ಉರಿವ ಚಿತೆಗಳ ನಡುವೆ ಜೋಕುಗಳು ಮತ್ತು ಮನದ ಮಾತುಗಳು

ವೇದರಾಜ್‌ ಎನ್.ಕೆ

 

ಎಪ್ರಿಲ್ 28ರಂದು ಸೋಂಕಿತರೆಂದು ಪತ್ತೆಯಾದವರ ಸಂಖ್ಯೆ ಮೂರೂವರೆ ಲಕ್ಷವನ್ನು ದಾಟಿದಾಗ, ಒಟ್ಟು ಕೋವಿಡ್‍ ಸಾವುಗಳ ಸಂಖ್ಯೆ 2 ಲಕ್ಷವನ್ನೂ ದಾಟಿದಾಗ ಮತ್ತು ದೇಶಾದ್ಯಂತ ಆಸ್ಪತ್ರೆ ಹಾಸಿಗೆಗಳು, ಆಕ್ಸಿಜನ್ ಗೆ ಹಾಹಾಕಾರ ಎದ್ದಿದ್ದಾಗ  ಕೇಳ ಬಂದ ಹೇಳಿಕೆಗಳಿವು:

ಈ ವರ್ಷ ನಾವು ಉತ್ತಮ ರೀತಿಯಲ್ಲಿ ಸಿದ್ಧರಾಗಿದ್ದೆವು .. -ಕೇಂದ್ರ ಆರೋಗ್ಯ ಮಂತ್ರಿ

..ಸಾಕಷ್ಟು ಬೆಡ್‍ ಗಳು, ಔಷಧಿಗಳು ಮತ್ತು ಆಕ್ಸಿಜನ್‍ ಇವೆ… –ಉತ್ತರ ಪ್ರದೇಶ ಮುಖ್ಯಮಂತ್ರಿ

…..ಮತ್ತು  ಇಷ್ಟೆಲ್ಲ “ನಮ್ಮ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ಯಾರಾದರೂ ಸತ್ತರೆ…”

… ಸಾವುಗಳ ಬಗ್ಗೆ ಚರ್ಚಿಸುವುದಕ್ಕೆ ಅರ್ಥವಿಲ್ಲ, ಏಕೆಂದರೆ ಅವರು ಮರಳಿ ಬರುವುದಿಲ್ಲ! – ಹರ್ಯಾಣದ ಮುಖ್ಯಮಂತ್ರಿ

(ವ್ಯಂಗ್ಯಚಿತ್ರ: ಮಂಜುಲ್, ಫಸ್ಟ್ ಪೋಸ್ಟ್)

***

ಮನದ ಮಾತುಗಳು …ಇವರದ್ದು…..

(ಪಿ.ಮಹಮ್ಮದ್, ಆಂದೋಲನ)

***

..ಮತ್ತು ಇವರದ್ದು…

(ಸಾತ್ವಿಕ್‍ ಗಡೆ, ದಿ ಹಿಂದು)

ಲಸಿಕೆಗಳು, ಸಾವುಗಳ ಎಣಿಕೆ, ಟ್ವೀಟ್‍ಗಳು, ಆಕ್ಸಿಜನ್‍ ಪೂರೈಕೆ…..

ಇವೆಲ್ಲವುಗಳ ಲೆಕ್ಕ ಮರೆಸಲು..?

***

ಆಕ್ಸಿಜನ್ ಕೊರತೆ ಇಲ್ಲ!                  ಲಸಿಕೆಗಳ ಕೊರತೆ ಇಲ್ಲ!

ಸುಳ್ಳುಗಳ ಕೊರತೆಯಂತೂ ಇಲ್ಲವೇ ಇಲ್ಲ..!

(ಅಲೋಕ್  ನಿರಂತರ್)

***

ನೆಗೆಟಿವ್‍ ಮತ್ತು ಪಾಸಿಟಿವ್

ಎರಡನೇ ಅಲೆಯ ವಿರುದ್ದ ದೇಶ ಉಸಿರು ಕಟ್ಟಿ ಸೆಣಸುತ್ತಿರುವಾಗ ಉತ್ತರ ಪ್ರದೇಶದ ಮುಖ್ಯಮಂತ್ರಿಗಳಿಗೆ ಮಾತ್ರವಲ್ಲ, ಆರೆಸ್ಸೆಸ್‍  ಸರಕಾರ್ಯವಾಹರಿಗೂ ದೇಶದಲ್ಲಿ ‘ನಕಾರಾತ್ಮಕತೆ’ (ನೆಗೆಟಿವಿಟಿ) ಹರಡಿಸಲಾಗುತ್ತಿದೆಯೆಂಬ ಚಿಂತೆ.

 ವೈದ್ಯಕೀಯ ವಿಷಯಗಳಲ್ಲಿ  ಸಕಾರಾತ್ಮಕ ಸುದ್ದಿ ಎಂದರೆ
ನಿಮ್ಮ ತಪಾಸಣೆ ‘ನೆಗೆಟಿವ್’’(ನಕಾರಾತ್ಮಕ) ಬಂದಾಗಲೇ, ಸ್ವಾಮೀ!

(ಇ.ಪಿ.ಉನ್ನಿ, ಇಂಡಿಯನ್‍ ಎಕ್ಸ್ ಪ್ರೆಸ್)

***

ಪಾಸಿಟಿವ್ ದರ ಏರುತ್ತಿಲ್ಲವೇಕೇ?        ಏರುತ್ತಿದೆ..ಆದರೆ ಸರ್ ಅದೇಕೆ ಏರಬೇಕು ಎನ್ನುತ್ತೀರಿ?

“ನಾನು ಕೊವಿಡ್‍ ಪಾಸಿಟಿವ್ ಎಣಿಕೆಯ ಬಗ್ಗೆ ಹೇಳುತ್ತಿಲ್ಲ”
ಎಲ್ಲವೂ ಚೆನ್ನಾಗಿದೆ ಎಂದು ಒಪ್ಪುವವರಿಗಿಂತ
ಎಲ್ಲವೂ ಸರಿಯಾಗಿಲ್ಲ ಎನ್ನುವವರ ಸಂಖ್ಯೆ ಹೆಚ್ಚುತ್ತಿದೆಯಲ್ಲಾ ಏಕೆ ಎಂದು!

(ಸಂದೀಪ ಅಧ್ವರ್ಯು, ಟೈಂಸ್‍ ಆಫ್‍ ಇಂಡಿಯ)

***

ಈ  ನಡುವೆ ವಿದೇಶಿ ಪತ್ರಿಕೆಗಳಲ್ಲಿ ಭಾರತದ ಕೊವಿಡ್‍ ಪರಿಸ್ಥಿತಿಯ ಚರ್ಚೆ, ಕಾರ್ಟೂನ್‍ಗಳು,
ಜತೆಗೆ ವಿದೇಶಗಳಿಂದ  ವೈದ್ಯಕೀಯ ನೆರವಿನ ಆಫರ್ ಗಳು ಬರುತ್ತಿವೆ.
ಯಾವುದು ಪಾಸಿಟಿವ್ ಪಟ್ಟಿಗೆ, ಯಾವುದು ನೆಗೆಟಿವ್‍ ಪಟ್ಟಿಗೆ ಗೊತ್ತಿಲ್ಲ.

ವಿಶ್ವಗುರು ಪರಿಸ್ಥಿತಿ ಗಂಭೀರ
ತಕ್ಷಣ ಜ್ಞಾನ ರವಾನಿಸಿ!

(ಆರ್. ಪ್ರಸಾದ್, ಇಕನಾಮಿಕ್‍ ಟೈಮ್ಸ್)

***

ಈ ವೇಳೆಗೆ, ಮೇ 3ರ ಮುಂಜಾನೆ ದೇಶದಲ್ಲಿ ಒಟ್ಟು ಕೋವಿಡ್‍ ಸೋಂಕಿತರ ಸಂಖ್ಯೆ 2 ಕೋಟಿಗೆ ಹತ್ತಿರ
ಹಿಂದಿನ 24 ಗಂಟೆಗಳಲ್ಲಿ ಸೋಂಕಿತರು: 3,69,942   ಮತ್ತು ಸಾವುಗಳು: 3421 ಒಟ್ಟು ಸಾವುಗಳು: 2,18,354
ಆಕ್ಸಿಜನ್ ಪೂರೈಕೆ, ಲಸಿಕೆ ನೀತಿಯ ಬಗ್ಗೆ ಸುಪ್ರಿಂ ಕೋರ್ಟ್ ಆದೇಶ ಇವೆಲ್ಲದರ ಬಗ್ಗೆ …………….

ಇಂದಿನ ಹೇಳಿಕೆ ನೀಡುವ ಸರದಿ ಯಾರದು?
ಆರೋಗ್ಯ ಮಂತ್ರಿ, ಅಥವ ವಿದೇಶಾಂಗ ಮಂತ್ರಿ,
ವಾಣಿಜ್ಯ ಮಂತ್ರಿ, ಕಾನೂನು ಮಂತ್ರಿ, ಅಥವ ಹಣಕಾಸು ಮಂತ್ರಿ….

( ರಾಜೇಂದ್ರ ಧೋಪಡ್‍ ಕರ್, ಕಾರ್ಟೂನಿಸ್ಟ್ಸ್‌ ಕ್ಲಬ್‍ ಆಫ್ ಇಂಡಿಯಾ)

Donate Janashakthi Media

Leave a Reply

Your email address will not be published. Required fields are marked *