ಚೆನ್ನೈ: ಸಂಸತ್ತಿನಲ್ಲಿ ಇತ್ತೀಚೆಗೆ ನಡೆದ ಭದ್ರತಾ ಉಲ್ಲಂಘನೆ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಆರೋಪದ ಮೇಲೆ ತಿರುಚ್ಚಿ ಪೊಲೀಸ್ ಸೈಬರ್ ಕ್ರೈಂ ವಿಭಾಗವು ತಮಿಳುನಾಡು ಬಿಜೆಪಿ ಯುವ ಘಟಕದ ಸಾಮಾಜಿಕ ಮಾಧ್ಯಮ ಉಸ್ತುವಾರಿ ವಿರುದ್ಧ ಶುಕ್ರವಾರ ಪ್ರಕರಣ ದಾಖಲಿಸಿದೆ. ಆರೋಪಿಯನ್ನು ಟ್ವಿಟರ್‌ನಲ್ಲಿ ‘ಸಂಘಿ ಪ್ರಿನ್ಸ್’ ಎಂಬ ಹ್ಯಾಂಡಲ್ ಅನ್ನು ನಡೆಸುತ್ತಿರುವ ಪ್ರವೀಣ್‌ರಾಜ್ ಎಂದು ಗುರುತಿಸಲಾಗಿದೆ.
ಸಂಸತ್ತಿನ ಒಳಗೆ ಜಿಗಿದ ದುಷ್ಕರ್ಮಿಗಳಿಗೆ ಧರ್ಮಪುರಿಯ ಡಿಎಂಕೆ ಸಂಸದ ಡಾ. ಸೆಂಥಿಲ್ ಕುಮಾರ್ ಪಾಸ್ ವಿತರಿಸಿದ್ದಾರೆ ಎಂದು ಆರೋಪಿಯು ಸುಳ್ಳು ಸುದ್ದಿ ಹರಡಿದ್ದನು. ವಕೀಲ ಆರೋಕಿಯದಾಸ್ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದ್ದು, ನಾಮಕ್ಕಲ್ ಜಿಲ್ಲೆಯ ರಾಶಿಪುರಂ ನಿವಾಸಿಯಾಗಿರುವ ಪ್ರವೀಣ್‌ರಾಜ್ ಇದೀಗ ತಲೆಮರೆಸಿಕೊಂಡಿದ್ದಾನೆ. ಭದ್ರತಾ ಉಲ್ಲಂಘನೆ
ಇದನ್ನೂ ಓದಿ: ಐಎಎಸ್ ರೋಹಿಣಿ ಸಿಂಧೂರಿ ವಿರುದ್ಧದ ಪೋಸ್ಟ್ ಡಿಲೀಟ್ ಮಾಡಿ – ಐಪಿಎಸ್ ಡಿ. ರೂಪಾಗೆ ಸುಪ್ರೀಂ ಆದೇಶ
ಆರೋಪಿಯು ಇದೀಗ ಈ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾನೆ. “ಲೋಕಸಭಾದಲ್ಲಿ ಭದ್ರತಾ ಲೋಕ ಏಕೆ ಸಂಭವಿಸಿತು ಎಂದು ನಿಮಗೆ ತಿಳಿದಿದೆಯೇ? . ನಿಮ್ಮಂತಹ ಬೇಜವಾಬ್ದಾರಿ ಸಂಸದರು, ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರಕ್ಕಾಗಿ ಯಾವುದೆ ಪರಿಶೀಲನೆ ಇಲ್ಲದೆ ಸಂದರ್ಶಕರ ಪಾಸ್‌ಗಳನ್ನು ಹಂಚುತ್ತಿದ್ದಕ್ಕಾಗಿ. ಸಂಸತ್ತಿನ ಮೇಲೆ ದಾಳಿ; ಈ ಘಟನೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಿ..” ಎಂದು ಡಿಸೆಂಬರ್ 13 ರಂದು ಪ್ರವೀಣ್‌ರಾಜ್ ಬರೆದಿದ್ದನು.
அப்பட்டமான போலி செய்தியை எந்த சமூக பொறுப்பும் இல்லாமல் பரப்பிவிட்டு,
அதை போலி என சுட்டிக்காட்டினால் அதற்கு வசைபாடிவிட்டு, தேவையானவரை அப்போலி செய்தி பரவியவுடன் அதை நீக்கிவிட்டு எதுவும் நடக்காதது போல கடந்து செல்வது என்ன மாதிரியான நிலைபாடுஇதில் என்னதான் கிடைக்கிறது இவர்களுக்கு,… pic.twitter.com/LzS7aJeX1v
— Niranjan kumar (@niranjan2428) December 13, 2023
ಇದನ್ನೂ ಓದಿ: ಪ್ಯಾಲೆಸ್ತೀನ್ ಕಲಾವಿದರಿಗೆ ಬೆಂಬಲ | ಸಮುದಾಯ ಕರ್ನಾಟಕ 8 ನೇ ರಾಜ್ಯ ಸಮ್ಮೇಳನ ನಿರ್ಣಯ
ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) 504, 505(1)(b) ಮತ್ತು ಮಾಹಿತಿ ತಂತ್ರಜ್ಞಾನ (IT) ಕಾಯಿದೆಯ ವಿಭಾಗ 66 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಪ್ರವೀಣ್‌ರಾಜ್ ಅವರನ್ನು ಈ ವರ್ಷದ ಅಕ್ಟೋಬರ್‌ನಲ್ಲಿ ಕರೂರು ಪೊಲೀಸರು ಬಂಧಿಸಿದ್ದರು.
ಡಿಸೆಂಬರ್ 13 ರಂದು ಲೋಕಸಭೆಯಲ್ಲಿ ಅಧಿವೇಶನ ನಡೆಯುತ್ತಿರುವಾ ಸಂಸತ್ತಿನಲ್ಲಿ ಗಂಭೀರ ಭದ್ರತಾ ಉಲ್ಲಂಘನೆ ನಡೆದಿತ್ತು. ಸಂದರ್ಶಕರ ಗ್ಯಾಲೆರಿಯಲ್ಲಿದ್ದ ಮನೋರಂಜನ್ ಡಿ. ಮತ್ತು ಸಾಗರ್ ಶರ್ಮಾ ಎಂಬ ಇಬ್ಬರು ಆರೋಪಿಗಳು ಸದನಕ್ಕೆ ನುಗ್ಗಿ, ಹಳದಿ ಹೊಗೆ ಸೂಸುವ ಬಾಂಬ್ ಎಸೆದಿದ್ದರು. ಜೊತೆಗೆ ‘ಸರ್ವಾಧಿಕಾರಕ್ಕೆ ಧಿಕ್ಕಾರ’ ಎಂಬ ಘೋಷಣೆ ಕೂಗಿದ್ದಾರೆ. ಅಷ್ಟೆ ಅಲ್ಲದೆ, ಸಂಸತ್ತಿನ ಹೊರಗೆ ನೀಲಂ ಮತ್ತು ಅಮೋಲ್ ಶಿಂಧೆ ಮತ್ತಿಬ್ಬರು ವ್ಯಕ್ತಿಗಳು ಸಂಸತ್ತಿನ ಆವರಣವನ್ನು ಪ್ರವೇಶಿಸಿ ಬಣ್ಣದ ಹೊಗೆ ಸೂಸುವ ಬಾಂಬ್‌ಗಳೊಂದಿಗೆ ಪ್ರತಿಭಟನೆ ನಡೆಸಿದ್ದಾರೆ.
ಈ ಧ್ಯೆ, ನಾಲ್ಕು ವ್ಯಕ್ತಿಗಳಿಗೆ ಆಶ್ರಯ ನೀಡಿದ ಆರೋಪದ ಮೇಲೆ ವಿಶಾಲ್ ಶರ್ಮಾ ಎಂಬಾತನನ್ನು ಗುರ್ಗಾಂವ್‌ನಿಂದ ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿ ದೆಹಲಿಯಲ್ಲಿ ಶರಣಾಗಿದ್ದಾನೆ ಎಂದು ವರದಿಯಾಗಿದೆ.
ವಿಡಿಯೊ ನೋಡಿ: SFI ನಾಯಕನ ಫೋಟೋ ಹಾಕಿ ಈತನೇ ಮನೋರಂಜನ್ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಬಿಜೆಪಿ Janashakthi Media