ಬೆಂಗಳೂರು: ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುವವರೇ ನಿಜವಾದ ಜನಪ್ರತಿನಿಧಿಗಳು. ಯುವಪೀಳಿಗೆ ಜನಸೇವೆಯ ಮೂಲಲಕ ವಿಧಾನಸೌಧ ಪ್ರವೇಶಿಸುವ ಸಂಕಲ್ಪ ತೊಡಬೇಕು ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಸಲಹೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ಸಿಟಿಜನ್ ಕನ್ನಡ ಮತ್ತು ಸಿಟಿಜನ್ ಇಂಡಿಯಾ ಸಮೂಹ ಮಾಧ್ಯಮ ಸಂಸ್ಥೆ, ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜು, ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಹಮ್ಮಿಕೊಂಡಿದ್ದ ನಾಗರಿಕ ಯುವ ಸಂಸತ್ತು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇದನ್ನೂ ಓದಿ:ಜಂಗಲ್ ಲಾಡ್ಜಸ್ : ಹಿರಿಯರ ನಾಗರಿಕರು ವಿದ್ಯಾರ್ಥಿಗಳಿಗೆ ವಿಶೇಷ ಪ್ಯಾಕೇಜ್ ನೀಡಲು ನಿರ್ಧಾರ-ಹೆಚ್.ಕೆ.ಪಾಟೀಲ್
ಶಾಸನಸಭೆಗೆ ಆಯ್ಕೆಯಾಗುವವರು ಉತ್ತಮ ಸಂಸದೀಯ ಪಟುಗಳಾಗುವ ಧ್ಯೇಯ ಹೊಂದಬೇಕು. ಜನಪ್ರತಿನಿಧಿಗಳು ಎಂದರೆ ಶಾಸಕರು ಎನ್ನುವ ಮನೋಭಾವ ಇರಬಾದರು. ಒಳ್ಳೆಯದನ್ನು ಮಾಡುವ ಮನಸ್ಸು ಇದ್ದರೆ ಗ್ರಾಮ ಪಂಚಾಯಿತಿ ಸದಸ್ಯರಾಗಿಯೂ ಜನಸೇವೆ ಮಾಡಬಹುದು ಎಂದು ಹೇಳೀದರು. ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿದೆ. ಜವಾಹರಲಾಲ್ ನೆಹರು, ಬಾಬು ರಾಜೇಂದ್ರ ಪ್ರಸಾದ್, ಬಿ.ಆರ್.ಅಂಬೇಡ್ಕರ್ ಸೇರಿದಂತೆ ಹಲವರು ಹಾಕಿದ ಬುನಾದಿಯ ಮೇಲೆ ವ್ಯವಸ್ಥೆಯನ್ನು ಕಟ್ಟಲಾಗಿದೆ ಎಂದು ಸ್ಮರಿಸಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ,ರಾಜ್ಯದಲ್ಲಿ ರಾಜಕೀಯ ತರಬೇತಿ ಕಾಲೇಜು ಆರಂಭಿಸಬೇಕು. ಈ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ. ಇದರಿಂದ ಭವಿಷ್ಯದ ಉತ್ತಮ ರಾಜಕಾರಣಗಳನ್ನು ರೂಪಿಸಲು ಸಾಧ್ಯವಾಗಲಿದೆ. ರಾಜಕಾರಣದ ಕೊಳೆ ತೊಳೆಯಲು ಅವಕಾಶವಾಗಲಿದೆ ಎಂದರು.
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಎಂ.ಜಯಕರ, ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ನಿರ್ದೇಶಕ,ದ್ವಾರಕನಾಥ್ ಬಾಬು,ಸಂಶೋಧನಾ ಮುಖ್ಯಸ್ಥ ರೇವಯ್ಯ ಒಡೆಯರ್,ಜಾನಪದ ವಿಶ್ವವಿದ್ಯಾಲಯದ ಕುಲಪತಿ ಭಾಸ್ಕರ್, ಸಿಟಿಜನ್ ಗ್ರೂಪ್ ಸಿಇಓ ಸ್ವಾತಿ ಚಂದ್ರಶೇಖರ್ ಉಪಸ್ಥಿತರಿದ್ದರು.