ಅಸಭ್ಯ ವರ್ತನೆ ತೋರಿದ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಮೇಲೆ ಕಾನೂನು ಕ್ರಮ ಜರಿಗಿಸಿ | ಎಸ್‌ಎಫ್‌ಐ ಪ್ರತಿಭಟನೆ

ಗಂಗಾವತಿ : ಅಸಭ್ಯ ವರ್ತನೆ ತೋರಿದ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಮೇಲೆ ಕಾನೂನು ಕ್ರಮ ಜರಿಗಿಸಿ ಅಮಾನತ್ತು ಮಾಡಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ನೇತೃತ್ವದಲ್ಲಿ ವಿದ್ಯಾಥಿಗಳು ಪ್ರತಿಭಟನೆ ಮಾಡಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಮ್ಯಾನೇಜರ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.ವರ್ತನೆ 

ಎಸ್ ಎಫ್ ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ ಮಾತನಾಡಿ, ದಿನಾಂಕ: 07/12/2023 ರಂದು ಸಾಯಂಕಾಲ ಕೇಸರಹಟ್ಟಿಯಿಂದ ಸುಳೆಕಲ್ ಮಾರ್ಗವಾಗಿ ಹೋಗುವ ಬಸ್ ನಂಬರ್ ಕೆ ಎ 37 ಎಫ್ 0535 ಬಸ್ ನಲ್ಲಿ ತೆರಳುವ ಮಾರ್ಗದಲ್ಲಿ ವಿದ್ಯಾರ್ಥಿನಿಯರಿಗೆ ತಲೆಗೆ ಬಡಿಯುವುದು, ಚೂಟುವುದು, ಕೈಯಿಂದ ಬಾರಿಸುವುದು ಹೀಗೆ ಅಸಭ್ಯವಾಗಿ ನಡೆದುಕೊಂಡಿದ್ದಷ್ಟೆ ಅಲ್ಲದೆ  ಸರಿಯಾದ ಸಮಯಕ್ಕೆ ಬಸ್ ನಿಲ್ಲಿಸುವುದಿಲ್ಲಾ, ಪ್ರಶ್ನಿಸಿದರೆ ವಿದ್ಯಾರ್ಥಿನಿಯರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿದರು.

ಇದನ್ನೂ ಓದಿ:ಗಂಗಾವತಿ ಕಾನೂನು ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರ ವ್ಯವಸ್ಥೆಗೊಳಿಸಲು ಎಸ್‌ಎಫ್‌ಐ ಪ್ರತಿಭಟನೆ

ಇಂದು ಬೆಳೆಗ್ಗೆ ಸಹ ಅದೇ ರೀತಿಯಾಗಿ ಮಕ್ಕಳಿಗೆ ಕೈ ತೋರಿಸಿ ಅವಾಜ್ ಹಾಕಿರುತ್ತಾರೆ. ಹೈಸ್ಕೂಲ್ ಮಕ್ಕಳಿಗೆ ಶಾಲೆಯ ಸಮಯಕ್ಕೆ ಬಸ್ ಸರಿಯಾಗಿ ಬರುವುದಿಲ್ಲಾ ಇದರಿಂದಾಗಿ ಶಾಲಾ – ಕಾಲೇಜು ಸಮಯಕ್ಕೆ ವಿದ್ಯಾರ್ಥಿಗಳು ಹಾಜರಾಗದ ಸ್ಥಿತಿ ನಿರ್ಮಾಣವಾಗುತ್ತಿದೆ. ಆದ್ದರಿಂದ ಕೂಡಲೇ ಕೆ ಎ 37‌ ಎಫ್ 0535  ನಂಬರ್‌ ಇರುವ ಬಸ್‌ ಚಾಲಕ ಮತ್ತು ನಿರ್ವಾಹಕರ ಮೇಲೆ ಕಾನೂನು ಕ್ರಮ ಜರುಗಿಸಿ ಅವರನ್ನು ಅಮಾನತ್ತು ಮಾಡಬೇಕು. ಹಾಗೂ ಪೋಕ್ಸೋ ಕಾಯಿದೆ ಅಡಿಯಲ್ಲಿ ದೂರು ದಾಖಲಿಸಿಕೊಂಡು ಶಿಕ್ಷೆ ವಿಧಿಸಿ  ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಎಂದರು.

ಅನುಚಿತ ವರ್ತನೆ ತೋರಿದ ನಿರ್ವಾಹಕರನ್ನು ಕೂಡಲೇ ಅಮಾನತ್ತು ಮಾಡಬೇಕು. ಗ್ರಾಮೀಣ ಭಾಗದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜು ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಸಬೇಕು ಎಂಬ ಬೇಡಿಕೆಯುಳ್ಳ ಮನವಿ ಪತ್ರವನ್ನು ಅಧಿಕಾರಿಗಳಿಗೆ ಸಲ್ಲಿಸಿದರು.

ಈ ಪ್ರತಿಭಟನೆಯಲ್ಲಿ ಎಸ್ ಎಫ್ ಐ ತಾಲೂಕ ಸಮಿತಿ ಅಧ್ಯಕ್ಷ ಗ್ಯಾನೇಶ ಕಡಗದ, ಕಾರ್ಯದರ್ಶಿ ಶಿವುಕುಮಾರ ಹಾಗೂ ವಿದ್ಯಾರ್ಥಿಗಳಾದ ಹುಸೇನಮ್ಮ, ವಿಜಯಲಕ್ಷ್ಮೀ, ವೈಶಾಲಿ, ನಾಗರತ್ನ, ಜ್ಯೋತಿ, ಶಾಂತಾ, ಹುಲಿಗೆಮ್ಮ, ದುರುಗಮ್ಮ, ಸಂಜನಾ, ಗೌರಮ್ಮ, ಭಾಗ್ಯಾಶ್ರೀ, ವಿರೇಶ, ಸಂತೋಷ, ಸುದೀಪ್ , ಮಣಿಕಂಠ ಇತರರು ಇದ್ದರು.ವರ್ತನೆ 

ವಿಡಿಯೋ ನೋಡಿ:ಚಳಿಗಾಲದ ಅಧಿವೇಶನ ಬೆಳಗಾವಿ 2023| ಡಿಸೆಂಬರ್‌ 08 | ಭಾಗ 01 Live

Donate Janashakthi Media

Leave a Reply

Your email address will not be published. Required fields are marked *