ಜನಗಳ ಹೋರಾಟಗಳ ವಿರುದ್ಧ ಕೇಂದ್ರ ಸರಕಾರದ ಸುಳ್ಳುಗಳ ಅಬ್ಬರ

ತೀವ್ರ ಪ್ರತಿ-ಪ್ರಚಾರ ನಡೆಸಬೇಕು–ಸಿಪಿಐ(ಎಂ) ಪೊಲಿಟ್‌ಬ್ಯುರೊ ಕರೆ ದೆಹಲಿ:ದೇಶದಲ್ಲಿ ಈಗ ನಡೆಯುತ್ತಿರುವ ಜನಗಳ ಹೋರಾಟಗಳ ಬಗ್ಗೆ ಕೇಂದ್ರ ಸರಕಾರ ಸುಳ್ಳು ಮಾಹಿತಿಗಳ ಅಬ್ಬರವನ್ನೇ ಹರಿಯಬಿಟ್ಟಿದೆ. ಇದರ ವಿರುದ್ಧ ಒಂದು ತೀವ್ರವಾದ ಪ್ರಚಾರ–ಪ್ರಕ್ಷೆಭೆ ನಡೆಸಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಕರೆ ನೀಡಿದೆ. ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟಗಳೊಂದಿಗೆ ಸೌಹಾರ್ದ ಕಾರ್ಯಾಚರಣೆಗಳನ್ನು ಸಂಘಟಿಸಬೇಕು ಮತ್ತು ಕಾರ್ಮಿಕ ವರ್ಗ ವ್ಯಾಪಕ ಪ್ರಮಾಣದ ಖಾಸಗೀಕರಣ, ಕಾರ್ಮಿಕ ಕಾನೂನುಗಳ ರದ್ಧತಿ ಮತ್ತು ಭಾರತದ ರಾಷ್ಟ್ರೀಯ ಆಸ್ತಿಗಳ ಲೂಟಿಯ ವಿರುದ್ದ ನಡೆಸುತ್ತಿರುವ ಕಾರ್ಯಾಚರಣೆಗಳನ್ನು ಬೆಂಬಲಿಸಬೇಕು ಎಂದು ಅದು  ತನ್ನ ಎಲ್ಲ ಘಟಕಗಳಿಗೆ ಕರೆ ನೀಡಿದೆ. ಡಿಸೆಂಬರ್19ರಂದು ನಡೆದ ಪೊಲಿಟ್‌ಬ್ಯುರೊದ ಆನ್‌ಲೈನ್ ಸಭೆಯ ನಂತರ ಪ್ರಕಟಿಸಿರುವ ಹೇಳಿಕೆಯಲ್ಲಿ ಈ ಕರೆಗಳನ್ನು ನೀಡಲಾಗಿದೆ:…

ಕೇರಳ ಪಂಚಾಯತ್ ಚುನಾವಣೆಗಳಲ್ಲಿ ಎಲ್.ಡಿ.ಎಫ್.ಗೆ ದೊಡ್ಡ ವಿಜಯ

ನಕಾರಾತ್ಮಕ ಪ್ರಚಾರಕ್ಕೆ ಜನತೆಯ ತಕ್ಕ ಉತ್ತರ : ಸಿಪಿಐ(ಎಂ) ಪೊಲಿಟ್ ಬ್ಯುರೊ ಕೇರಳದ ಮೂರು ಸ್ತರಗಳ ಪಂಚಾಯತುಗಳು ಮತ್ತು ನಗರ ಪ್ರದೇಶಗಳ…