲಕರಾಗಿದ್ದಾರೆ, ಕೆ ನಾಗಣ್ಣ ಗೌಡ ಅವರು ಈ ಹಿಂದೆ ಮಂಡ್ಯ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ಹಾಗೂ ಕ್ರೀಡಾ ಸಚಿವ ನಾರಾಯಣ ಗೌಡ ಕೂಡ ಮಂಡ್ಯದವರಾಗಿದ್ದಾರೆ. ಈ ಪಟ್ಟಿಯನ್ನು ಪಕ್ಷದ ಕಚೇರಿಯಿಂದ ಕಳುಹಿಸಲಾಗಿದೆ ಎಂದು ಜನಪರ ಸಂಘಟನೆಗಳು ಆರೋಪಿಸುವೆ.

ಯುವ ನೀತಿಯೋ, ಬಿಜೆಪಿ ನೀತಿಯೋ : ರಾಜ್ಯ ಸರಕಾರ ನೇಮಿಸಿರುವ ಸಮಿತಿಯಲ್ಲಿ ಬಿಜೆಪಿ ಹಾಗೂ ಸಂಘಪರಿವಾರದ ಬೆಂಬಲಿಗರೇ ಹೆಚ್ಚಾಗಿದ್ದಾರೆ. ಇದು ಯುವ ನೀತಿಗಾಗಿ ರಚಿಸಿರುವ ಸಮಿತಿಯೋ ಅಥವಾ ಬಿಜೆಪಿ ನೀತಿಗಳನ್ನು ಜಾರಿ ಮಾಡಲು ರಚಿಸಿರುವ ಸಮಿತಿಯೋ ಎಂಬ ಪ್ರಶ್ನೆಗಳೆದ್ದಿವೆ.

ಹಿಂದೂತ್ವ ಸ್ಥಾಪನೆಯ ಉದ್ದೇಶ ಹೊಂದಿರುವ ಇವರು ರಾಜ್ಯದ ಯುವಜನರಿಗೆ ನೀತಿ, ಮಾರ್ಗದರ್ಶನ, ಸಲಹೆ ನೀಡಲು ಸಾಧ್ಯವೆ? ಎಂದು ಜನಪರ ಚಳುವಳಿಗಳು ಪ್ರಶ್ನಿಸುತ್ತಿವೆ. ಈ ಸಮಿತಿಯಿಂದ ಅಲ್ಪ ಸಂಖ್ಯಾತ ಸಮುದಾಯ ಯುವಕರಿಗೆ, ಶೋಷಿತ ಸಮುದಾಯದ ಯುವಕರನ್ನು ಗುರಿಯಾಗಿಸಿ ನೀತಿಗಳನ್ನು ರೂಪಿಸುವ ಸಾಧ್ಯತೆ ಇದೆ. ಈ ಸಮಿತಿಯಲ್ಲಿರುವವರು ನೈತಿಕ ಪೊಲೀಸ್‌ಗಿರಿ, ಲವ್ ಜಿಹಾದ್ ಎಂದೆಲ್ಲ ಬೊಬ್ಬ ಇಡುತ್ತಿರುವುದನ್ನು ರಾಜ್ಯದ ಜನತೆ ಗಮನಿಸಿದ್ದಾರೆ. ಹಿಂಸೆ, ದ್ವೇಷ, ಧರ್ಮದ ಅಫೀಮಿನಲ್ಲಿರುವ ಈ ಸಮಿತಿ ಸದಸ್ಯರು ಕೋಮುಗಲಬೆ ಎಬ್ಬಿಸುವ ನೀತಿಗಳನ್ನು ತರುವ ಅಪಾಯವಿದೆ. ಹಾಗಾಗಿ ಈ ಸಮಿತಿಯನ್ನು‌ ವಿಸರ್ಜಿಸಿ, ಜನಪರ ಚಳುವಳಿಯಲ್ಲಿ ತೊಡಗಿರುವವರನ್ನು ಒಳಗೊಂಡಂತೆ ಸಮಿತಿ ರಚಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.

ಪಕ್ಷದ ಕಾರ್ಯಕರ್ತರು ಅಥವಾ ಮಂತ್ರಿಗಳ ಮಕ್ಕಳನ್ನು ಸಮಿತಿಗೆ ಸೇರಿಸುವ ಬದಲು, ಶಿಕ್ಷಣ, ಮಹಿಳಾ ಸಬಲೀಕರಣ, ನೀರು, ಸ್ಟಾರ್ಟ್‌ಅಪ್ ಮತ್ತು ಇತರ ಕ್ಷೇತ್ರಗಳಲ್ಲಿ ಅಸಾಧಾರಣವಾಗಿ ಉತ್ತಮ ಕೆಲಸ ಮಾಡುತ್ತಿರುವ ಅನೇಕ ಯುವಕರು ಇದ್ದಾರೆ. ಅವರನ್ನೊಳಗೊಂಡಿದ್ದರೆ ಸಮಿತಿಗೆ ಹೆಚ್ಚಿನ ಅರ್ಥವನ್ನು ನೀಡುತ್ತಿತ್ತು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಹಾಗಾಗಿ ಸರಕಾರ ಈ ಸಮಿತಿಯನ್ನು ಇನ್ನೊಂದು ಬಾರಿ ಪರಿಶೀಲಿಸಿ ಅರ್ಹ ಯುವಕರನ್ನು ಸಮಿತಿಗೆ ನೇಮಿಸಿಕೊಳ್ಳಲು ಮುಂದಾಗಬೇಕಿದೆ.

Donate Janashakthi Media

Leave a Reply

Your email address will not be published. Required fields are marked *