ಪಠ್ಯಪುಸ್ತಕಗಳಲ್ಲಿ ಇನ್ನು ಮುಂದೆ ‘ಇಂಡಿಯಾ’ ಬದಲಿಗೆ ‘ಭಾರತ್’ | ಎನ್‌ಸಿಇಆರ್‌ಟಿ ಸಮಿತಿ ಶಿಫಾರಸು

ನವದೆಹಲಿ: ಮುಂದಿನ ಪುಸ್ತಕಗಳಲ್ಲಿ ದೇಶದ ಹೆಸರನ್ನು “ಇಂಡಿಯಾ” ಬದಲಿಗೆ “ಭಾರತ್” ಎಂದು ಮುದ್ರಿಸುವ ಪ್ರಸ್ತಾವನೆಯನ್ನು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಸಮಿತಿಯೊಂದರ ಸದಸ್ಯರು ಸರ್ವಾನುಮತದಿಂದ ಅಂಗೀಕರಿಸಿದ್ದಾರೆ ಎಂದು ವರದಿಯಾಗಿದೆ. NCERT ಪುಸ್ತಕಗಳ ವಿಷಯವನ್ನು ಬದಲಾಯಿಸುವ ಅಥವಾ ಮಾರ್ಪಡಿಸುವ ಕೆಲಸ ಮಾಡುತ್ತಿರುವ 25 ಪ್ಯಾನೆಲ್‌ಗಳಲ್ಲಿ ಇದೂ ಕುಡಾ ಒಂದಾಗಿದೆ.

ಅದಾಗ್ಯೂ, ಪ್ರಸ್ತಾವನೆಯನ್ನು ಸಣ್ಣ ಸಮಿತಿ ಮಾತ್ರ ಅಂಗೀಕರಿಸಿದ್ದು, ಇನ್ನೂ ಅಂತಿಮ ಒಪ್ಪಿಗೆ ಪಡೆಯಬೇಕಾಗಿದೆ. ಪ್ರಸ್ತಾವನೆಯನ್ನು ಈಗ ಹೆಚ್ಚಿನ ಪರಿಶೀಲನೆಗಾಗಿ ದೆಹಲಿಯ NCERT ಗೆ ಕಳುಹಿಸಲಾಗಿದೆ. ಸಮಿತಿಯ ಅಧ್ಯಕ್ಷ ಐಸಿ ಇಸಾಕ್ ಪ್ರಕಾರ, ಕೆಲವು ತಿಂಗಳ ಹಿಂದೆ ಪ್ರಸ್ತಾವನೆಯನ್ನು ಮುಂದಿಡಲಾಗಿದ್ದು, ಈಗ ಅದನ್ನು ಅಂಗೀಕರಿಸಲಾಗಿದೆ.

ಇದನ್ನೂ ಓದಿ: ಎನ್.ಸಿ.ಇ.ಆರ್.ಟಿ ಪಠ್ಯಗಳು: ಮೊಗಲರಷ್ಟೇ ಅಲ್ಲ, ಡಾರ್ವಿನ್‍ ಮತ್ತು ಪೈಥಾಗೊರಸ್‍ಗೂ ಖೊಕ್!

ದೇಶವನ್ನು ‘ಭಾರತ್’ ಎಂದು ಮರುನಾಮಕರಣ ಮಾಡಲಾಗುತ್ತದೆಯೇ ಎಂಬ ಚರ್ಚೆ ದೇಶದಾದ್ಯಂತ ನಡೆಯುತ್ತಿದ್ದು, ಇದೇ ವೇಳೆ NCERT ಸಮಿತಿಯ ಶಿಫಾರಸು ಹೊರ ಬಿದ್ದಿದೆ. ಈ ವರ್ಷದ ಆರಂಭದಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಯೋಜಿಸಿದ್ದ G20 ಔತಣಕೂಟದ ಆಹ್ವಾನ ಪತ್ರಿಕೆಯಲ್ಲಿ ಅವರನ್ನು “ಪ್ರೆಸಿಡೆಂಟ್ ಆಫ್ ಇಂಡಿಯಾ” ಬದಲಿಗೆ “ಪ್ರೆಸಿಡೆಂಟ್ ಆಫ್ ಭಾರತ್” ಎಂಬ ಹೆಸರು ಮುದ್ರಿಸಲಾಗಿತ್ತು. ಸರ್ಕಾರದ ಈ ನಡೆಯು ಭಾರಿ ರಾಜಕೀಯ ಗದ್ದಲಕ್ಕೆ ಕಾರಣವಾಗಿತ್ತು.

ಸಂವಿಧಾನದ 1(1)ನೇ ವಿಧಿಯು ನಮ್ಮ ದೇಶದ ಹೆಸರನ್ನು “ಇಂಡಿಯಾ, ಅಂದರೆ ಭಾರತ ರಾಜ್ಯಗಳ ಒಕ್ಕೂಟವಾಗಿರುತ್ತದೆ” ಎಂದು ಹೇಳುತ್ತದೆ. ಸೆಪ್ಟೆಂಬರ್‌ನಲ್ಲಿ ದೆಹಲಿಯ ಪ್ರಗತಿ ಮೈದಾನದಲ್ಲಿರುವ ಭಾರತ್ ಮಂಟಪದಲ್ಲಿ ಜಿ20 ನಾಯಕರ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಮುಂದಿದ್ದ ನಾಮಫಲಕದಲ್ಲಿ ಕೂಡಾ ‘ಭಾರತ್’ ಎಂಬ ಹೆಸರನ್ನು ಪ್ರದರ್ಶಿಸಲಾಗಿತ್ತು.

ಇದನ್ನೂ ಓದಿ: ಎನ್‌ಸಿಇಆರ್‌ಟಿ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯಲ್ಲಿ ಸುಧಾ ಮೂರ್ತಿ!

NCERT ಸಮಿತಿಯ ಇತರ ಶಿಫಾರಸುಗಳು

ಈ ಮಧ್ಯೆ, ಎನ್‌ಸಿಇಆರ್‌ಟಿ ಸಮಿತಿಯು ಪಠ್ಯಪುಸ್ತಕಗಳಲ್ಲಿ “ಹಿಂದೂ ವಿಜಯಗಳನ್ನು” ಹೈಲೈಟ್ ಮಾಡಲು ಶಿಫಾರಸು ಮಾಡಿದೆ. ಪಠ್ಯಪುಸ್ತಕಗಳಲ್ಲಿ ‘ಪ್ರಾಚೀನ ಇತಿಹಾಸ’ದ ಬದಲು ‘ಶಾಸ್ತ್ರೀಯ ಇತಿಹಾಸ’ ಪರಿಚಯಿಸುವಂತೆಯೂ ಶಿಫಾರಸು ಮಾಡಿದೆ.

ಭಾರತದ ವೈಜ್ಞಾನಿಕ ಪ್ರಗತಿ ಮತ್ತು ಜ್ಞಾನದ ಅರಿವಿಲ್ಲದೆ ದೇಶವು ಕತ್ತಲೆಯಲ್ಲಿತ್ತು ಎಂಬಂತೆ ಬಿಂಬಿಸಿ ಬ್ರಿಟಿಷರು ಮಾಡಿದಂತೆ ಇತಿಹಾಸವನ್ನು ಇನ್ನು ಮುಂದೆ ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಎಂದು ವಿಂಗಡಿಸಲಾಗುವುದಿಲ್ಲ ಎಂದು ಐಸಾಕ್ ಹೇಳಿದ್ದಾರೆ. ಸಮಿತಿಯು ಎಲ್ಲಾ ವಿಷಯಗಳ ಪಠ್ಯಕ್ರಮದಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಯನ್ನು (ಐಕೆಎಸ್) ಪರಿಚಯಿಸಲು ಶಿಫಾರಸು ಮಾಡಿದೆ.

ವಿಡಿಯೊ ನೋಡಿ: ಬನ್ನಿ ಮರದ ಮಹತ್ವ ಗೊತ್ತೆ ? ಬನ್ನಿ ಮರ ನಮ್ಮ ಬದುಕಿನ ಬಂಗಾರ! Janashakthi Media

Donate Janashakthi Media

Leave a Reply

Your email address will not be published. Required fields are marked *