ಮುಸ್ಲಿಂ ಸಮುದಾಯದ ವಿರುದ್ಧ ವಿವಾದಾತ್ಮಕ ಹೇಳಿಕೆ| ‌ನ್ಯಾ.ಶೇಖರ್ ಕುಮಾರ್ ಯಾದವ್ ವಿಚಾರಣೆಗೆ ಹಾಜರಾಗುವಂತೆ ಸುಪ್ರೀಂ ಕೋರ್ಟ್ ಸೂಚನೆ

ಅಲಾಹಾಬಾದ್ : ಅಲಾಹಾಬಾದ್ ಹೈಕೋರ್ಟ್‌ ನ್ಯಾಯಮೂರ್ತಿ ಶೇಖರ್ ಕುಮಾರ್ ಮುಸ್ಲಿಂ ಸಮುದಾಯದ ವಿರುದ್ಧ ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ವಿಚಾರಣೆಗೆ ಮುಂದಿನ ವಾರ ಹಾಜರಾಗುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಶೇಖರ್ 

ಹಿಂದೂ ಬಲಪಂಥೀಯ ಸಂಘಟನೆಯಾದ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕಾನೂನು ಘಟಕ ಡಿಸೆಂಬರ್ 8 ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾ.ಯಾದವ್ ಅವರು ಮಾಡಿದ್ದ ಭಾಷಣ ವಿವಾದ ಸೃಷ್ಟಿಸಿತ್ತು.‌

ಏಕರೂಪ ನಾಗರಿಕ ಸಂಹಿತೆ ಕುರಿತಂತೆ ನೀಡಿದ್ದ ಉಪನ್ಯಾಸದ ವೇಳೆ ಅವರು ಬಹುಸಂಖ್ಯಾತರ ಆಶಯದಂತೆ ಭಾರತ ಕೆಲಸ ಮಾಡಲಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಲ್ಲದೆ ಮುಸ್ಲಿಮರ ವಿರುದ್ಧ ಅವಹೇಳನಕಾರಿಯಾದ ಕ‌ಮುಲ್ಲಾ ಎಂಬ ಪದ ಕೂಡ ಬಳಸಿದ್ದರು. ಎರಡು ದಿನಗಳ ನಂತರ ‘ಬಾ‌ ಅಂಡ್ ಬೆಂಚ್ ‘ ಜಾಲತಾಣಕ್ಕೆ ಮಾಹಿತಿ ನೀಡಿದ ಸುದ್ದಿಮೂಲಗಳು ಸುಪ್ರೀಂ ಕೋರ್ಟ್‌ನ ಆಡಳಿತಾಂಗ ವಿವಾದವನ್ನು ಗಂಭೀರವಾಗಿ ಪರಿಗಣಿಸಿದ್ದು ಅಲಾಹಾಬಾದ್‌ ಹೈಕೋರ್ಟ್‌ನ ವಿವರಣೆ ಕೇಳಿದೆ ಎಂದಿದ್ದವು.

ಇದರ ಬೆನ್ನಿಗೇ ಹೇಳಿಕೆ ನೀಡಿರುವ ಹಾಲಿ ನ್ಯಾಯಮೂರ್ತಿ ಯಾದವ್ ಅವರಿಗೆ ವಾಗಂಡನೆ ವಿಧಿಸಬೇಕು ಜೊತೆಗೆ ನ್ಯಾಯಾಂಗ ಕರ್ತವ್ಯಗಳಿಂದ ಅವರನ್ನು ವಿಮುಖರನ್ನಾಗಿ ಮಾಡಬೇಕು ಎಂಬ ಕೂಗು ಕೇಳಿ ಬಂದಿತ್ತು.

ಇದನ್ನೂ ಓದಿ : ತಮ್ಮ ವೈಫಲ್ಯಗಳನ್ನು ಮುಚ್ಚಾಕಲು ನೆಹರೂರನ್ನು ಟೀಕಿಸುತ್ತಿರುವ ಮೋದಿ: ಕಾಂಗ್ರೆಸ್ ಆರೋಪ

ಯಾದವ್ ಅವರ ವಿರುದ್ಧ ಆಂತರಿಕ ತನಿಖೆಗೆ ಒತ್ತಾಯಿಸಿ ನ್ಯಾಯಾಂಗದ ಹೊಣೆಗಾರಿಕೆ ಪರವಾದ ಆಂದೋಲನ ಕ್ಯಾಂಪೈನ್ ಫಾರ್ ಜುಡಿಷಿಯಲ್ ಅಕೌಂಟಬಿಲಿಟಿ(ಸಿಜೆಎಆರ್) ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿಗೆ ಕಳೆದ ವಾರ ಪತ್ರ ಬರೆದಿದೆ.

ಗಮನಾರ್ಹ ಸಂಗತಿ ಎಂದರೆ ಅಲಹಾಬಾದ್ ಹೈಕೋರ್ಟ್ ಡಿಸೆಂಬರ್ 12 ರಂದು ನಾ ಯಾದವ್ ಅವರ ರೋಸ್ಮರ್‌ನಲ್ಲಿ (ಪ್ರಕರಣಗಳನ್ನು ವಿಷಯಾಧಾರಿತವಾಗಿ ನಿರ್ದಿಷ್ಟ ನ್ಯಾಯಮೂರ್ತಿಗಳ ಮುಂದೆ ವಿಚಾರಣೆಗೆ ಇರಿಸುವ ಪಟ್ಟಿ) ಪ್ರಮುಖ ಬದಲಾವಣೆಗಳನ್ನು ಮಾಡಿತ್ತು. ಇಂದಿನಿಂದ (ಡಿಸೆಂಬರ್ 16) ಜಾರಿಗೆ ಬರಲಿರುವ ರೋಸ್ಮರ್‌ ಬದಲಾವಣೆಯ ಪ್ರಕಾರ, ನ್ಯಾಯಮೂರ್ತಿ ಯಾದವ್ ಅವರು ಮೊದಲ ಮೇಲ್ಮನವಿಗಳನ್ನು ಮಾತ್ರ ಆಲಿಸಲಿದ್ದಾರೆ – ಜಿಲ್ಲಾ ನ್ಯಾಯಾಲಯಗಳು ನೀಡಿದ ಆದೇಶಗಳಿಂದ ಉದ್ಭವಿಸುವ ಪ್ರಕರಣಗಳನ್ನು ಅದು ಕೂಡ 2010 ರವರೆಗೆ ಸಲ್ಲಿಕೆಯಾಗಿದ್ದ ಪ್ರಕರಣಗಳನ್ನು ಮಾತ್ರವೇ ಅವರು ಆಲಿಸಲಿದ್ದಾರೆ ಎಂದು ಉಚ್ಚ ನ್ಯಾಯಾಲಯ ತಿಳಿಸಿತ್ತು.

ಮತ್ತೊಂದೆಡೆ ಹಿರಿಯ ನ್ಯಾಯವಾದಿ ಹಾಗೂ ಸಂಸತ್ ಸದಸ್ಯರೂ ಆಗಿರುವ ಕಪಿಲ್ ಸಿಬಲ್ ನೇತೃತ್ವದಲ್ಲಿ ವಿವಿಧ ಸಂಸದರು ನಾ. ಶೇಖರ್ ಅವರ ವಿರುದ್‌ದ ವಾಗಂಡನೆ ನಿರ್ಣಯವನ್ನು ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ಅವರಿಗೆ ಸಲ್ಲಿಸಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ 55 ಸಂಸದರು ಸಹಿ ಹಾಕಿರುವ ಈ ನಿರ್ಣಯದ ವಿಚಾರವಾಗಿ ಚರ್ಚೆ ನಡೆಯುವ ಸಾಧ್ಯತೆಗಳಿವೆ.

ಇದನ್ನೂ ನೋಡಿ : ಒಂದು ದೇಶ ಒಂದು ಚುನಾವಣೆ ಸರ್ವಾಧಿಕಾರಕ್ಕೆ ಮುನ್ನುಡಿಯೇ? – ಕೃಷ್ಣ ಪ್ರಸಾದ್ Janashakthi Media

Donate Janashakthi Media

Leave a Reply

Your email address will not be published. Required fields are marked *