ಹಿಂದುತ್ವದ ಗೆಲುವಿಗೆ ವಾಟ್ಸ್ ಆ್ಯಪ್ ಅಪಪ್ರಚಾರ:ಬಿಜೆಪಿ ಐಟಿ ವಿಂಗ್ ಸಂಚು!

ಬೆಂಗಳೂರು : ವಾಟ್ಸ್ ಆ್ಯಪ್ ಅಪಪ್ರಚಾರ ಕರಾವಳಿಯಲ್ಲಿ ಹಿಂದುತ್ವದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದೆ ಎಂದು ವಾಷಿಂಗ್ಟನ್ ಪೋಸ್ಟ್‌ನ ವಿಶೇಷ ತನಿಖೆಯಿಂದ ಹೊರಬಂದಿದೆ.

ವಾಷಿಂಗ್ಟನ್ ಪೋಸ್ಟ್‌ನ್ ಭಾರತ ಬ್ಯುರೋ ಮುಖ್ಯಸ್ಥ ಜೆರ್ರಿ ಶಿಹ್‌ ಅವರು ಮೋಹಿತ್ ರಾವ್ ಮತ್ತು ಶಮ್ಸ್ ಇರ್ಫಾನ್ ಅವರಿಂದ ಮಾಹಿತಿ ಪಡೆದು ವಿಶೇಷ ತನಿಖಾ ವರದಿಯನ್ನು ನೀಡಿದ್ದಾರೆ. ಬಿಜೆಪಿ ಮತ್ತು ಸಂಯೋಜಿತ ಹಿಂದುತ್ವವಾದಿ ಗುಂಪುಗಳು ತಮ್ಮ ರಾಜಕೀಯ ಅಜೆಂಡಾವನ್ನು ಜಾರಿ ಮಾಡಲು ವಾಟ್ಸ್‌ಆ್ಯಪ್‌ನಂತಹ ಪ್ಲ್ಯಾಟ್‌ಫಾರ್ಮ್‌ಗಳನ್ನು ಹೇಗೆ ಬಳಸಿಕೊಂಡಿದ್ದವು ಎನ್ನುವುದನ್ನು ಈ ವರದಿ ಬಹಿರಂಗಗೊಳಿಸಿದೆ.

ಆರಂಭದಲ್ಲಿ ಈ ವಾಟ್ಸ್‌ಆ್ಯಪ್ ಸಂದೇಶಗಳು ಚುನಾವಣಾ ಪ್ರಚಾರದಲ್ಲಿ ಮಾಮೂಲಾಗಿ ಎತ್ತಲಾಗುವ ಮೂಲಸೌಕರ್ಯ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳು, ಶಾಲೆ, ರಸ್ತೆ, ಉಚಿತ ಆಹಾರ ಸೇರಿದಂತೆ ಜನರನ್ನು ಆಕರ್ಷಿಸುವ ರೀತಿಯಲ್ಲಿ ಆ ಗುಂಪನಲ್ಲಿ ಇರುವವರಿಗೆ ಸಂದೇಶವನ್ನು  ರವಾನಿಸಿದ್ದವು. ಆದರೆ ಮೇ ನಲ್ಲಿ ಚುನಾವಣೆಗಳು ಸಮೀಪಿಸುತ್ತಿದ್ದಂತೆ ಗಾಢ ತಿರುವು ಪಡೆದುಕೊಂಡಿದ್ದ ಸಂದೇಶಗಳು ಧಾರ್ಮಿಕ ಹಿಂಸಾಚಾರ ಮತ್ತು ಹಿಂದುತ್ವದ ಮೇಲೆ ದಾಳಿ ನಡೆಯುತ್ತಿದೆ ಎಂದು ಚರ್ಚಿಸಿದ್ದವು. ಹಿಂದುತ್ವ

ಮಂಗಳೂರು ಖಾಸಗಿ ಬ್ಯಾಂಕ್ ಉದ್ಯೋಗಿ ಸಚಿನ್ ಪಾಟೀಲ್ ಪ್ರತಿದಿನ ಆರು ವಾಟ್ಸ್‌ಆ್ಯಪ್ ಗುಂಪುಗಳಲ್ಲಿ ಬಿಜೆಪಿಗೆ ಮತ ನೀಡುವಂತೆ ನಿರಂತರವಾಗಿ ನೆನಪಿಸುವ ಸುಮಾರು 120 ಸಂದೇಶಗಳನ್ನು ಸ್ವೀಕರಿಸಿದ್ದರಂತೆ. ಅವರಿಗೆ ಬಂದ ಒಂದು ವೈರಲ್ ಪೋಸ್ಟ್‌ನಲ್ಲಿ 24 ಸ್ಥಳೀಯ ಹಿಂದೂ ಪುರುಷರ ಹೆಸರನ್ನು ಮುಸ್ಲಿಮರು ಹತ್ಯೆ ಮಾಡಿದ್ದಾರೆ ಎಂದು ಪಟ್ಟಿಮಾಡಿದೆ. ಮತ್ತೊಂದು ಸಾಮೂಹಿಕ ಸಂದೇಶವು ಇಸ್ಲಾಮಿಕ್ ಸ್ಟೇಟ್‌ಗೆ ಸೇರಲು ಮುಸ್ಲಿಂ ಪುರುಷರಿಂದ ಹಿಂದೂ ಹುಡುಗಿಯರನ್ನು ಬಳಸಿಕೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸಬೇಕಾದರೆ ನೀವು ಬಿಜೆಪಿಗೆ ಮತ ನೀಡಬೇಕು ಎಂದು ಅಪಪ್ರಚಾರದ ಸಂದೇಶ ಕಳುಹಿಸಿದ್ದಾರೆ.

ಬಿಜೆಪಿ ತನ್ನ ಸಾಧನೆಗಳನ್ನು ಎತ್ತಿ ತೋರಿಸುವ ಮತ್ತು ತನ್ನ ಮುಖ್ಯ ರಾಜಕೀಯ ಪ್ರತಿಸ್ಪರ್ಧಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಸಂದೇಶಗಳನ್ನು ಕೋಟ್ಯಂತರ ಜನರ ಮೊಬೈಲ್ ಸಾಧನಗಳಿಗೆ ನೇರವಾಗಿ ತಲುಪಿಸಲು ವ್ಯಾಪಕ ಮೆಸೇಜಿಂಗ್ ಮೂಲಸೌಕರ್ಯವನ್ನು ಸಜ್ಜುಗೊಳಿಸಿಕೊಂಡಿತ್ತು. ಅದಕ್ಕಾಗಿ  ಪ್ರಚೋದನಾತ್ಮಕ ಪೋಸ್ಟ್‌ಗಳನ್ನು ವಿನ್ಯಾಸಗೊಳಿಸುವಲ್ಲಿ ಪರಿಣತಿ ಹೊಂದಿದ್ದ ‘ಥರ್ಡ್ ಪಾರ್ಟಿ’ ಅಥವಾ ‘ಟ್ರೋಲ್’ ಪೇಜ್‌ಗಳನ್ನು ನಿರ್ವಹಿಸುವ ಕಂಟೆಂಟ್ ಕ್ರಿಯೇಟರ್‌ಗಳ ಸಹಭಾಗಿತ್ವವನ್ನು ಈ ಗುಪ್ತ ಕಾರ್ಯಾಚರಣೆಯು ಒಳಗೊಂಡಿತ್ತು. ಈ ಪೋಸ್ಟ್‌ಗಳು ಹೆಚ್ಚಾಗಿ, ಜನಸಂಖ್ಯೆಯಲ್ಲಿ ಶೇ.14ರಷ್ಟಿರುವ ಮುಸ್ಲಿಂ ಅಲ್ಪಸಂಖ್ಯಾತರು ಬಹುಸಂಖ್ಯಾತ ಹಿಂದುಗಳಿಗೆ ಬೆದರಿಕೆಯನ್ನು ಒಡ್ಡುತ್ತಿದ್ದಾರೆ ಎಂದು ಸುಳ್ಳು ನಿರೂಪಣೆಯನ್ನು ಮುಂದಿಡುತ್ತಿದ್ದರು. ಹಿಂದು ಬಹುಸಂಖ್ಯಾತರ ವಿರುದ್ಧ ನಿಂದನೆ ಮತ್ತು ಹಿಂಸಾಚಾರದಲ್ಲಿ ಜಾತ್ಯತೀತ ಮತ್ತು ಉದಾರವಾದಿ ಕಾಂಗ್ರೆಸ್ ಪಕ್ಷವು ಶಾಮೀಲಾಗಿದೆ ಎಂದು ಈ ಸುಳ್ಳು ನಿರೂಪಣೆಗಳು ಬಿಂಬಿಸಿದ್ದವು ಎನ್ನುವುದನ್ನು ವರದಿಯು ಎತ್ತಿ ತೋರಿಸಿದೆ. ಹಿಂದುತ್ವ

ಇದನ್ನೂ ಓದಿಪ್ರಗತಿಪರ ಸಾಹಿತಿಗಳಿಗೆ ಜೀವ ಬೆದರಿಕೆ ಪ್ರಕರಣ| ಹಿಂದುತ್ವ ಸಂಘಟನೆ ಕಾರ್ಯಕರ್ತ ಅರೆಸ್ಟ್..!

ವಾಟ್ಸ್‌ಆ್ಯಪ್ ಗುಂಪುಗಳಿಗೆ ಜನರನ್ನು ಸೇರಿಸಲು ಮತದಾರರ ನೋಂದಣಿ ಡಾಟಾವನ್ನು ಮನೆ ಮನೆಗೆ ಮಾಹಿತಿಯೊಂದಿಗೆ ಸಂಯೋಜಿಸುವ ಮೂಲಕ ಸ್ವಯಂಸೇವಕ ಕ್ಷೇತ್ರ ಕಾರ್ಯಕರ್ತರು ಬಿಜೆಪಿಯ ವಾಟ್ಸ್‌ಆ್ಯಪ್ ಪ್ರಚಾರದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಬಿಜೆಪಿಯ ಸಾಮಾಜಿಕ ವಿಭಾಗದ ಮಾಜಿ ಮುಖ್ಯಸ್ಥ ವಿನೋದ ಕೃಷ್ಣಮೂರ್ತಿಯವರ ಪ್ರಕಾರ ಬಿಜೆಪಿಯು ರಾಜ್ಯದಲ್ಲಿ ಚುನಾವಣೆಗಾಗಿ ವಾಟ್ಸ್‌ಆ್ಯಪ್ ಚಟುವಟಿಕೆಗಳನ್ನು ನಿರ್ವಹಿಸಲು ಒಟ್ಟು 150,000 ಕಾರ್ಯಕರ್ತರನ್ನು ನಿಯೋಜಿಸಿತ್ತು ಎಂದು ವರದಿ ಉಲ್ಲೇಖಿಸಿದೆ. ಹಿಂದುತ್ವ

ಸುನಿಲ್ ಪೂಜಾರಿ ಅಲಿಯಾಸ್‌ ‘ಅಸ್ತ್ರ,  ಅಜಿತ್ ಕುಮಾರ್ ಉಳ್ಳಾಲ ಈ ಅಪಪ್ರಚಾರದ ಸುದ್ದಿಗಳನ್ನು ಹರಡುವಲ್ಲಿ ಪ್ರಮುಖಪಾತ್ರವನ್ನು ವಹಿಸಿದವರು ಎಂದು ವರದಿ ಹೇಳಿದೆ. ಕರಾವಳಿ ಕರ್ನಾಟಕದಲ್ಲಿ ವ್ಯಾಪಕವಾಗಿ ವಾಟ್ಸ್‌ಆ್ಯಪ್ ಪೋಸ್ಟ್‌ಗಳನ್ನು ಸೃಷ್ಟಿಸಿ, ಅವುಗಳನ್ನು ಜನರಿಗೆ ತಲುಪಿಸುವುದು ಇವರ ಮುಖ್ಯ ಕೆಲಸವಾಗಿತ್ತು.  ಅಜಿತ್ ಕುಮಾರ್ ವೈಯಕ್ತಿಕವಾಗಿ 200 ವಾಟ್ಸ್‌ಆ್ಯಪ್ ಗುಂಪುಗಳಲ್ಲಿದ್ದರು.   ಅವರು ಹೊಸ ಪೋಸ್ಟ್‌ಗಳು ಒಂದು ಗಂಟೆಯೊಳಗೆ ತನ್ನ ಕರಾವಳಿ ಜಿಲ್ಲೆಯ ಸಾವಿರಾರು ನಿವಾಸಿಗಳಿಗೆ ತಲುಪಬೇಕು ಎಂದು ನಿರೀಕ್ಷಿಸಿದ್ದರು. ಮೊಬೈಲ್ ಫೋನ್ ಹೊಂದಿರುವ ಪ್ರತಿಯೊಬ್ಬ ಬಿಜೆಪಿ ಸ್ವಯಂಸೇವಕ ಸಾಮಾಜಿಕ ಮಾಧ್ಯಮ ಯೋಧನ ಪಾತ್ರವನ್ನು ನಿರ್ವಹಿಸುವುದಕ್ಕೆ ಅವರು ಒತ್ತು ನೀಡಿದ್ದರು ಎಂದು ವರದಿ ತಿಳಿಸಿದೆ. ಹಿಂದುತ್ವ

ಕರ್ನಾಟಕದಲ್ಲಿ ಬಿಜೆಪಿಯ ಪ್ರಚಾರ ಅಭಿಯಾನವನ್ನು ಹೆಚ್ಚಿಸಲು ಕೋಮು ಘಟನೆಗಳನ್ನು ಬಳಸಿಕೊಳ್ಳುವಲ್ಲಿ ಸುನಿಲ್ ಪೂಜಾರಿ ಸಕ್ರಿಯ ಪಾತ್ರವನ್ನು ಹೊಂದಿದ್ದರು. ಈಗಲೂ ಪೂಜಾರಿ ಹೊಸ ಕಾಂಗ್ರೆಸ್ ಸರ್ಕಾರವನ್ನು ಟಿಪ್ಪು ಸುಲ್ತಾನ್ ಗೆ ಹೋಲಿಸುವುದನ್ನು ಮತ್ತು ಹಿಂಸಾಚಾರದ ಬಗ್ಗೆ ಎಚ್ಚರಿಸುವ ಕಂಟೆಂಟ್ ಗಳನ್ನು ಪೋಸ್ಟ್ ಮಾಡುವುದನ್ನು ಮುಂದುವರಿಸಿದ್ದಾನೆ. ಒಟ್ಟಾರೆ ಬಿಜೆಪಿಯ ಐಟಿ ಸೆಲ್‌ ಸುಳ್ಳು ಸುದ್ದಿ, ಅಪಪ್ರಚಾರದ ಮೂಲಕ ಹಿಂದು ಮುಸ್ಲಿಂ ಗಲಾಟೆಯನ್ನು ಜೀವಂತವಾಗಿಡುವ ಹುನ್ನಾರ ಮಾಡುತ್ತಲೆ ಇದೆ. ರಾಜ್ಯ ಸರ್ಕಾರ ಈ ವರದಿಯನ್ನು ಆಧರಿಸಿ ಅವರ ಮೇಲೆ ಕ್ರಮಕಗೊಳ್ಲಲಿದೆಯಾ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.

ವಾಷಿಂಗ್ಟನ್ ಪೋಸ್ಟ್ ವಿಶೇಷ ತನಿಖಾ ವರದಿ ಓದಲು ಈ ಲಿಂಕ್ ಕ್ಲಿಕ್‌ ಮಾಡಿ

 

ಈ ವಿಡಿಯೋ ನೋಡಿ‘ಕೋಮು ಉದ್ವಿಗ್ನತೆ ನಡುವೆಯೇ’ ತುಳು ನಾಡಿನಲ್ಲಿ ಕೈಗಾರಿಕೆಗಾಗಿ ಭೂಸ್ವಾಧೀನ!?

 

Donate Janashakthi Media

Leave a Reply

Your email address will not be published. Required fields are marked *