ಉತ್ತರಪ್ರದೇಶಧ ಪ್ರಯಾಗ್‍ರಾಜ್‍ನಲ್ಲಿ ಮಾಜಿ ಸಂಸತ್ ಸದಸ್ಯ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಮತ್ತು ಮಾಧ್ಯಮಗಳ ಸಮ್ಮುಖದಲ್ಲಿಯೇ ಭೀಕರವಾಗಿ ಹತ್ಯೆಯಾಗಿರುವುದು ಉತ್ತರ ಪ್ರದೇಶವು ಸಂಪೂರ್ಣವಾಗಿ ಒಂದು ಕಾನೂನುಹೀನ ರಾಜ್ಯವಾಗಿ ಬಿಟ್ಟಿದೆ ಎಂಬುದನ್ನು ತೋರಿಸುತ್ತದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.
ಭಾರೀ ಪೊಲೀಸ್ ಬೆಂಗಾವಲು ಇದ್ದಾಗಲೂ ಈ ಇಬ್ಬರು ವ್ಯಕ್ತಿಗಳನ್ನು ಹತ್ಯೆ ಮಾಡಿದ ರೀತಿ ಇದರಲ್ಲಿ ಅಧಿಕೃತ ಶಾಮೀಲಿನ ಬೊಟ್ಟು ಮಾಡುತ್ತದೆ. ಇದನ್ನು ಎನ್‌ಕೌಂಟರ್ ಹತ್ಯೆಗಳು ಮತ್ತೆ-ಮತ್ತೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನೋಡಬೇಕು, ಇವು ನ್ಯಾಯಾಂಗಬಾಹಿರ ಕೊಲೆಗಳಲ್ಲದೆ ಬೇರೇನೂ ಅಲ್ಲ.
ಇಂತಹ ಪರಿಸ್ಥಿತಿಗೆ ಆದಿತ್ಯನಾಥ್ ಸರಕಾರವೇ ನೇರ ಹೊಣೆ ಎಂದಿರುವ ಸಿಪಿಐ(ಎಂ) ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆಯಾಗಬೇಕು ಮತ್ತು ಈ ಹತ್ಯೆಯ ಹಿಂದೆ ಇರುವವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.