ದೇವದುರ್ಗ: ಪಟ್ಟಣದ ಕಾರ್ಮಿಕ ಇಲಾಖೆ ಮುಂದೆ ಕರ್ನಾಟಕ ರಾಜ್ಯ ಕಟ್ಟಡ & ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್(CWFI) ಸಂಘಟನೆ ಮುಖಂಡರು ಕಟ್ಟಡ ನಿರ್ಮಾಣ ಕಾರ್ಮಿಕರ ಸಮಸ್ಯೆಗಳು ಹಾಗೂ ಹಲವು ಬೇಡಿಕೆಗಳಿಗಾಗಿ ಒತ್ತಾಯಿಸಿ ಪ್ರತಿಭಟನೆ ಸೋಮವಾರ ನಡೆಸಿದರು. ಕಲ್ಯಾಣ
ಬಳಿಕ ಕಾರ್ಮಿಕ ಸಂಘಟನೆಯ ರಾಜ್ಯ ಕಾರ್ಯದರ್ಶಿ ಶಬ್ಬೀರ್ ಜಾಲಹಳ್ಳಿ ಮಾತನಾಡಿ ಹೈಕೋರ್ಟ್ ತೀರ್ಪಿನಂತೆ 2021-22 ಮತ್ತು 2022-23ರ ಶೈಕ್ಷಣಿಕ ಸಹಾಯಧನಕ್ಕಾಗಿ ಬಾಕಿ ಇರುವ ಅರ್ಜಿಗಳಿಗೆ 2021ರ ನೋಟಿಫಿಕೇಶನ್ ಹಾಗೂ ಹೈಕೋರ್ಟ್ ಆದೇಶದಂತೆ ಸಹಾಯಧನವನ್ನು ಕೂಡಲೇ ಮಂಡಳಿ ಪಾವತಿ ಮಾಡಬೇಕು. ಕಾರ್ಮಿಕರು ಬಳಕೆ ಮಾಡಲು ಯೋಗ್ಯವಿಲ್ಲದ ಟೂಲ್ ಕಿಟ್ ಇತರೆ ಕಿಟ್ ಖರೀದಿ ವ್ಯವಹಾರಗಳನ್ನು ಕೂಡಲೇ ಕಲ್ಯಾಣ ಮಂಡಳಿ ಅವರು ನಿಲ್ಲಿಸಬೇಕು ಎಂದರು.
ಇದನ್ನೂ ಓದಿ: ಸಿಪಿಐ(ಎಂ) ಹಿರಿಯ ನಾಯಕ ಎಂ.ಆರ್. ಶೆಣೈ ನಿಧನ
ಎಸ್.ಎಸ್.ಪಿ ಪೋರ್ಟಲ್‌ನಲ್ಲಿ ಶೈಕ್ಷಣಿಕ ಸಹಾಯಧನಕ್ಕೆ ಸಲ್ಲಿಸುವ ಅರ್ಜಿಗಳಿಗೆ ಎಸ್.ಎಸ್.ಪಿ ಗೆ ಸಂಬಂಧಿಸಿದ ಓ.ಟಿ.ಆರ್. ಸಂಖ್ಯೆಯನ್ನು ಪಡೆಯುವುದು ನಿಲ್ಲಿಸಿ, ಪೋಸ್ಟ್ ಮೆಟ್ರಿಕ್ CBSE ಓದುತ್ತಿರುವ ವಿದ್ಯಾರ್ಥಿಗಳಿಗಾಗಿ SSP ನಲ್ಲಿ ಸಲ್ಲಿಸಲು ಅವಕಾಶ ನೀಡಬೇಕು.
ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಿನಲ್ಲಿ 258,79 ಕೋಟಿ ಅವ್ಯವಹಾರ ಮತ್ತು ಕೋವಿಡ್ ಸಂದರ್ಭದಲ್ಲಿ ಕಲ್ಯಾಣ ಮಂಡಳಿಯ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರವಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು, ಕಾರ್ಮಿಕರು ಮನೆ ನಿರ್ಮಾಣಕ್ಕೆ 5 ಲಕ್ಷ ರೂಪಾಯಿ ಸಹಾಯಧನ ನೀಡಬೇಕು.

ಸ್ಲಂ ಬೋರ್ಡಗೆ ನೀಡಿರುವ 54 ಕೋಟಿ ಮಂಡಳಿ ಹಣವನ್ನು ಹಿಂಪಡೆಯಲು ಕ್ರಮವಹಿಸಬೇಕು ಒಂದು ವೇಳೆ ನಿರ್ಲಕ್ಷ್ಯ ತೋರಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಇದೆ ಸಂದರ್ಭದಲ್ಲಿCWFI ಸಂಘಟನೆ ತಾಲೂಕ ಕಾರ್ಯದರ್ಶಿ ಯುಸಫ್ ಸಾಬ್, ರೈತ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ. ವಿದ್ಯಾರ್ಥಿ ಸಂಘಟನೆ ತಾಲೂಕು ಅಧ್ಯಕ್ಷ ಮಹಾಲಿಂಗ ದೊಡ್ಡಮನಿ. ಕಾರ್ಮಿಕ ಸಂಘಟನೆಯ ಮುಖಂಡರಾದ ಹನುಮಂತ ಬಿದರಾಣಿ ಬಸವರಾಜ ಚಿಂಚೋಡಿ. ಮೈಹಿಬೂಬ್ ಕುರಕುಂದಿ. ಯಂಕಪ್ಪ ಮಡಿವಾಳ .ಅಕ್ಬರ್ .ಮೈಹಿಬೂಬ್. ಸರ್ನೊಬತ್ ಮತ್ತು ಇತರರು ಇದ್ದರು.
ಇದನ್ನೂ ನೋಡಿ: ವಚನಾನುಭವ | ನಿಮ್ಮನರಿಯದ ಕಾರಣ ಕೈಯಲ್ಲಿ ಹುಲ್ಲು Janashakthi Media
