ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ ಫಲಿತಾಂಶ | ಟಿಎಂಸಿ ಪ್ರಾಬಲ್ಯ, ಬಿಜೆಪಿ 2ನೇ ಸ್ಥಾನಕ್ಕೆ

ಬಲ ಹೆಚ್ಚಿಸಿಕೊಂಡ ಎಡಪಕ್ಷಗಳು ಮತ್ತು ಕಾಂಗ್ರೆಸ್

ಕಲ್ಕತ್ತಾ: ಹಿಂಸಾಚಾರದ ನಡುವೆ ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆಗಳ ಎಣಿಕೆ ಎರಡನೇ ದಿನವೂ ಮುಂದುವರೆದಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಮೊದಲ ದಿನದ ಫಲಿತಾಂಶಗಳಲ್ಲಿ ಪ್ರಾಬಲ್ಯ ಸಾಧಿಸಿದೆ, ಗ್ರಾಮ ಪಂಚಾಯತ್‌ಗಳಲ್ಲಿ ತಮ್ಮ ಹತ್ತಿರದ ಪ್ರತಿಸ್ಪರ್ಧಿ ಬಿಜೆಪಿಗಿಂತ ಮೂರು ಪಟ್ಟು ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದೆ. ಈ ನಡುವೆ ಎಡಪಕ್ಷಗಳು ತಮ್ಮ ಬಲವನ್ನು ಹೆಚ್ಚಿಸಿಕೊಂಡಿವೆ.

ಗ್ರಾಮ ಪಂಚಾಯತ್, ಪಂಚಾಯತ್ ಸಮಿತಿ ಹಾಗೂ ಜಿಲ್ಲಾ ಪರಿಷತ್‌ನ ಒಟ್ಟು 73,887 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಆದರೆ ಚುನಾವಣೆ ದಿನ ಹಿಂಸಾಚಾರ ಭುಗಿಲೆದ್ದು, ಸುಮಾರು 20 ಜನರು ಮೃತಪಟ್ಟಿದ್ದರು. ಮತದಾನದ ವೇಳೆ ಮತಯಂತ್ರಗಳನ್ನು ವಿರೂಪಗೊಳಿಸಿ, ಬೆಂಕಿ ಹಚ್ಚಿ ಕೆರೆಗಳಿಗೆ ಎಸೆದ ಪ್ರಕರಣಗಳು ಕಂಡುಬಂದಿದ್ದವು. ಹೀಗಾಗಿ ರಾಜ್ಯದ 19 ಜಿಲ್ಲೆಗಳ 696 ಮತಗಟ್ಟೆಗಳಲ್ಲಿ ಸೋಮವಾರ ಮರು ಮತದಾನ ನಡೆದಿತ್ತು.

ಇತ್ತೀಚಿನ ಅಪ್‌ಡೇಟ್ ಪ್ರಕಾರ ಪಕ್ಷವಾರು ಗೆಲುವಿನ ಹಾಗೂ ಮುನ್ನಡೆಯ ಸೀಟುಗಳು ಈ ಕೆಳಗಿನಂತಿವೆ:

ಗ್ರಾಮ ಪಂಚಾಯತ್ ಸ್ಥಾನಗಳು (ಒಟ್ಟು ಸ್ಥಾನಗಳು: 63,229)

ಟಿಎಂಸಿ        : 30,391 ಸ್ಥಾನಗಳಲ್ಲಿ ಗೆಲುವು, 1,767 ಸೀಟ್‌ಗಳಲ್ಲಿ ಮುನ್ನಡೆ.
ಬಿಜೆಪಿ           : 8,239 ಸ್ಥಾನಗಳನ್ನು ಗೆಲುವು, 447 ಗಳಲ್ಲಿ ಮುನ್ನಡೆ.
ಸಿಪಿಐ(ಎಂ) : 2,534ರಲ್ಲಿ ಗೆಲುವು, 237 ಸೀಟ್‌ಗಳಲ್ಲಿ ಮುನ್ನಡೆ.
ಕಾಂಗ್ರೆಸ್     : 2,158 ಸ್ಥಾನಗಳನ್ನು ಗೆದ್ದಿದೆ, 151 ರಲ್ಲಿ ಮುನ್ನಡೆ.

ಪಂಚಾಯತ್ ಸಮಿತಿ ಸ್ಥಾನಗಳು (ಒಟ್ಟು ಸ್ಥಾನಗಳು: 9,730)

ಟಿಎಂಸಿ         : 2,612 ಸ್ಥಾನಗಳನ್ನು ಗೆದ್ದು, 627ರಲ್ಲಿ ಮುನ್ನಡೆ.
ಬಿಜೆಪಿ           : 275 ಗೆಲುವು, 149 ಸ್ಥಾನಗಳಲ್ಲಿ ಮುನ್ನಡೆ.
ಸಿಪಿಐ(ಎಂ)  : 63 ಸ್ಥಾನಗಳನ್ನು ಗೆದ್ದು, 53ರಲ್ಲಿ ಮುನ್ನಡೆ.
ಕಾಂಗ್ರೆಸ್       : 50 ಸ್ಥಾನಗಳಲ್ಲಿ ಗೆಲುವು, 26 ರಲ್ಲಿ ಮುನ್ನಡೆ.

ಜಿಲ್ಲಾ ಪರಿಷತ್ ಸ್ಥಾನಗಳು (ಒಟ್ಟು ಸ್ಥಾನಗಳು: 928 ಸ್ಥಾನಗಳು)

ಟಿಎಂಸಿ          : ಇಲ್ಲಿಯವರೆಗೆ ಫಲಿತಾಂಶ ಪ್ರಕಟವಾದ ಎಲ್ಲಾ 88 ಸ್ಥಾನಗಳನ್ನು ಗೆದ್ದಿದೆ, 163 ರಲ್ಲಿ ಮುನ್ನಡೆ ಸಾಧಿಸಿದೆ
ಬಿಜೆಪಿ            : 13ರಲ್ಲಿ ಮುನ್ನಡೆ
ಸಿಪಿಐ(ಎಂ)   : 4ರಲ್ಲಿ ಮುನ್ನಡೆ
ಕಾಂಗ್ರೆಸ್        : 2ರಲ್ಲಿ ಮುನ್ನಡೆ

2019 ನಡೆದ ಪಂಚಾಯತ್ ಚುನಾವಣೆಯಲ್ಲಿ ಆಡಳಿತರೂಢ ಟಿಎಂಸಿ 46,973, ಬಿಜೆಪಿ 6,570, ಸಿಪಿಐ 34, ಸಿಪಿಐ(ಎಂ) 1,593, ಕಾಂಗ್ರೆಸ್ 1,205, ಎಐಎಫ್‌ಬಿ 110, ಆರ್‌ಎಸ್‌ಪಿ 106 ಹಾಗೂ ಸ್ವತಂತ್ರ 112 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಇದನ್ನೂ ಓದಿ: ಪಶ್ಚಿಮ ಬಂಗಾಳ ಪಂಚಾಯತ್‌ ಚುನಾವಣೆ:696 ಮತಗಟ್ಟೆಗಳಲ್ಲಿ ಮರು ಮತದಾನ.

 

Donate Janashakthi Media

Leave a Reply

Your email address will not be published. Required fields are marked *