ಐಎಎಸ್ ರೋಹಿಣಿ ಸಿಂಧೂರಿ ವಿರುದ್ಧದ ಪೋಸ್ಟ್‌ ಡಿಲೀಟ್ ಮಾಡಿ – ಐಪಿಎಸ್ ಡಿ. ರೂಪಾಗೆ ಸುಪ್ರೀಂ ಆದೇಶ

ನವದೆಹಲಿ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧದ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಡಿಸೆಂಬರ್ 15 ರ ಶುಕ್ರವಾರದೊಳಗೆ ತೆಗೆದುಹಾಕುವಂತೆ ಸುಪ್ರೀಂ ಕೋರ್ಟ್ ಐಪಿಎಸ್ ಅಧಿಕಾರಿ ಡಿ. ರೂಪಾ ಅವರಿಗೆ ಗುರುವಾರ ಆದೇಶ ನೀಡಿದೆ. ರೂಪಾ ಅವರು ಸಿಂಧೂರಿ ಸಲ್ಲಿಸಿದ್ದ ಕ್ರಿಮಿನಲ್ ಮಾನನಷ್ಟ ದೂರನ್ನು ರದ್ದುಗೊಳಿಸುವಂತೆ ಕೋರಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಕೋರ್ಟ್‌ ಈ ನಿರ್ದೇಶನವನ್ನು ನೀಡಿದೆ.

ಮಧ್ಯಸ್ಥಿಕೆ ಮೂಲಕ ಸಮಸ್ಯೆಯನ್ನು ಪರಿಹರಿಸಲು ರಾಜ್ಯದ ಎರಡೂ ಅಧಿಕಾರಿಗಳಿಗೆ ಸೂಚಿಸಿತ್ತು ಡಿಸೆಂಬರ್ 13 ರಂದು ಸುಪ್ರೀಂ ಕೋರ್ಟ್ ಸೂಚಿಸಿತ್ತು. ಆದರೆ ವಿಚಾರಣೆ ವೇಳೆ ಅಧಿಕಾರಿಗಳು ಮಧ್ಯಸ್ಥಿಕೆ ಕಾರ್ಯಸಾಧುವಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಐಎಎಸ್-ಐಪಿಎಸ್ ಅಧಿಕಾರಿಗಳು ಈ ರೀತಿ ಜಗಳವಾಡಿದರೆ ಆಡಳಿತ ಹೇಗೆ ಕೆಲಸ ಮಾಡುತ್ತದೆ ಎಂದು ಪೀಠವು ಹೇಳಿದ್ದಾಗಿ ಲೈವ್ ಲಾ ಉಲ್ಲೇಖಿಸಿದೆ.

ಇದನ್ನೂ ಓದಿ: ನಕಲಿ ದಾಖಲೆಗಳನ್ನು ಸೃಷ್ಟಿಸಿ ನ್ಯಾಯಾಲಯದಲ್ಲಿ ಶ್ಯೂರಿಟಿ; 9 ಮಂದಿ ಬಂಧನ

ಇಬ್ಬರು ಅಧಿಕಾರಿಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಸಾಧ್ಯವಾಗದಿರುವುದು ನಿರಾಸೆ ತಂದಿದೆ ಎಂದು ನ್ಯಾಯಮೂರ್ತಿಗಳಾದ ಎಸ್ ಓಕಾ ಮತ್ತು ಪಂಕಜ್ ಮಿಥಾಲ್ ಅವರನ್ನೊಳಗೊಂಡ ಪೀಠ ಹೇಳಿದ್ದು, “ಪ್ರಕರಣದ ಅರ್ಹತೆಯ ಮೇಲೆ ವಿಚಾರಣೆ ನಡೆಸಲಾಗುವುದು” ಎಂದು ತಿಳಿಸಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಸಿಂಧೂರಿ ವಿರುದ್ಧದ ಪೋಸ್ಟ್‌ಗಳ ವಿವರವನ್ನು ಡಿಸೆಂಬರ್ 15 ರಂದು ಅಫಿಡವಿಟ್ ಸಲ್ಲಿಸಬೇಕು ಎಂದು ನ್ಯಾಯಮೂರ್ತಿ ಓಕಾ ರೂಪಾ ಅವರಿಗೆ ಆದೇಶಿಸಿದ್ದಾರೆ. ಯಾವುದೇ ಕಾರಣಕ್ಕೂ ರೂಪಾ ಅವರು ಪೋಸ್ಟ್‌ಗಳನ್ನು ಅಳಿಸಲು ಸಾಧ್ಯವಾಗದಿದ್ದರೆ, ರೋಹಿಣಿ ವಿರುದ್ಧದ ಹೇಳಿಕೆಗಳನ್ನು ಹಿಂಪಡೆಯುವ ಬಗ್ಗೆ ಸ್ಪಷ್ಟನೆ ನೀಡುವ ಒಂದು ಪೋಸ್ಟನ್ನಾದರೂ ಮಾಡುವಂತೆ ಅವರಿಗೆ ಸೂಚಿಸಲಾಗಿದೆ.

ಇದನ್ನೂ ಓದಿ: NDTV ನಂತರ IANS ಕೂಡಾ ಅದಾನಿ ಗ್ರೂಪ್ ವಶಕ್ಕೆ!

ಇಡೀ ವಿವಾದವನ್ನು ಕೊನೆಗೊಳಿಸುವುದು ನ್ಯಾಯಾಲಯದ ಉದ್ದೇಶವಾಗಿದೆ ಎಂದು ಹೇಳಿದ ನ್ಯಾಯಮೂರ್ತಿ ಓಕಾ, “ನಾವು ಇಡೀ ವಿವಾದವನ್ನು ಅಂತ್ಯಗೊಳಿಸಲು ಬಯಸುತ್ತೇವೆ. ನಿಮ್ಮ ಪರವಾಗಿ ಇದನ್ನು ಮಾಡುತ್ತಿಲ್ಲ, ಬದಲಾಗಿ ರಾಜ್ಯದ ಆಡಳಿತದ ಸಲುವಾಗಿ ಇದನ್ನು ಮಾಡುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.

ಈ ವರ್ಷದ ಆರಂಭದಲ್ಲಿ, ಸಿಂಧೂರಿ ಅವರ ವೈಯಕ್ತಿಕ ಚಿತ್ರಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಂಡಿದ್ದ ರೂಪಾ ಅವರು, ಅವರ ವಿರುದ್ಧ ಭ್ರಷ್ಟಾಚಾರ ಸೇರಿದಂತೆ 19 ಆರೋಪಗಳನ್ನು ಆರೋಪಿಸಿದ್ದರು. ಇದರ ನಂತರ ರಾಜ್ಯದ ಇಬ್ಬರು ಅಧಿಕಾರಿಗಳ ನಡುವೆ ಸಾರ್ವಜನಿಕವಾಗಿ ವಾಗ್ವಾದ ನಡೆದಿತ್ತು. ಅಷ್ಟೆ ಅಲ್ಲದೆ, ರೂಪಾ ಅವರು ಸಿಂಧೂರಿ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದರು.

ಇದರ ನಂತರ ಸಿಂಧೂರಿ ಅವರು ರೂಪಾ ವಿರುದ್ಧ ಮಾನನಷ್ಟಕ್ಕಾಗಿ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಗಳನ್ನು ಪ್ರಾರಂಭಿಸಿದ್ದರು.

ವಿಡಿಯೊ ನೋಡಿ: ಪಿಚ್ಚರ್‌ ಪಯಣ – 144ಸಿನೆಮಾ : ಈ ಬಂಧನನಿರ್ದೇಶನ : ವಿಜಯಲಕ್ಷ್ಮಿ ಸಿಂಗ್‌ಕಥೆ ಹೇಳುವವರು: ಭಾವನಾ ಮರಾಠೆ

Donate Janashakthi Media

Leave a Reply

Your email address will not be published. Required fields are marked *