ಚಂದ್ರಯಾನ-3 ಚಂದ್ರನ ಅಂಗಳದ ಚಿತ್ರಗಳ ಕಳುಹಿಸಿದ ವಿಕ್ರಮ್‌ ಲ್ಯಾಂಡರ್‌

ಬೆಂಗಳೂರು: ಬಹುನಿರೀಕ್ಷಿತ ಚಂದ್ರಯಾನ-3ರ ವಿಕ್ರಮ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿಯುವುದನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಇದಕ್ಕೂ ಮೊದಲೇ ಚಂದ್ರಯಾನ-3 ಗಗನನೌಕೆಯು ಚಂದ್ರನ ಸನಿಹದಿಂದ ಫೋಟೋಗಳನ್ನು ಕ್ಲಿಕ್ಕಿಸಿದೆ.

ಇದನ್ನೂ ಓದಿ:CHANDRAYAAN-3 | ಚಂದ್ರಯಾನ-3 | ಇಸ್ರೋದಿಂದ ಯಶಸ್ವಿ ಉಡಾವಣೆ

ಲ್ಯಾಂಡರ್‌ ಇಳಿಯಲು ಆಗಸ್ಟ್‌-23ರ ಸಂಜೆ 6:04 ಕ್ಕೆ ಸಮಯ ನಿಗದಿಪಡಿಸಲಾಗಿದೆ. ಅದಕ್ಕಾಗಿ ಸುರಕ್ಷಿತ ಲ್ಯಾಂಡಿಂಗ್‌ಗೆ ಸೂಕ್ತ ಜಾಗವನ್ನು ಹುಡುಕುವ ನಿಟ್ಟಿನಲ್ಲಿ ಲ್ಯಾಂಡರ್‌ ಹಲವು ಚಿತ್ರಗಳನ್ನು ರವಾನಿಸಿದೆ.

ದೊಡ್ಡ ಅಘಾತದಿಂದಾಗಿ ಚಂದ್ರನ ಮೇಲೆ ರೂಪಗೊಂಡಿರುವ ಹೇನ್‌,ಬಾಸ್‌-ಎಲ್‌ ಮತ್ತು ಬೆಲ್ಕೊವಿಚ್‌,ಮತ್ತು ಹಂಬೋಲ್ಟಿಯಾನಮ್‌ ಹಾಗೂ ಚಂದ್ರನ ಮಾರಿಯಾ ಅಥವಾ ಬಸಾಲ್ಟಿಕ್‌ ಬಯಲುಗಳನ್ನು ಚಿತ್ರಗಳಲ್ಲಿ ಕಾಣಬಹುದಾಗಿದೆ.

 

 

 

ಬುಧವಾರ ಸಂಜೆ 6 ಗಂಟೆ 4 ನಿಮಿಷಕ್ಕೆ ಇಸ್ರೋ ಚಂದ್ರಯಾನ-3 ನೌಕೆಯ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ಸಜ್ಜಾಗಿದೆ. ಭಾರತದ ಈ ಸಾಧನೆಯತ್ತ ಇಡೀ ವಿಶ್ವವೇ ಕಾತುರದಿಂದ ಎದಿರು ನೋಡುತ್ತಿದ್ದು, ಭಾರತೀಯರು ಈ ಸಾಧನೆ ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಈ ಹಿಂದಿನ ಚಂದ್ರಯಾನ ಯೋಜನೆಯಲ್ಲಿ ಕೊನೆಕ್ಷಣದಲ್ಲಿ ಲ್ಯಾಂಡರ್‌ ಇಳಿಯುವ ಸಮಯದಲ್ಲಿ ವಿಫಲವಾಗಿತ್ತು. ಈ ಬಾರಿ ಭಾರತದ ಚಂದ್ರಯಾನ 3 ಯಶಸ್ವಿಯಾಗಲೆಂದು ಜನರು ಕಾಯುತ್ತಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *