‘ಯುವ ಕಾರ್ಮಿಕರ ಪ್ರಜ್ಞೆ ಕೆಡಿಸುವುದನ್ನು ತಡೆಯಲು ಈ ಪುಸ್ತಕ ಬರೆದೆ’: ಜಾರ್ಜ್ ಮಾವ್ರಿಕೊಸ್

– ವಸಂತರಾಜ ಎನ್.ಕೆ

WFTU ನ ಗೌರವ ಅಧ್ಯಕ್ಷರಾಗಿರುವ ಮಾವ್ರಿಕೊಸ್ ಡಿಸೆಂಬರ್ 2 ರಿಂದ 7 ರ ವರೆಗೆ ಭಾರತದ 6 ನಗರಗಳ ಪ್ರವಾಸದಲ್ಲಿದ್ದರು. ಮಾವ್ರಿಕೊಸ್ ಗ್ರೀಸ್ ದೇಶದ ಅಗ್ರಣಿ ಕಾರ್ಮಿಕ ನಾಯಕರಾಗಿದ್ದು, ಕಳೆದ 2 ದಶಕಕ್ಕೂ ಹೆಚ್ಚಿನ ಕಾಲ ಉಪಾಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಕ್ರಾಂತಿಕಾರಿ ಜಾಗತಿಕ ಕಾರ್ಮಿಕ ಚಳುವಳಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರು ಇತ್ತೀಚೆಗೆ ಬರೆದಿರುವ “Critical Notes on the History of the World Trade Union Movement : Issues of Tactics and Strategy” (ಜಾಗತಿಕ ಟ್ರೇಡ್ ಯೂನಿಯನ್ ಚಳುವಳಿಯ ಕುರಿತು ವಿಮರ್ಶಾತ್ಮಕ ಟಿಪ್ಪಣಿಗಳು: ವ್ಯೂಹ ಮತ್ತು ತಂತ್ರದ ಸಂಗತಿಗಳು) ಪುಸ್ತಕವನ್ನು ಪರಿಚಯಿಸುವುದೂ ಸಭೆಯ ಮತ್ತು ಅವರ ಪ್ರವಾಸದ ಉದ್ದೇಶವಾಗಿತ್ತು. ಬೆಂಗಳೂರಿನಲ್ಲಿ ಡಿಸೆಂಬರ್ 5ರಂದು ನಡೆದ  ಸಭೆಯನ್ನು WFTU ಸಂಯೋಜಿತ ಭಾರತೀಯ ಯೂನಿಯನುಗಳುಕೇಂದ್ರೀಯ ಟ್ರೇಡ್ ಯೂನಿಯನುಗಳಾದ AITUC, CITU, AIUTUC, AICCTU, TUCC, ಹಾಗೂ  ವಿಭಾಗವಾರು ಫೆಡರೇಶನುಗಳಾದ AIIEA, KPBEF, BEFI, BSNLEU, AISGEF ಸಂಘಟಿಸಿದ್ದವು. ಅವರು ಸಭೆಯಲ್ಲಿ “ಕಾರ್ಮಿಕ ವರ್ಗದ ಮುಂದಿರುವ ಪ್ರಸಕ್ತ ಅಂತರ್ರಾಷ್ಟ್ರೀಯ ಸವಾಲುಗಳು” ಎಂಬ ವಿಷಯದ ಬಗ್ಗೆ ಮಾತನಾಡಿದರು. ಪ್ರಜ್ಞೆ

ಸಾಮ್ರಾಜ್ಯಶಾಹಿ ಮತ್ತು ಬಂಡವಾಳಶಾಹಿ ಶಕ್ತಿಗಳು ಕಾರ್ಮಿಕರ ಅದರಲ್ಲೂ ಯುವ ಕಾರ್ಮಿಕರ ಪ್ರಜ್ಞೆಯನ್ನು ಕೆಡಿಸಲು, ಅವರ ದಾರಿ ತಪ್ಪಿಸಲು ಸತತವಾಗಿ ಪ್ರಯತ್ನಿಸುತ್ತಿದೆ. ಇದನ್ನು ತಡೆಯಲು ಕ್ರಾಂತಿಕಾರಿ ವಿಶ್ವ ಟ್ರೇಡ್ ಯೂನಿಯನ್ ಇತಿಹಾಸ ಬರೆದೆ ಎಂದು ಜಾರ್ಜ್ ಮಾವ್ರಿಕೊಸ್ ಬೆಂಗಳೂರಿನಲ್ಲಿ ಹೇಳಿದರು. ಅವರು ವಿಶ್ವ ಟ್ರೇಡ್ ಯೂನಿಯನ್ ಫೇಡರೇಶನ್ (WFTU) ಜತೆ ಸಂಯೋಜಿತವಾಗಿರುವ ಭಾರತೀಯ ಟ್ರೇಡ್ ಯೂನಿಯನುಗಳು ಡಿಸೆಂಬರ್ 5ರಂದು ಬೆಂಗಳೂರಿನ ಗಾಂಧೀಭವನದಲ್ಲಿ ಸಂಘಟಿಸಿದ್ದ ಸಭೆಯಲ್ಲಿ ಮಾತನಾಡುತ್ತಿದ್ದರು. ಅವರು “ಕಾರ್ಮಿಕ ವರ್ಗದ ಮುಂದಿರುವ ಪ್ರಸಕ್ತ ಅಂತರ್ರಾಷ್ಟ್ರೀಯ ಸವಾಲುಗಳು” ಎಂಬ ವಿಷಯದ ಬಗ್ಗೆ ಮಾತನಾಡುತ್ತಿದ್ದರು. ಪ್ರಜ್ಞೆ

ಇದನ್ನೂ ಓದಿ: ವಿದ್ಯಾರ್ಥಿಗಳ ಹೋರಾಟ: ಪ್ರಾಂಶುಪಾಲ ಮತ್ತು ಮೇಲ್ವಿಚಾರಕದ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ

WFTU ನ ಗೌರವ ಅಧ್ಯಕ್ಷರಾಗಿರುವ ಮಾವ್ರಿಕೊಸ್ ಡಿಸೆಂಬರ್ 3 ರಿಂದ 7 ರ ವರೆಗೆ ಭಾರತದ ಐದು ನಗರಗಳ ಪ್ರವಾಸದಲ್ಲಿದ್ದರು. ಮಾವ್ರಿಕೊಸ್ ಗ್ರೀಸ್ ದೇಶದ ಅಗ್ರಣಿ ಕಾರ್ಮಿಕ ನಾಯಕರಾಗಿದ್ದು, ಕಳೆದ 2 ದಶಕಕ್ಕೂ ಹೆಚ್ಚಿನ ಕಾಲ ಉಪಾಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಕ್ರಾಂತಿಕಾರಿ ಜಾಗತಿಕ ಕಾರ್ಮಿಕ ಚಳುವಳಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರು ಇತ್ತೀಚೆಗೆ ಬರೆದಿರುವ “Critical Notes on the History of the World Trade Union Movement : Issues of Tactics and Strategy” (ಜಾಗತಿಕ ಟ್ರೇಡ್ ಯೂನಿಯನ್ ಚಳುವಳಿಯ ಕುರಿತು ವಿಮರ್ಶಾತ್ಮಕ ಟಿಪ್ಪಣಿಗಳು : ವ್ಯೂಹ ಮತ್ತು ತಂತ್ರದ ಸಂಗತಿಗಳು) ಪುಸ್ತಕವನ್ನು ಪರಿಚಯಿಸುವುದೂ ಸಭೆಯ ಮತ್ತು ಅವರ ಪ್ರವಾಸದ ಉದ್ದೇಶವಾಗಿತ್ತು.

‘ಯುವ ಕಾರ್ಮಿಕರ ಪ್ರಜ್ಞೆ ಕೆಡಿಸುವುದನ್ನು ತಡೆಯಲು ಈ ಪುಸ್ತಕ ಬರೆದೆ’: ಜಾರ್ಜ್ ಮಾವ್ರಿಕೊಸ್

 

WFTU ನ ಗೌರವ ಅಧ್ಯಕ್ಷನಾಗಿರುವುದಕ್ಕಿಂತ ಹೆಚ್ಚಾಗಿ, International Workers Institute (IWI ಅಂತರ್ರಾಷ್ಟ್ರೀಯ ಕಾರ್ಮಿಕರ ಸಂಸ್ಥೆ) ಅಧ್ಯಕ್ಷನಾಗಿ ಈ 6 ನಗರಗಳ ಪ್ರವಾಸ ಕೈಗೊಂಡಿದ್ದೇನೆ. ದೆಹಲಿ, ಹೈದರಾಬಾದ್, ತಿರುವನಂತಪುರ ಭೇಟಿ ನೀಡಿ ಇಂದು ಬೆಂಗಳೂರಿಗೆ ಬಂದಿದ್ದೇನೆ. ಮುಂದೆ ಚೆನ್ನೈ ಮತ್ತು ಕೊಲ್ಕತ್ತಾ ಭೇಟಿ ನೀಡಲಿದ್ದೇನೆ, IWI  ಕಾರ್ಮಿಕರ ಅದರಲ್ಲೂ ಯುವ ಕಾರ್ಮಿಕರ ಶಿಕ್ಷಣದ ಬಗ್ಗೆ ಒತ್ತು ನೀಡಲಿದೆ. ಕಾರ್ಮಿಕ ವರ್ಗದ ಪ್ರಸಕ್ತ ಸಮಸ್ಯೆಗಳ ಬಗ್ಗೆ ವಿಚಾರ ಸಂಕಿರಣಗಳು, ಉಪನ್ಯಾಸಗಳು ಝೂಮ್ ಸಂವಾದಗಳನ್ನು ನಡೆಸಲಿದೆ ಎಂದು ಮಾವ್ರಿಕೊಸ್ ಹೇಳಿದರು. ಪ್ರಜ್ಞೆ

ಯುವ ಕಾರ್ಮಿಕರಿಗೆ  ಅವರ ವರ್ಗದ ನಿಜವಾದ ಇತಿಹಾಸ ಹೇಳುವ ಪುಸ್ತಕ

ನಾನು ಲೇಖಕನಲ್ಲ. ಆದರೆ ಈ ವರೆಗೆ ಜಾಗತಿಕ ಕಾರ್ಮಿಕ ವರ್ಗದ ಇತಿಹಾಸದ ಕುರಿತು ಸಮಗ್ರವಾಗಿ ತಿಳಿಸುವ ವಿಲಿಯಂ ಪೋಸ್ಟರ್ ಅವರ ಪುಸ್ತಕವೊಂದೇಯಿತ್ತು. ಪೋಸ್ಟರ್ ಯು.ಎಸ್.ಎ ಯ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಕಾಮಿಂಟರ್ನ್ ಸಮಿತಿಯ ಸದಸ್ಯರಾಗಿದ್ದರು. ಆ ಪುಸ್ತಕದಲ್ಲಿನ ಇತಿಹಾಸ ಸಹ 1968ವರೆಗೆ ಮಾತ್ರವಿತ್ತು. 1968ರ ನಂತರ ಅದರಲ್ಲೂ 1991ರ ನಂತರ ಜಾಗತಿಕವಾಗಿ ಮತ್ತು ಕಾರ್ಮಿಕ ವರ್ಗದ ಚಳುವಳಿಯೊಳಗೆ ಮಹತ್ತರ ಬದಲಾವಣೆಗಳಾಗಿವೆ. ಜಾಗತಿಕ ವರ್ಗ ಶಕ್ತಿಗಳ ಬಲಾಬಲ ಗಮನಾರ್ಹವಾಗಿ ಬದಲಾಗಿದೆ. ಆ ನಂತರದ ಹೋರಾಟಗಳ ಅನುಭವಗಳು, ಜ್ಞಾನ ಮತ್ತು ಒಟ್ಟು ತೀರ್ಮಾನಗಳನ್ನು ದಾಖಲಿಸಿ ಮುಂದಿನ ಪೀಳಿಗೆಗೆ ಧಾರೆ ಎರೆಯುವ ಪುಸ್ತಕ ಬೇಕಾಗಿತ್ತು. ಎಂದು ಮುಂದುವರೆದು ಮಾವ್ರಿಕೊಸ್ ಹೇಳಿದರು. ಪ್ರಜ್ಞೆ

ಅಲ್ಲದೆ, ಸಾಮ್ರಾಜ್ಯಶಾಹಿ ಮತ್ತು ಬಂಡವಾಳಶಾಹಿ ಶಕ್ತಿಗಳು ಇತಿಹಾಸವನ್ನು ತಮ್ಮ ಮೂಗಿನ ನೇರಕ್ಕೆ ಮರುಸೃಷ್ಟಿಸುವ ಪ್ರಯತ್ನ ಮಾಡುತ್ತಿವೆ. ಉದಾಹರಣೆಗೆ ನಮಗೆಲ್ಲ ಗೊತ್ತಿರುವ ಹಾಗೆ ಮೇ 9 (1945) ಸೋವಿಯೆಟ್ ಕೆಂಪು ಸೈನ್ಯ ಬರ್ಲಿನ್ ಪ್ರವೇಶಿಸಿ ಫ್ಯಾಸಿಸ್ಟ್  ಆಳ್ವಿಕೆ ಕೊನೆಯಾದ ದಿನ. ಆದರೆ ಯುರೋ  ಆಳುವ ವರ್ಗಗಳು ಇದನ್ನು ಯುರೋ ಕೂಟ ಸ್ಥಾಪನೆಯ ದಿನವೆಂದು ಫ್ಯಾಸಿಸಂ ನ ವಿನಾಶದಲ್ಲಿ ಕಮ್ಯುನಿಸ್ಟ್ ಪಾತ್ರವನ್ನು ಮರೆಸಲು ಪ್ರಯತ್ನಿಸುತ್ತಿವೆ. ಫ್ಯಾಸಿಸಂ ನಲ್ಲಿ ಎರಡು ವಿಧ – ಕೆಂಪು ಮತ್ತು ಕಪ್ಪು – ಎಂದು ಪ್ರಚಾರ ಮಾಡುತ್ತಾ ಯುವಜನರ ಪ್ರಜ್ಞೆ ಕೆಡಿಸುವ, ಅವರ ದಾರಿ ತಪ್ಪಿಸುವ  ಪ್ರಯತ್ನ ಮಾಡುತ್ತಿವೆ. ಪ್ರಜ್ಞೆ

ಹಾಗಾಗಿ ಯುವ ಕಾರ್ಮಿಕರಿಗೆ  ಅವರ ವರ್ಗದ ನಿಜವಾದ ಇತಿಹಾಸ ಹೇಳುವ ಪುಸ್ತಕ ಬರೆಯಬೇಕಾಯಿತು. ಈ ಪುಸ್ತಕದಲ್ಲಿ ಹಲವು ದೇಶಗಳಲ್ಲಿ, ನಗರಗಳಲ್ಲಿರುವ (ಲಂಡನ್, ಮಾಸ್ಕೊ, ಪ್ಯಾರೀಸ್ ಇತ್ಯಾದಿ) WFTU ದಾಖಲೆಗಳು, ಪ್ರಕಟಣೆಗಳು, ಲೇಖನಗಳನ್ನು ಉಲ್ಲೇಖಿಸಲಾಗಿದೆ. ಈ ಪುಸ್ತಕದ ಬರವಣಿಗೆಯಲ್ಲಿ ಹಿಂದಿನ ಮತ್ತು ಇಂದಿನ WFTU ನಾಯಕತ್ವದ ಹಲವರು ಭಾಗವಹಿಸಿದ್ದಾರೆ, ಇದು ಒಬ್ಬ ವ್ಯಕ್ತಿಯ ಕೃತಿಯಲ್ಲ ಎನ್ನುತ್ತಾ ಈ ಪುಸ್ತಕದ ಉದ್ದೇಶ ಮತ್ತು ಮಹತ್ವದ ಕುರಿತು ವಿವರಿಸಿದರು.

ಕಾರ್ಮಿಕ ವರ್ಗದ ಮುಂದಿರುವ ಸವಾಲುಗಳು

WFTU 1945ರಿಂದಲೇ, ಇಂದೂ ಮತ್ತು ಮುಂದೂ ಸಹ ಸಾಮ್ರಾಜ್ಯಶಾಹಿ ಮತ್ತು ಬಂಡವಾಳಶಾಹಿ ಶಕ್ತಿಗಳ ಶೋಷಣೆ ದಮನಗಳ ವಿರುದ್ಧ ಕಾರ್ಮಿಕರ ಜತೆ ದೃಢವಾಗಿ ನಿಂತಿದೆ. ಹಾಗೆನೇ ಸಾಮ್ರಾಜ್ಯಶಾಹಿ ಮತ್ತು ಬಂಡವಾಳಶಾಹಿ ಶಕ್ತಿಗಳ ಕೈಗೊಂಬೆಯಾದ ಹಳದಿ ಯೂನಿಯನುಗಳ ವಿರುದ್ಧ ಸಹ ನಿಂತಿದೆ. ಇವರು ವಿಯೇಟ್ನಾಂ ಮತ್ತು ಕ್ಯೂಬಾಗಳ ಜನತೆಯ ಕ್ರಾಂತಿಕಾರಿಯ ವಿರುದ್ಧ ನಿಂತಿದ್ದರು. ಚಿಲಿಯಲ್ಲಿ ಅಲೆಂದೆ ವಿರುದ್ಧ ಸರ್ವಾಧಿಕಾರಿ ಪಿನೊಶೆಯ ಜತೆ ನಿಂತಿದ್ದರು. ಇಂದೂ ಸಹ ಪ್ಯಾಲೆಸ್ಟೈನ್ ಜನತೆಯ ವಿರುದ್ಧ ಇಸ್ರೇಲಿ ನರಮೇಧದ ಪರವಾಗಿ ನಿಂತಿದೆ. ಅವರಿಗೆ ಪ್ಯಾಲೆಸ್ಟೈನ್ ಇತಿಹಾಸ ಆರಂಭವಾಗುವುದು ಅಕ್ಟೋಬರ್ 7, 2023ರಂದು.  ಆದರೆ ನಿಜವಾದ ಪ್ಯಾಲೆಸ್ಟೈನ್ ಜನತೆಯ ತಾಯ್ನಾಡಿಗಾಗಿ ಹೋರಾಟದ ಇತಿಹಾಸ 1947ಕ್ಕಿಂತಲೂ ಹಿಂದಿನದು ಎಂದು ನಾವು ಜಾಗತಿಕ ಕಾರ್ಮಿಕ ವರ್ಗದಲ್ಲಿ ಅರಿವು ಮೂಡಿಸಬೇಕು ಎಂದು ಪ್ರಸಕ್ತ ಜಾಗತಿಕ ಸಮಸ್ಯೆಗಳ ಕುರಿತು ಮಾವ್ರಿಕೊಸ್ ವಿವರಿಸಿದರು. ಪ್ರಜ್ಞೆ

ಕಾರ್ಮಿಕ ವರ್ಗ– ಖಾಸಗೀಕರಣ, ಸಾಮಾಜಿಕ ಭದ್ರತೆ ಕಿತ್ತು ಹಾಕುವಿಕೆ, ಎಲ್ಲ ಸಮಸ್ಯೆಗಳಿಗೆ ವಲಸೆ ಕಾರ್ಮಿಕರು ಕಾರಣವೆಂಬ ಭೂತ ಸೃಷ್ಟಿಸಿ ಕಾರ್ಮಿಕರ ಐಕ್ಯತೆ ಮುರಿಯುವುದು ಇತ್ಯಾದಿ – ಹಲವು ರೂಪಗಳಲ್ಲಿ ಬಂಡವಾಳಶಾಹಿ ಶಕ್ತಿಗಳ ದಾಳಿಯನ್ನು ಎದುರಿಸುತ್ತಿದೆ. ರಶ್ಯ, ಚೀನಾಗಳ ವಿರುದ್ಧ  ಸಾಮ್ರಾಜ್ಯಶಾಹಿಗಳ ಪ್ರಾಕ್ಸಿ ಯುದ್ಧವನ್ನು ಜಾಗತಿಕ ಕಾರ್ಮಿಕ ವರ್ಗ ದೃಢವಾಗಿ ವಿರೋಧಿಸಬೇಕು. ಸಾಮ್ರಾಜ್ಯಶಾಹಿಗಳ ಆಕ್ರಾಮಕ ಯುದ್ಧದ ಬೆಲೆ ನಾವು ಇನ್ನಷ್ಟು ದುಸ್ತರ ಆರ್ಥಿಕತೆ ಮತ್ತು ಜೀವನ ವೆಚ್ಚದ ಬೆಲೆಏರಿಕೆಯ ರೂಪದಲ್ಲಿ ತೆರಬೇಕಾಗುತ್ತದೆ ಎಂಬ ಅರಿವು ಮೂಡಿಸಬೇಕು. ನಾಟೋ ಮಿಲಿಟರಿ ಕೂಟ, ಯುರೋ ಕೂಟಗಳ ಆಕ್ರಾಮಕ ನೀತಿಗಳನ್ನು ದೃಢವಾಗಿ ವಿರೋಧಿಸಬೇಕು. ಜಗತ್ತಿನ ಯಾವುದೇ ಪ್ರದೇಶದಲ್ಲಿ ನಡೆಯುವ – ಭಾರತದ ರೈತರ ದೀರ್ಘ ಚಾರಿತ್ರಿಕ ಹೋರಾಟ, ಪ್ಯಾಲೆಸ್ಟೈನರ ಹೋರಾಟ, ಯುರೋಪಿನ ಕಾರ್ಮಿಕರ ಹೋರಾಟ ಇತ್ಯಾದಿ – ಹೋರಾಟಗಳಿಗೆ ಸೌಹಾರ್ದ ಬೆಂಬಲ ವ್ಯಕ್ತ ಪಡಿಸಬೇಕು ಎಂದು ಕಾರ್ಮಿಕ ವರ್ಗದ ಮುಂದಿರುವ ಪ್ರಸಕ್ತ ಅಂತರ್ರಾಷ್ಟ್ರೀಯ ಸವಾಲುಗಳನ್ನು ಇನ್ನಷ್ಟು ವಿಸ್ತರಿಸಿದರು. ಪ್ರಜ್ಞೆ

ಪುಸ್ತಕದ ಕುರಿತು ಸ್ವದೇಶ್ ದೇಬ್ರಾಯ್ ಮಾತನಾಡುತ್ತಾರೆ. ಈ ಪುಸ್ತಕವನ್ನು ಎಲ್ಲ ಭಾಷೆಗಳಲ್ಲಿ ಅನುವಾದ ಮಾಡಿ ಕಾರ್ಮಿಕ ವರ್ಗದ ನಾಯಕತ್ವ ಮಾತ್ರವಲ್ಲ, ಯೂನಿಯನ್ ಕಾರ್ಯಕರ್ತರು ಸಹ ಓದುವಂತೆ ಮಾಡಬೇಕು. ನಾಳೆ ಚೆನ್ನೈನ ಸಭೆಯಲ್ಲಿ ತಮಿಳು ಅನುವಾದ ಬಿಡುಗಡೆಯಾಗುತ್ತಿದೆ. ಕನ್ನಡದಲ್ಲೂ ಇಂತಹ ಪ್ರಯತ್ನಗಳು ನಡೆಯುತ್ತಿವೆ. ಅದು ಸಿದ್ಧವಾದಾಗ ನಾನು ಅದರ ಬಿಡುಗಡೆಗೆ ಮತ್ತೆ ಬರುತ್ತೇನೆ. ಈ ಪುಸ್ತಕ ಪ್ರತಿಯೊಂದು ಯೂನಿಯನ್ ಆಫೀಸಿನಲ್ಲಿರಬೇಕು, ವಿವಿ ಇತಿಹಾಸ, ಸಮಾಜ ವಿಜ್ಞಾನಗಳ ವಿಭಾಗವನ್ನೂ, ಬುದ್ದಿಜೀವಿ ವರ್ಗವನ್ನೂ ತಲುಪಬೇಕು. ಈ ಪುಸ್ತಕದ ಆಧಾರದಲ್ಲಿ ಕಾರ್ಮಿಕರಿಗೆ ಕ್ಲಾಸುಗಳು ಆಗಬೇಕು ಎಂದು ಪುಸ್ತಕದ ಇನ್ನಷ್ಟು ವ್ಯಾಪಕ ಪ್ರಸಾರದ ಮಹತ್ವವನ್ನು ಮಾವ್ರಿಕೊಸ್ ಒತ್ತಿ ಹೇಳಿದರು. ಪ್ರಜ್ಞೆ

ಜಾಗತಿಕ ಕಾರ್ಮಿಕ ಚಳುವಳಿಯ 5 ಅವಧಿಗಳು

ಇದಕ್ಕಿಂತ ಮೊದಲು ಸಿಐಟಿಯು ಕಾರ್ಯದರ್ಶಿ ಮತ್ತು WFTU ನಾಯಕರಲ್ಲೊಬ್ಬರಾದ ಸ್ವದೇಶ ದೇಬ್ರಾಯ್ ಪುಸ್ತಕದ ಕುರಿತು ಮಾತನಾಡಿದರು. ಜಾಗತಿಕ ಕಾರ್ಮಿಕ ವರ್ಗದ ಇತಿಹಾಸವನ್ನು ಪುಸ್ತಕ ಐದು ಅವಧಿಗಳಾಗಿ ವಿಂಗಡಿಸುತ್ತದೆ – 1. ಕಾರ್ಮಿಕ ವರ್ಗದ ಉಗಮ ಮತ್ತು ವಿಕಾಸದ ಅವಧಿ – 1864ರ ವರೆಗೆ ಮಾರ್ಕ್ಸ್ – ಎಂಗೆಲ್ಸ್ 1864ರಲ್ಲಿ ಕಾರ್ಮಿಕರ ಅಂತರ್ರಾಷ್ಟ್ರೀಯ ಸಂಘ ಕಟ್ಟುವವರೆಗೆ, 2. ಕಾರ್ಮಿಕ ವರ್ಗದ ಚಳುವಳಿಯ ಬೆಳವಣಿಗೆ – ಎರಡನೆಯ ಅಂತರ್ರಾಷ್ಟ್ರೀಯ (1886-1914), ಮೊದಲ ಮಹಾಯುದ್ಧ, ಮೊದಲ ಕಾರ್ಮಿಕ ವರ್ಗದ ಕ್ರಾಂತಿ (ರಶ್ಯನ್ ಕ್ರಾಂತಿ – 1917) ಮತ್ತು 1919-20 ರಲ್ಲಿ ಎರಡು ( ಆಮಸ್ಟರಡಾಂ ಮತ್ತು ಕೆಂಪು) ಅಂತರ್ರಾಷ್ಟ್ರೀಯ ಕಾರ್ಮಿಕ ಸಂಘಟನೆಗಳ ರಚನೆಯ ವರೆಗೆ 3. ಪ್ರಜ್ಞೆ

ಎರಡು ಮಹಾಯುದ್ಧಗಳ ನಡುವೆ ಎರಡು ಅಂತರ್ರಾಷ್ಟ್ರೀಯ ಕಾರ್ಮಿಕ ಸಂಘಟನೆಗಳ ಬೆಳವಣಿಗೆ 4. 1945 ರಲ್ಲಿ WFTU ಸ್ಥಾಪನೆ – ಇತರ ಯೂನಿಯನುಗಳಲ್ಲಿ ಕೆಲವು WFTU ಸೇರಿ, ಕೆಲವು ಇತರ ಅಂತರ್ರಾಷ್ಟ್ರೀಯಗಳನ್ನು ರಚಿಸಿ ಕೊನೆಗೆ 1949ರಲ್ಲಿ ಪರಿಷ್ಕರಣವಾದಿ International Confederation of Free Trade Unions  (ICFTU) ರಚನೆ – ಬಂಡವಾಳಶಾಹಿ ಜಗತ್ತಿನ ಕ್ರಾಂತಿಕಾರಿ ಮತ್ತು ಸಮಾಜವಾದಿ ಹಾಗೂ ಮೂರನೇ ಜಗತ್ತಿನ ಟ್ರೇಡ್ ಯೂನಿಯನ್ ಗಳ ಸಂಗಟನೆಯಾಗಿ WFTU ಬೆಳವಣಿಗೆ – ಪೂರ್ವ ಯುರೋಪಿನ ಮತ್ತು ಸೋವಿಯೆಟ್ ಸಮಾಜವಾದಿ ಗಣತಂತ್ರಗಳ 1989-91 ರ ಕುಸಿತದ ನಂತರದ ಬೆಳವಣಿಗೆಗಳು – 1994 ರ ವರೆಗೆ 5. 1994ರ ನಂತರದಿಂದ ಈ ವರೆಗಿನ (2006ರಲ್ಲಿ ICFTU ನ ಹೊಸ ರೂಪ) ICTU ಮತ್ತು  WFTU ಗಳ ನಡುವೆ ಮತ್ತು ಒಳಗಿನ ಸಂಘರ್ಷ, ಬೆಳವಣಿಗೆಗಳ ಅವಧಿ .

ಎಲ್ಲ ಅವಧಿಗಳಲ್ಲೂ ಟ್ರೇಡ್ ಯೂನಿಯನ್ ಚಳುವಳಿಯಲ್ಲಿ (ಒಂದೇ ಸಂಘಟನೆಯೊಳಗೆ ಅಥವಾ ಎರಡು ಸಂಗಟನೆಗಳ ನಡುವೆ) ಪರಿಷ್ಕರಣವಾದಿ/ಸುಧಾರಣಾವಾದಿ ಮತ್ತು ಕ್ರಾಂತಿಕಾರಿ ಧೋರಣೆಗಳ ನಡುವಿನ ಸಂಘರ್ಷವೇ ಇಡೀ ಪುಸ್ತಕದ ಪ್ರಮುಖ ಸಂಕಥನ ಎನ್ನಬಹುದು. ಈ ಮೇಲಿನ ಐದು ಅವಧಿಗಳ ಘಟನಾವಳಿ, ಬೆಳವಣಿಗೆ ವಿವರಿಸುತ್ತಲೇ, ಪುಸ್ತಕದ ಬಹುಭಾಗ WFTU ಮಹಾಧಿವೇಶನಗಳ ಜಾಗತಿಕ ರಾಜಕೀಯ ಸಂದರ್ಭ, ಮಹಾಧಿವೇಶನದ ಮಹತ್ವದ ವಿವಾದಗಳು, ಸಂಘರ್ಷಗಳಿಗೆ ಮೀಸಲಾಗಿದೆ ಎಂದು ದೆಬ್ರಾಯ್ ಹೇಳಿದರು.

ಅದರಲ್ಲೂ ಮಾವ್ರಿಕೊಸ್ ಅವರ ವಿಮರ್ಶಾತ್ಮಕ ಟಿಪ್ಪಣಿಗಳು, WFTU ಇತಿಹಾಸದಲ್ಲಿ ನಿರ್ಣಾಯಕವಾಗಿದ್ದ ಮತ್ತು ಅಳಿವು-ಉಳಿವಿನ ಪ್ರಶ್ನೆಯಾಗಿದ್ದ ಮೂರು ಮಹಾಧಿವೇಶನಗಳ ಕುರಿತು ಹೆಚ್ಚಿನ ಒತ್ತು ಕೊಡುತ್ತವೆ. ಈ ಮೂರು ಮಹಾಧಿವೇಶನಗಳು – ಪ್ಯಾರೀಸಿನಲ್ಲಿ ನಡೆದ 1945ರ ಸ್ಥಾಪನಾ ಮಹಾಧಿವೇಶನದಲ್ಲಿ ಸ್ಥಾಪನೆ ಮತ್ತು ಅದರ ಧ್ಯೇಯೋದ್ಧೇಶಗಳ ಕುರಿತು ವಿವಾದ-ಸಂಘರ್ಷ; ಯು.ಎಸ್-ಸೋವಿಯೆಟ್ ಶೀತ ಸಮರ ಆರಂಭವಾದ ಸನ್ನಿವೇಶದಲ್ಲಿ ಮಿಲಾನ್ (ಇಟಲಿ) ನಲ್ಲಿ 1949ರಲ್ಲಿ ನಡೆದ  ಮಹಾಧಿವೇಶನದಲ್ಲಿ ಯು.ಎಸ್-ಯು.ಕೆ ಯೂನಿಯನುಗಳು WFTU ಹೊರ ನಡೆದು ಇಬ್ಭಾಗ ಮಾಡಿ ICFTU (2006ರಲ್ಲಿ ICTU ಎಂದು ಮರು ನಾಮಕರಣ) ರಚಿಸಿದವು; ಸೋವಿಯೆಟ್ ಕುಸಿತದ ಸಂದರ್ಭದಲ್ಲಿ 1994ರಲ್ಲಿ ನಡೆದ ಡಮಾಸ್ಕಸ್ (ಸಿರಿಯಾ) ಮಹಾಧಿವೇಶನದಲ್ಲಿ ಫ್ರೆಂಚ್ ಮತ್ತು ಇಟಾಲಿಯನ್ ಘಟಕಗಳು ಪ್ರಸ್ತಾವಿಸಿದ WFTU ವಿಸರ್ಜನೆ ವಿರುದ್ಧ ಹೋರಾಟ – ಇವನ್ನು ಪುಸ್ತಕದಲ್ಲಿ ವಿವರವಾಗಿ ಚರ್ಚಿಸಲಾಗಿದೆ ಎಂದು ದೆಬ್ರಾಯ್ ಪುಸ್ತಕ ಪರಿಚಯಿಸುತ್ತಾ ಹೇಳಿದರು.

ಪುಸ್ತಕ ಪ್ರಸಕ್ತ ಪರಿಸ್ಥಿತಿಯಲ್ಲಿ ಹಳದಿ TU, ಸುಧಾರಣಾವಾದಿ ಶಕ್ತಿಗಳು ಹುಟ್ಟು ಹಾಕುತ್ತಿರುವ ವಾದಗಳನ್ನು ವಿವರಿಸಿ, ಅವುಗಳನ್ನು ಬಯಲಿಗೆಳೆಯುತ್ತದೆ.  WFTU ವಸಾಹತುಶಾಹಿ, ಸಾಮ್ರಾಜ್ಯಶಾಹಿ, ವರ್ಣಬೇದದ ವಿರುದ್ಧ ದೃಢ ನಿಲುವು ತೆಗೆದುಕೊಂಡದ್ದರಿಂದ ಅಭಿವೃದ್ಧಿಶೀಲ ಮೂರನೇ ಜಗತ್ತಿನ ದೇಶಗಳ ಟ್ರೇಡ್ ಯೂನಿಯನುಗಳು ಅದರ ಜತೆ ದೃಢವಾಗಿ ನಿಂತಿದೆ. ಸಾಮ್ರಾಜ್ಯಶಾಹಿ ದೇಶಗಳ ಕೆಲವು ಯೂನಿಯನುಗಳು ಮಾತ್ರ ಓಲಾಡುತ್ತಿದ್ದು, ಈಗಿನ ಪರಿಸ್ಥಿತಿ ಹೆಚ್ಚೆಚ್ಚು ಕಾರ್ಮಿಕರನ್ನು ಸಮರಶೀಲಗೊಳಿಸುತ್ತಿದೆ. ಈ ಪುಸ್ತಕಕ್ಕೆ ಮುನ್ನುಡಿ ಬರೆದ ವಿಯೇಟ್ನಾಮಿ ಕ್ರಾಂತಿ ಮತ್ತು ಟ್ರೇಡ್ ಯೂನಿಯನ್ ಚಳುವಳಿಯ ಹಿರಿಯ ನಾಯಕಿ ಕು ಥಿ ಹೌ ಬರೆದ ಮುನ್ನುಡಿ ಪುಸ್ತಕದ ಮೌಲ್ಯ ಹೆಚ್ಚಿಸಿದೆ ಎಂದು ದೆಬ್ರಾಯ್ ಪುಸ್ತಕದ ಪರಿಚಯ ಮಾಡಿದರು.

ಬೆಂಗಳೂರಿನಲ್ಲಿ ಈ ಸಭೆಯನ್ನು WFTU ಸಂಯೋಜಿತ ಭಾರತೀಯ ಯೂನಿಯನುಗಳು – ಕೇಂದ್ರೀಯ ಟ್ರೇಡ್ ಯೂನಿಯನುಗಳಾದ AITUC, CITU, AIUTUC, AICCTU, TUCC, ಹಾಗೂ  ವಿಭಾಗವಾರು ಫೆಡರೇಶನುಗಳಾದ AIIEA, KPBEF, BEFI, BSNLEU, AISGEF ಸಂಘಟಿಸಿದ್ದವು, ಈ ಯೂನಿಯನುಗಳ ಮುಖ್ಯ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾವ್ರಿಕೊಸ್ ಭಾಷಣದ ನಂತರ ಅವರ ಜತೆ ಸಭಿಕರ ಸಂವಾದ ೇರ್ಪಡಿಸಲಾಗಿತ್ತು. ಹಿರಿಯ AITUC ಮತ್ತು WFTU ನಾಯಕ ಮಹಾದೇವನ್ ಅವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು. WFTU ಉಪ ಪ್ರಧಾನ ಕಾರ್ಯದರ್ಶಿ ಅಂಡಾ ಅನಸ್ತಸಾಕಿ ಮತ್ತು ಸ್ವದೇಶ್ ದೇಬ್ರಾಯ್ ಉಪಸ್ಥಿತರಿದ್ದರು.  ಸಭಾಂಗಣದ ಹೊರಗೆ ‘ಸಾಮ್ರಾಜ್ಯಶಾಹಿ-ವಿರೋಧಿ’ ಪೋಸ್ಟರುಗಳ ಪ್ರದರ್ಶನವೂ ಇತ್ತು.

ಇದನ್ನೂ ನೋಡಿ: ಹಾಡು | ‘‌ಕಮಿಷನರ್ ಅನುಪಮ್ ಅಗರ್ವಾಲ್ ಹಠಾವೊ’ ಸಾಹಿತ್ಯ ಮತ್ತು ಹಾಡು : ಶ್ಯಾಮರಾಜ ಪಟ್ರೆಮೆ Janashakthi Media

Donate Janashakthi Media

Leave a Reply

Your email address will not be published. Required fields are marked *