ಬಂಡಾಯದ ಬಾವುಟ ಹಾರಿಸಿರುವ ಬಿಜೆಪಿ ಕಟ್ಟಾಳು ಕೆ.ಎಸ್‌.ಈಶ್ವರಪ್ಪ

ಬೆಂಗಳೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯದ ಬಾವುಟ ಹಾರಿಸಿರುವ ಬಿಜೆಪಿ ಕಟ್ಟಾಳು ಕೆ.ಎಸ್‌.ಈಶ್ವರಪ್ಪ ವಿಚಾರ ಪಕ್ಷಕ್ಕೆ ಇನ್ನೂ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಸಂಧಾನದ ಎಲ್ಲ ಬಾಗಿಲುಗಳು ಮುಚ್ಚಿಕೊಳ್ಳುವ ಹಂತ ತಲುಪಿದೆ.

ಇದನ್ನು ಓದಿ : “ಬೌದ್ಧ ಧರ್ಮವನ್ನು ಪ್ರತ್ಯೇಕ ಧರ್ಮವಾಗಿ ಪರಿಗಣಿಸಬೇಕು” ಗುಜರಾತ್ ಸರ್ಕಾರದಿಂದ ಸುತ್ತೋಲೆ

ಈಶ್ವರಪ್ಪ ನಾಮಪತ್ರ ಸಲ್ಲಿಸಿದ್ದರೂ ವಾಪಸ್‌ ತೆಗೆದುಕೊಳ್ಳಬಹುದೆಂಬ ನಿರೀಕ್ಷೆ ಸಂಘ-ಪರಿವಾರದ ಹಿರಿಯರಲ್ಲಿತ್ತು. ಅದು ಈಗ ಹುಸಿಯಾಗುವ ಲಕ್ಷಣ ಕಾಣುತ್ತಿದೆ. ಯಡಿಯೂರಪ್ಪ, ವಿಜಯೇಂದ್ರ ಸಹಿತ ಯಾರೊಬ್ಬರೂ ಈಶ್ವರಪ್ಪ ಜತೆಗೆ ಮಾತುಕತೆಗೆ ಸಿದ್ಧರಿಲ್ಲ. ಹೀಗಾಗಿ ನಾಮಪತ್ರ ಹಿಂಪಡೆಯುವ ಕೊನೆಯ ಕ್ಷಣದವರೆಗೆ ಕಾಯ್ದು ಆ ಬಳಿಕ ಉಚ್ಚಾಟನೆ ಮಾಡುವ ನಿರ್ಧಾರವನ್ನು ಬಿಜೆಪಿ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಇದನ್ನು ನೋಡಿ : ತೇಜಸ್ವಿ ಸೂರ್ಯಗೆ ಮತ ನೀಡುವ ಮೊದಲು ಯೋಚಿಸಿ – ಮೋಹನ್ ರಾವ್ ಬಹಿರಂಗ ಪತ್ರ

Donate Janashakthi Media

Leave a Reply

Your email address will not be published. Required fields are marked *