ನಮ್ಮ ಮೆಟ್ರೋ: ಜೂನ್ ಅಂತ್ಯಕ್ಕೆ ಹಳದಿ ಮಾರ್ಗ ಸಂಚಾರ ಆರಂಭ

ಬೆಂಗಳೂರು: ಇದೇ ಜೂನ್ ಅಂತ್ಯಕ್ಕೆ ನಗರದ ದಕ್ಷಿಣವನ್ನು ಸಂಪರ್ಕಿಸುವ ನಮ್ಮ ಮೆಟ್ರೋದ ಬಹು ನಿರೀಕ್ಷಿತ ಹಳದಿ ಮಾರ್ಗವು ವಾಣಿಜ್ಯ ಸಂಚಾರ ಆರಂಭಿಸುವುದು ಬಹುತೇಕ ಖಚಿತವಾಗಿದೆ. ನಮ್ಮ

ಚಾಲಕ ರಹಿತ ಚಾಲನಾ ಇಂಜಿನ್ ಹೊಂದಿರುವ ಮೆಟ್ರೋ ಹಳದಿ ಮಾರ್ಗದಲ್ಲಿ ಬಹುತೇಕ ಎಲ್ಲಾ ಪರೀಕ್ಷೆಗಳು ಪೂರ್ಣಗೊಂಡಿದ್ದು, ಜೂನ್ ಅಂತ್ಯದೊಳಗೆ ಸಂಚಾರ ಆರಂಭಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ಈಗಾಗಲೇ ಹಳದಿ ಮಾರ್ಗದ ಕಾರ್ಯಾಚರಣೆಗೆ ಅಗತ್ಯವಿರುವ ಮೂರು ಭೋಗಿಗಳು ಪಶ್ಚಿಮ ಬಂಗಾಳದ ಟಿಟಾಗರ್‌ ಸಂಸ್ಥೆಯಿಂದ ಹೊರಟಿದ್ದು, ಮೇ 15 ರಂದು ಬೆಂಗಳೂರಿಗೆ ಆಗಮಿಸಲಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಎಲ್ಲಾ ಆರು ಬೋಗಿಗಳನ್ನು ರೈಲು ಸೆಟ್ ನಲ್ಲಿ ಜೋಡಿಸಲಾಗುವುದು.

ಇದನ್ನೂ ಓದಿ: ವಿಶಿಷ್ಟ ಒಳನೋಟಗಳ ಬರಹ ಗುಚ್ಛ- ʼಮೊಳಕೆ ʼ

ಇನ್ನು ಹಳದಿ ಮಾರ್ಗವು ಬಸವನಗುಡಿಯ ರಾಷ್ಟ್ರೀಯ ವಿದ್ಯಾಲಯ (ಆರ್ ವಿ) ರಸ್ತೆ ನಿಲ್ದಾಣದಿಂದ ಪ್ರಾರಂಭವಾಗಿ ಸಿಲ್ಕ್ ಬೋರ್ಡ್, ಜಯದೇವ ಆಸ್ಪತ್ರೆಯ ಮೂಲಕ ಬೊಮ್ಮಾಸಂದ್ರದವರೆಗೆ ಸಂಪರ್ಕ ಸಾಧಿಸಲಿದ್ದು, ಒಟ್ಟು 19.15 ಕಿಮೀ ಉದ್ದದ ಮಾರ್ಗ ಹೊಂದಿರಲಿದೆ.

ಹಳದಿ ಮಾರ್ಗದಲ್ಲಿ 20 – 25 ನಿಮಿಷಗಳ ಆವರ್ತನದಲ್ಲಿ ಸದ್ಯಕ್ಕೆ ಐದು ನಿಲ್ದಾಣದೊಂದಿಗೆ ವಾಣಿಜ್ಯ ಸಂಚಾರ ನಡೆಯಲಿದೆ. ಸದ್ಯ ಮೂರು ರೈಲುಗಳ ಮೂಲಕ ವಾಣಿಜ್ಯ ಸಂಚಾರ ನಡೆಸುವುದಕ್ಕೆ ತೀರ್ಮಾನಿಸಿರುವುದರಿಂದ ಜೂನ್‌ ಅಂತ್ಯಕ್ಕೆ ಕಾರ್ಯಾಚರಣೆ ಆರಂಭವಾಗುವ ಎಲ್ಲಾ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ನೋಡಿ: ಪುಸ್ತಕ ಬಿಡುಗಡೆ |ಒಕ್ಕೂಟವೋ ತಿಕ್ಕಾಟವೂ | ಬಿ. ಶ್ರೀಪಾದ್‌ ಭಟ್

Donate Janashakthi Media

Leave a Reply

Your email address will not be published. Required fields are marked *