ಬೆಂಗಳೂರು: ರಾಜ್ಯರಾಜಕೀಯದ ಹಳ್ಳಕ್ಕೆ ಪ್ರಜ್ವಲ್ ರೇವಣ್ಣರ ಪೆನ್‌ಡ್ರೈವ್ ರಾಡಿ ಎಬ್ಬಿಸಿದ್ದು, ರಂಪಾಟ ಮಾಡಿ ಬೀದಿ ತುಂಬೆಲ್ಲಾ ಸುದ್ದಿ ಮಾಡಿ ಅಂತಾರಾಷ್ಟ್ರೀಯ ಕುಖ್ಯಾತಿಗೂ ಕಾರಣವಾಗಿ ಈಗ ಎಸ್‌ಐಟಿ ಮುಂದೆ ಮೇ 31 ಕ್ಕೆ ಹಾಜರಾಗೋದಾಗಿ ಅದೆಲ್ಲಿಂದಲೋ ಗುಪ್ತ ರಿಕಾರ್ಡಿಂಗ್ ಮಾಡಿ ಹೇಳಿಕೆ ಕೊಟ್ಟಿದ್ದೂ ಆಯ್ತು, ವಿಮಾನ ನಿಲ್ದಾಣಕ್ಕೆ ಪ್ರಜ್ವಲ್ ರೇವಣ್ಣ ಬರ್ತಿದ್ದಂತೆ ಅರೆಸ್ಟ್ ಮಾಡ್ತೀವಂತ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ ಕೊಟ್ಟಿದ್ದೂ ಆಯ್ತು. ಪ್ರಜ್ವಲ್ ರೇವಣ್ಣ ಎಲ್ಲಿದ್ದೀಯಪ್ಪಾ ಬೇಗ ಬಾರಪ್ಪ ಅಂತಾ ಕುಮಾರಸ್ವಾಮಿ ಹೇಳಿದ್ದೂ ಆಯ್ತು, ಇತ್ತ ಅಜ್ಜ ಕುಟುಂಬ ಬೇಕಾದರೆ ಬಂದ್ಬಿಡಪ್ಪಾ ಹಾಜರಾಗಿಬಿಡಪ್ಪಾ ಅಂತ ಪತ್ರ ಬರೆದ್ದೂ ಮುಗಿತು. ಆರಂಭದಲ್ಲಿ ನಮ್ಮ ಕುಟುಂಬಾನೇ ಬೇರೆ ಹೆಚ್.ಡಿ.ರೇವಣ್ಣ ಕುಟುಂಬಾನೇ ಬೇರೆ ಎಂದಿದ್ದ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ವಿಡೀಯೋ ಬಿಡ್ತಿದ್ಹಂಗೆ ನಾವು ಹೇಳಿದ್ದಕ್ಕೆ ಅವನು ಬರ್ತಿರೋದು ಎಸ್‌ಐಟಿಗೆ ಹಾಜರಾಗ್ತಿರೋದು ಅಂತ ಹೇಳ್ಬಿಟ್ಟು ಪ್ರಜ್ವಲ್ ರೇವಣ್ಣ ಬರೋ ಒಂದಿನ ಮುಂಚೆನೇ ಇದ್ದಕ್ಕಿದ್ದಂತೆ ತಮ್ಮ ಕುಟುಂಬ ಮೊಮ್ಮಗ ಮಗ ಸೊಸೆ ಜೊತೆ ಕೇರಳಕ್ಕೆ ಹೋಗಿಬಿಟ್ಟಿದ್ದಾರೆ.
ಹಾಗಾದ್ರೆ, ಹೆಚ್ಡಿಕೆ ಇದ್ದಕ್ಕಿದ್ದಂತೆ ಕೇರಳದತ್ತ ನಡೆದದ್ದೂ ಯಾಕೆ? ಅನ್ನೋ ಪ್ರಶ್ನೆ ಮೂಡೋದು ಸಹಜಾನೆ ಅಲ್ವಾ. ಅದು ಯಾಕಂದ್ರೆ, ಕುಟುಂಬ ಇದೀಗ ಮೂರು ದಿನಗಳ ಪ್ರವಾಸ ಹಮ್ಮಿಕೊಂಡಿದ್ದಾರೆ.ಕೇರಳದ ವೈನಾಡ್ ಕಡೆಗೆ ಹೆಚ್‌ಡಿಕೆ ಹೊರಟಿದ್ದಾರೆ.
ಅನಿತಾ ಕುಮಾರಸ್ವಾಮಿನಿಖಿಲ್ ಕುಮಾರಸ್ವಾಮಿ ಸೊಸೆ ರೇವತಿ ಸೇರಿದಂತೆ ಇಡೀ ಕುಟುಂಬವೇ ತೆರಳಲಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಇಂದು ಮಧ್ಯರಾತ್ರಿ ಪ್ರಜ್ವಲ್ ರೇವಣ್ಣ ರಾಜ್ಯಕ್ಕೆ ಆಗಮಿಸುತ್ತಿದ್ದು, ಅವರ ಬಂಧನವಾಗುವ ಸಾಧ್ಯತೆ ಇರೋದ್ರಿಂದ ಈ ಪ್ರವಾಸ ಹಮ್ಮಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.3 ದಿನಗಳ ಕಾಲ ಅಲ್ಲೇ ಇದ್ದು ಲೋಕಸಭಾ ಚುನಾವಣೆಯ ಫಲಿತಾಂಶದ ಹಿಂದಿನ ದಿನ ವಾಪಸ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲಾರದೆಯೋ ಅಥವಾ ಆಡಳಿತರೂಢ ಪಕ್ಷವನ್ನು ಎದುರಿಸಲು ತಂತ್ರ ಹೂಡಲೋ ಅಥವಾ ಅದ್ಯಾರ ಸೂಚನೆಯ ಮೇರೆಗೆ ಹೋಗುತ್ತಿದ್ದಾರೋ? ಗೊತ್ತಿಲ್ಲ. ಈ ಹಿಂದೆ ವಿಧಾನಸಭಾ ಚುನಾವಣಾ ಫಲಿತಾಂಶ ಬರೋ ಹಿಂದಿನ ದಿನ ಕುಮಾರಸ್ವಾಮಿ ವಿದೇಶಕ್ಕೆ ಹೋಗಿರುವ ಉದಾಹರಣೆ ಸೇರಿದಂತೆ ಮಹತ್ತರ ಬೆಳವಣಿಗೆಗಳು ಬದಲಾವಣೆಗಳು ಆಗಬೇಕಾದರೆ ಹೀಗೆ ಹೆಚ್ಡಿಕೆ ಪಯಣ ಸಹಜನೇ ಅಂತಾವೇ ಮೂಲಗಳು.
ಮತ್ತೊಂದೆಡೆ ಹೆಚ್.ಡಿ.ಕುಮಾರಸ್ವಾಮಿಯ ಪ್ರಬಲ ರಾಜಕೀಯ ಶತೃ ಎಂದೇ ಪರಿಗಣಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಫೋಟಕ ಮಾಹಿತಿಯೊಂದನ್ನು ಹೇಳಿದ್ದು, ತನ್ನ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇರಳದಲ್ಲಿ ಶತೃಭೈರವಿಯಾಗ ,ಮಾರಣಹೋಮ ಸ್ತಂಭನ ಯಾಗ, ರಾಜಕಂಟಕ ಯಾಗಗಳನ್ನು ಅಘೋರಿಗಳ ಮೂಲಕ ನಡೆಸಲಾಗುತ್ತಿದೆ ಎಂದಿರುವುದು ಇಲ್ಲಿ ಗಮನಾರ್ಹ.
ಇದನ್ನು ನೋಡಿ : ಪ್ರಜ್ವಲ್ ರೇವಣ್ಣ – ಲೈಂಗಿಕ ಹತ್ಯಾಕಾಂಡ ಆರೋಪಿJanashakthi Media