ಲಾಲ್​ಬಾಗ್​​ನಲ್ಲಿ ಫಲಪುಷ್ಪ ಪ್ರದರ್ಶಕ್ಕೆ:ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

ಬೆಂಗಳೂರು: ಬೆಂಗಳೂರಿನ ಲಾಲ್​ಬಾಗ್​​ನಲ್ಲಿ ಆಯೋಜಿಸಲಾಗಿರುವ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ-04 ಶುಕ್ರವಾರ ಚಾಲನೆ ನೀಡಿದ್ದಾರೆ.

ತೋಟಗಾರಿಕೆ ಇಲಾಖೆ 2.50 ಕೋಟಿ ರೂಪಾಯಿ ವೆಚ್ಚದಲ್ಲಿ ಫ್ಲವರ್​ ಶೋ ಆಯೋಜನೆ ಮಾಡಿದ್ದು, ಸಿಎಂ ಸಿದ್ದರಾಮಯ್ಯ ಅವರು ಇಂದು ಸಂಜೆ ಕೆಂಗಲ್ ಹನುಮಂತಯ್ಯ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

ಇದನ್ನೂ ಓದಿ:ಇಂದಿನಿಂದ ಗೃಹಲಕ್ಷ್ಮಿ ಯೋಜನೆಯ ನೊಂದಣಿ ಪ್ರಕ್ರಿಯೆ ಆರಂಭ: ಸಿಎಂ ಸಿದ್ದರಾಮಯ್ಯ ಚಾಲನೆ

ವಿವಿಧ ಬಗೆಹ ಹೂವಿನ ಅಲಂಕಾರಗಳನ್ನು ಗಮನಿಸಿ, ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು ಸಿಎಂ ಲಾಲ್ ಬಾಗ್ ಇಡೀ ವಿಶ್ವದಲ್ಲಿಯೇ ಪ್ರಸಿದ್ದವಾದ ಉದ್ಯಾನವನ. ಸುಮಾರು 240 ಎಕರೆ ವಿಸ್ತೀರ್ಣವಿರುವ ಈ ಉದ್ಯಾನವನದಲ್ಲಿ ವಿವಿಧ ಬಗೆಯ ಮರಗಿಡಗಳಿವೆ. ಬ್ರಿಟೀಷರ ಕಾಲದಲ್ಲಿದ್ದ ಈ ಉದ್ಯಾನವನಕ್ಕೆ ಐತಿಹಾಸಿಕ ಮಹತ್ವವಿದೆ ಎಂದರು.

140 ಎಕರೆ ಪ್ರದೇಶದಲ್ಲಿದ್ದ ಈ ಉದ್ಯಾನವನಕ್ಕೆ ಶ್ರೀ ಕೆಂಗಲ್ ಹನುಮಂತಯ್ಯನವರು ಇನ್ನೂ 100 ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿ, ಒಟ್ಟು 240 ಎಕರೆ ಪ್ರದೇಶದಲ್ಲಿರುವ ಅತಿ ದೊಡ್ಡ ಉದ್ಯಾನವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಫಲಪುಷ್ಪ ಪ್ರದರ್ಶವನ್ನು ಅತ್ಯುತ್ತಮವಾಗಿ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಕೆಂಗಲ್ ಹನುಮಂತಯ್ಯ ಜೀವನಾಧಾರಿತ ಪುಸ್ತಕವನ್ನು ಸಹ ಸಿಎಂ ಬಿಡುಗಡೆ ಮಾಡಿದರು. ಇಂದಿನಿಂದ ಆಗಸ್ಟ್ 15 ರವರೆಗೆ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ ವಿಧಾನಸೌಧದ ನಿರ್ಮಾತೃ ಕೆಂಗಲ್‌ ಹನುಮಂತಯ್ಯ ಅವರ ಹೂವಿನ ಪ್ರತಿಕೃತಿ ಪ್ರಮುಖ ಆಕರ್ಷಣೆಯಾಗಿದೆ.

Donate Janashakthi Media

Leave a Reply

Your email address will not be published. Required fields are marked *