UGCET ಫಲಿತಾಂಶ ಮೇ 24ರಂದು ಪ್ರಕಟ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೇ 24 ರಂದು, ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (UGCET/KCET) 2025ರ ಫಲಿತಾಂಶವನ್ನು ಪ್ರಕಟಿಸುತ್ತಿದೆ. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಬೆಳಿಗ್ಗೆ 11:30ಕ್ಕೆ KEA ಕಚೇರಿಯಲ್ಲಿ ಅಧಿಕೃತವಾಗಿ ಫಲಿತಾಂಶವನ್ನು ಘೋಷಿಸಲಿದ್ದಾರೆ .

ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಅಂಕಪಟ್ಟಿಗಳನ್ನು ಮಧ್ಯಾಹ್ನ 2 ಗಂಟೆಯ ನಂತರ ಕೆಳಗಿನ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಲಾಗಿನ್‌ ಆಗಿ ಪರಿಶೀಲಿಸಬಹುದು.

ಇದನ್ನು ಓದಿ :-ಕರ್ನಾಟಕ ಸರ್ಕಾರದಿಂದ 51,000 ಅತಿಥಿ ಶಿಕ್ಷಕರ ನೇಮಕಾತಿಗೆ ಅಧಿಕೃತ ಆದೇಶ

ಫಲಿತಾಂಶವನ್ನು ಪರಿಶೀಲಿಸಲು, ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಪಾಸ್ವರ್ಡ್ ಅನ್ನು ಬಳಸಬೇಕು. ಅಂಕಪಟ್ಟಿಯಲ್ಲಿ ವಿಷಯವಾರು ಅಂಕಗಳು, ಒಟ್ಟು ಅಂಕಗಳು ಮತ್ತು ಪಡೆದ ರ‍್ಯಾಂಕ್ ವಿವರಗಳು ಲಭ್ಯವಿರುತ್ತವೆ .

ಈ ವರ್ಷದ UGCET ಪರೀಕ್ಷೆ ಏಪ್ರಿಲ್ 15, 16 ಮತ್ತು 17 ರಂದು ರಾಜ್ಯದಾದ್ಯಂತ ನಡೆದಿತ್ತು. ಇದು ಇಂಜಿನಿಯರಿಂಗ್, ಫಾರ್ಮಸಿ, ಕೃಷಿ ಮತ್ತು ಇತರ ವೃತ್ತಿಪರ ಪದವಿ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಆಯೋಜಿಸಲಾಗಿತ್ತು .

ಇದನ್ನು ಓದಿ :-ಎಸ್‌ಬಿಐ: ಬ್ಯಾಂಕ್‌ನಲ್ಲೇ ಸಿಬ್ಬಂದಿಗಳಿಗೆ ಕನ್ನಡ ಕಲಿಕೆ ಪ್ರಾರಂಭ

ಫಲಿತಾಂಶ ಪ್ರಕಟನೆಯ ನಂತರ, KEA ವಿವಿಧ ಪದವಿ ಕೋರ್ಸ್‌ಗಳಿಗೆ ಸೀಟ್ ಹಂಚಿಕೆಗಾಗಿ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ. ಕೌನ್ಸೆಲಿಂಗ್ ವೇಳಾಪಟ್ಟಿ ಮತ್ತು ವಿವರಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು .

Donate Janashakthi Media

Leave a Reply

Your email address will not be published. Required fields are marked *