ರಾಯಚೂರು: ವಿಜಯ್ ಸಂಕೇಶ್ವರ ಹೇಳಿದ ಮಾತನ್ನು ನಂಬಿ ಶಿಕ್ಷಕರೊಬ್ಬರು ಮೂಗಿಗೆ ನಿಂಬೆ ಹಣ್ಣಿನ ರಸ ಹಾಕಿಕೊಂಡ ಪರಿಣಾಮ ಸಾವನಪ್ಪಿರುವ ಘಟನೆ ಸಿಂಧನೂರು ನಗರದ ನಟರಾಜ ಕಾಲನಿಯಲ್ಲಿ ನಡೆದಿದೆ.
ಶಿಕ್ಷಕರೊಬ್ಬರು ಮೂಗಿನಲ್ಲಿ ನಿಂಬೆಹಣ್ಣಿನ ರಸ ಹಾಕಿಕೊಂಡ ಪರಿಣಾಮ ಆರೋಗ್ಯದಲ್ಲಿ ಏರುಪೇರಾಗಿ ಮೃತಪಟ್ಟಿದ್ದಾರೆ. ನಗರದ ಶರಣಬಸವೇಶ್ವರ ಕಾಲನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಸವರಾಜ(43) ಮೃತ ದುರ್ದೈವಿ. ಬೆಳಗ್ಗೆ ಆರೋಗ್ಯವಾಗಿಯೇ ಇದ್ದ ಅವರು, ನಿಂಬೆರಸ ಹಾಕಿಕೊಂಡ ಬಳಿಕ ಏಕಾಏಕಿ ಒದ್ದಾಡಿ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಇದನ್ನು ಓದಿ: ಸಾಲುಗಟ್ಟಿ ನಿಂತಿರುವ ಕೋವಿಡ್ ಮೃತದೇಹಗಳು : ಅಂತ್ಯಸಂಸ್ಕಾರಕ್ಕೆ ಇನ್‌ಫ್ಲೂಯೆನ್ಸ್
ಮೂಗಿನಲ್ಲಿ ನಾಲ್ಕು ಹನಿ ಲಿಂಬೆ ರಸ ಹಾಕುವುದರಿಂದ ಆಕ್ಸಿಜನ್ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಇತ್ತೀಚೆಗೆ ವಿಆರ್‌ಎಲ್ ಸಂಸ್ಥೆಯ ಮುಖ್ಯಸ್ಥ ವಿಜಯ್ ಸಂಕೇಶ್ವರ್ ಹೇಳಿದ್ದರು. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಅನೇಕರು ವಿಜಯಸಂಕೇಶ್ವರರ ಅಭಿಪ್ರಾಯಕ್ಕೆ ಸಮ್ಮತಿ ಸೂಚಿಸಿದ್ದರು. ಇನ್ನು ಇದನ್ನು ಸ್ವತಃ ನಾನು ಪ್ರಯೋಗಿಸಿದ್ದೇನೆ. ಪರಿಚಯದ 200 ಜನರ ಮೇಲೆ ಪ್ರಯೋಗ ಮಾಡಿ ಅರ್ಧ ಗಂಟೆಯಲ್ಲಿ ಉತ್ತಮ ಫಲಿತಾಂಶ ದೊರೆತಿದೆ ಎಂದು ಹೇಳಿದ್ದರು.
ಮೂಗಿಗೆ ನಿಂಬೆ ರಸ ಹಾಕಬೇಡಿ ಎಂದು
ಬಯೋ ಕೆಮಿಸ್ಟ್ರಿ ಪ್ರೊಫೆಸರ್ ನರೇಂದ್ರ ನಾಯಕ್ ಎಚ್ಚರಿಸಿದ್ದರು. ವಿಡಿಯೋ ಮಾಡುವ ಮೂಲಕ ಜಾಗೃತಿಯನ್ನು ಮೂಡಿಸಿದ್ದರು. ಸಂಕೇಶ್ವರ ಮಾತನ್ನು ಕೇಳಿ ಅವೈಜ್ಞಾನಿಕ ಪ್ರಯೋಗಕ್ಕೆ ಶಿಕ್ಷಕನೋರ್ವ ಪ್ರಾಣ ಕಳೆದುಕೊಳ್ಳುವಂತಾಗಿದೆ. ವಿಜಯ್ ಸಂಕೇಶ್ವರ ರವರ ಮೇಲೆ ಸುಮೊಟೊ ಕೇಸ್ ದಾಖಲಿಸಬೇಕು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
Not understanding what and whome to believe…..