ಭಾರತದ ರೂಪಾಯಿ ಕುಸಿತ; ವಿವಿಧ ವಸ್ತುಗಳ ಬೆಲೆ ಏರಿಕೆ ಸಾಧ್ಯತೆ

ನವದೆಹಲಿ: ಮುಂದಿನ ದಿನಗಳಲ್ಲಿ ಇನ್ನಷ್ಟು ಹಣದುಬ್ಬರ ಹಾಗೂ ವಿವಿಧ ವಸ್ತುಗಳ ಬೆಲೆ ಏರಿಕೆ ಗಣನೀಯವಾಗಿ ಹೆಚ್ಚಳವಾಗುವ ಸಾಧ್ಯತೆ ದೇಶದಲ್ಲಿ ದಟ್ಟವಾಗಿ ಕಾಣಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಭಾರತದ ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಮುಂದೆ ಇನ್ನೊಮ್ಮೆ ಸಾರ್ವಕಾಲಿಕ ಕುಸಿತ ಕಂಡಿರುವುದು.

ಇನ್ನೊಮ್ಮೆ ಡಾಲರ್‌ ಮುಂದೆ ಭಾರತದ ರೂಪಾಯಿಕುಸಿದಿದೆ. ಈ ಬಾರಿ ಎಲ್ಲಾ ಹಳೆಯ ದಾಖಲೆಗಳನ್ನು ಮರಿದಿದ್ದು, ಷೇರು ಮಾರುಕಟ್ಟೆಯಲ್ಲಿ ಏರಿಳಿತ ಮುಂದಿವರಿದಿರುವಾಗಲೇ ಈ ಬೆಳವಣಿಗೆ ಆಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಲೆ ಏರಿಕೆಯಾಗುವ ಆತಂಕ ಶುರುವಾಗಿದೆ. ಅದರ ವಿವರ ಇಲ್ಲಿದೆ.

ಡಾಲರ್‌ನ ಮುಂದೆ ರೂಪಾಯಿಯ ಮೌಲ್ಯ ಕುಸಿತ ಕಂಡಾಗಲೆಲ್ಲ ಬೆಲೆ ಏರಿಕೆ ಆಗಿರುವುದು ಇದೆ. ಅದರಲ್ಲೂ ಈ ಬಾರಿ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ದಿನಕ್ಕೊಂದು ಆದೇಶ ಮಾಡುತ್ತಿದ್ದು. ಇದು ವಿಶ್ವದ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ.

ಇದನ್ನೂ ಓದಿ: ಉದಯಗಿರಿ| ಮುಸ್ಲಿಂ ಸಮುದಾಯದ ಯುವಕರಿಂದ ಕಲ್ಲು ತೂರಾಟ

ಈಗಾಗಲೇ ಅಮೆರಿಕದ ಹೊಸ ಆರ್ಥಿಕ ನೀತಿ ಹಾಗೂ ಹೊಸ ತೆರಿಗೆ ನೀತಿಯಿಂದಾಗಿ ಭಾರತವೂ ಸೇರಿದಂತೆ ವಿವಿಧ ರಾಷ್ಟ್ರಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಇದೀಗ ಭಾರತದ ರೂಪಾಯಿ ಮೌಲ್ಯವು ಭಾರತದ ಇತಿಹಾಸದಲ್ಲೇ /ಸಾರ್ವಕಾಲಿಕ ದಾಖಲೆಯೊಂದನ್ನು ಮಾಡಿದೆ. ಅದೇನು ಎನ್ನುವ ವಿವರ ಮುಂದೆ ನೋಡೋಣ.

ಭಾರತೀಯ ರಿಸರ್ವ್ ಬ್ಯಾಂಕ್‌ ಹಣಕಾಸು ನೀತಿಯನ್ನು ಪರಿಶೀಲನೆ ಮಾಡುವುದಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವಾಗಲೇ ಈ ಬೆಳವಣಿಗೆ ನಡೆದಿದೆ. ರೂಪಾಯಿ ಮೌಲ್ಯದ ಆಧಾರದ ಮೇಲೆ ವಿವಿಧ ವಸ್ತುಗಳ ಮೇಲೆ ಪರಿಣಾಮ ಬೀರುತ್ತದೆ. ಈ ಬಾರಿ ಭಾರತದ ರೂಪಾಯಿಯೂ ಅಮೆರಿಕದ ಡಾಲರ್‌ನ ಮುಂದೆ ಭಾರೀ ಕುಸಿತ ಕಂಡಿದೆ. ಯುಎಸ್ ಡಾಲರ್ ವಿರುದ್ಧ ಭಾರತದ ರೂಪಾಯಿ 87 ರೂಪಾಯಿಗಿಂತ ಕಡಿಮೆಯಾಗಿದೆ. ಇದರಿಂದ ಆಮದು ವಸ್ತುಗಳ ಹಣದುಬ್ಬರ ಹಾಗೂ ದೇಶದ ಆಮದಿನ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಸೋಮವಾರ ಭಾರತದ ಕರೆನ್ಸಿಯು ಪ್ರತಿ ಡಾಲರ್‌ಗೆ 87.29ರೂ. ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಇದು ಮುಂದಿನ ದಿನಗಳಲ್ಲಿ ಭಾರತದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವ ಚರ್ಚೆ ಶುರುವಾಗಿದೆ. ಹಣದುಬ್ಬರ ನಿಶ್ಚಿತ ಎಂದೇ ಹೇಳಲಾಗುತ್ತಿದೆ.

ಅಮೆರಿಕದ ಟ್ಯಾಕ್ಸ್‌ ವಾರ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ ಅವರು ಅಮೆರಿಕ ಫಸ್ಟ್‌ ಎನ್ನುವುದನ್ನು ಶುರು ಮಾಡಿದ್ದಾರೆ. ಆದರೆ, ಅಮೆರಿಕದ ಈ ಟ್ಯಾಕ್ಸ್‌ ವಾರ್‌ನಿಂದ ಭಾರತವೂ ಸೇರಿದಂತೆ ವಿವಿಧ ದೇಶಗಳು ವಿಲವಿಲ ಎನ್ನುತ್ತಿವೆ. ಈಗಾಗಲೇ ಅಮೆರಿಕ ಕೆನಡಾ, ಮೆಕ್ಸಿಕೊ ಹಾಗೂ ಚೀನಾದ ಮೇಲೆ ಭಾರೀ ತೆರಿಗೆ ವಿಧಿಸುತ್ತಿದೆ. ವಿಶ್ವದ ಪ್ರಮುಖ ದೇಶಗಳ ಕರೆನ್ಸಿಯಲ್ಲಿ ಯುಎಸ್ ಡಾಲರ್ ಸಹ ಪ್ರಮುಖವಾಗಿದೆ.

ಯುಎಸ್‌ನ ಪ್ರತಿ ಸಣ್ಣ ನಿರ್ಧಾರವೂ ಸಹ ವಿಶ್ವದ ವಿವಿಧ ರಾಷ್ಟ್ರಗಳ ಮೇಲೆ ಪರಿಣಾಮ ಬೀರುತ್ತದೆ. ಇದೀಗ ಹೊಸ ತೆರಿಗೆ ನೀತಿಯು ಈ ಮಾದರಿಯ ಸಮಸ್ಯೆಗಳಿಗೆ ಕಾರಣವಾಗಿದೆ.

ಇದನ್ನೂ ನೋಡಿ: ಕೇಂದ್ರ, ರಾಜ್ಯ ಸರಕಾರಗಳ ವಿರುದ್ಧ ರೈತ ಕೂಲಿಕಾರರ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *