“ಬಯಲು ಶೌಚ ಮುಕ್ತ ಭಾರತ” – ಬರಿ ಓಳು!!

ಭಾರತದ ಎಲ್ಲ ಹಳ್ಳಿಗಳು  ‘ಬಯಲು ಶೌಚ ಮುಕ್ತ’ (ODF – Open Defecation Free) ವಾಗಿವೆ ಎಂದು ಭಾರತ ಸರಕಾರ 2019ರಲ್ಲೇ ಘೋಷಿಸಿತ್ತು. ಆದರೆ ಇತ್ತೀಚೆಗೆ ಪ್ರಕಟವಾದ Multiple Indicator Survey (MIS)ಯ ದತ್ತಾಂಶಗಳು ಇದನ್ನು ಪ್ರಶ್ನಿಸಿದೆ  ಮಾತ್ರವಲ್ಲ ಈ ಘೋಷಣೆಯ ಸ್ವಲ್ಪ ಮೊದಲು ಮತ್ತು ಆ ಮೇಲೆ ಪ್ರಕಟವಾದ ಸರಕಾರದ್ದೇ 3 ಇತರ ವಿವಿಧ ಸಮೀಕ್ಷೆಗಳು ಇದನ್ನು ಈಗಾಗಲೇ ಪ್ರಶ್ನಿಸಿವೆಯೆಂದು ಮಾರ್ಚ್ 13 ರ ‘ದಿ ಹಿಂದು’ ವಿಶ್ಲೇಷಿಸಿದೆ. ಹೀಗೆ ಪ್ರಶ್ನಿಸಿದ ಹಿಂದಿನ 3 ಸಮೀಕ್ಷೆಗಳು – National Statistical Office ಸಮೀಕ್ಷೆ (ಅಕ್ಟೋಬರ್ 2018), National Annual Rural Sanitation Survey (2019-20), National Family Health Survey (2019-21).

ಸ್ವಚ್ಛ ಭಾರತ ಮಿಶನ್ ಗ್ರಾಮೀಣ (SBMG) ವೆಬ್ ಸೈಟಿನ ಪ್ರಕಾರ ಅಕ್ಟೋಬರ್ 2018ರಲ್ಲೇ ಮಧ್ಯಪ್ರದೇಶ, ತಮಿಳುನಾಡಿನ ಎಲ್ಲ ಹಳ್ಳಿಗಳು ‘ಬಯಲು ಶೌಚ ಮುಕ್ತ’ವಾಗಿದ್ದವು. ಆದರೆ ಅದೇ ತಿಂಗಳ NSO ಸಮೀಕ್ಷೆ ಪ್ರಕಾರ ‘ಬಯಲು ಶೌಚ ಮುಕ್ತ’ ತೆಯ ಪ್ರಮಾಣ ಆ ರಾಜ್ಯಗಳಲ್ಲಿ ಅನುಕ್ರಮವಾಗಿ 71 ಮತ್ತು 63% ಆಷ್ಟೇ ಆಗಿತ್ತು. ಮಾರ್ಚ್ 2019ರಲ್ಲಿ SBMG ವೆಬ್ ಸೈಟ್ 24 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ‘ಬಯಲು ಶೌಚ ಮುಕ್ತ’ವಾಗಿದ್ದವೆಂದು ತೋರಿಸಿತ್ತು. ಆದರೆ ಆರು ತಿಂಗಳ ನಂತರದ  NARSS ಸಮೀಕ್ಷೆ ಪ್ರಕಾರ 24 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ‘ಬಯಲು ಶೌಚ ಮುಕ್ತ’ತೆ ಶೇ.90ಕ್ಕಿಂತ ಕಡಿಮೆಯಿತ್ತು.

ಮಾರ್ಚ್ 2019ರಲ್ಲಿ ಗುಜರಾತ್ ನ 99.4%ಗ್ರಾಮೀಣ ಕುಟುಂಬಗಳು ಸ್ವಂತ ಶೌಚಾಲಯ ಗಳನ್ನು ಹೊಂದಿದ್ದುವೆಂದು SBMG ವೆಬ್ ಸೈಟ್ ತೋರಿಸುತ್ತಿತ್ತು. ಆದರೆ NFHS ಸಮೀಕ್ಷೆ ಪ್ರಕಾರ 2019ರ ಉತ್ತರಾರ್ಧದಲ್ಲೂ 63.3% ಗ್ರಾಮೀಣ ಕುಟುಂಬಗಳು ಮಾತ್ರ ಸ್ವಂತ ಶೌಚಾಲಯ ಗಳನ್ನು ಬಳಸುತ್ತಿದ್ದವು. ಇತ್ತೀಚಿನ MIS ಸಮೀಕ್ಷೆ ಪ್ರಕಾರ ಜನವರಿ 2020 ಮತ್ತು ಅಗಸ್ಟ್ 2021ರ ನಡುವೆ ನಡೆಸಲಾದ ಸಮೀಕ್ಷೆಯಲ್ಲಿ ಶೇ. 21.3% ಯಾವುದೇ ರೀತಿಯ (ಸ್ವಂತ, ಜಂಟಿ, ಸಾರ್ವಜನಿಕ) ಶೌಚಾಲಯ ಬಳಕೆಗೆ ಸಿಗುತ್ತಿಲ್ಲವೆಂದಿದ್ದಾರೆ.

ಎಲ್ಲ ಗ್ರಾಮೀಣ ಕುಟುಂಬಗಳಿಗೆ ಶೌಚಾಲಯ ದೊರೆತು ಪ್ರತಿ ಗ್ರಾಮವನ್ನು ‘ಬಯಲು ಶೌಚ ಮುಕ್ತ’ (ODF) ಗೊಳಿಸುವುದು ಈ ಹಂತ-1 ರ ಕಾರ್ಯಕ್ರಮದ ಗುರಿಯಾಗಿತ್ತು. ಈ ಗುರಿ ಮುಟ್ಟಲಾಗಿದೆ ಎಂದು ಘೋಷಿಸಿದ್ದರೂ, ನಿಜವಾಗಿಯೂ ಮುಟ್ಟಿಲ್ಲವೆಂಬುದು ಸ್ಪಷ್ಟ. ಗ್ರಾಮೀಣ ಕುಟುಂಬಗಳು ಮಾತ್ರವಲ್ಲ ಶಾಲೆ/ಅಂಗನವಾಡಿ ಗಳೂ ಹಂತ 2 ರಲ್ಲಿ ಸ್ವಂತ ಶೌಚಾಲಯ ಹೊಂದಿರಬೇಕೆಂಬುದು  ‘ಬಯಲು ಶೌಚ ಮುಕ್ತ ಪ್ಲಸ್ (ODF+) ನ ಯೋಜನೆಯ ಗುರಿ. ಈ ಯೋಜನೆ ಆರಂಭವಾದ ಮೇಲೆ ODF+ ಗ್ರಾಮಗಳ ಮಾಹಿತಿ ಮಾತ್ರ SBMG ವೆಬ್ ಸೈಟ್ ತೋರಿಸುತ್ತದೆ. ಶೌಚಾಲಯ ಹೊಂದಿರುವ ಕುಟುಂಬಗಳ ಮಾಹಿತಿಯನ್ನು ಕೈಬಿಡಲಾಗಿದೆ. ODF+ ಗ್ರಾಮಗಳು ಎಪ್ರಿಲ್ 2022ರಲ್ಲಿ 8% ಇದ್ದರೆ, ಮಾರ್ಚ್ 2023ರಲ್ಲಿ 34% ಆಗಿದೆ.

ಅಂದರೆ, “ಬಯಲು ಶೌಚ ಮುಕ್ತ ಭಾರತ” – ಬರಿ ಓಳು !!

 

Donate Janashakthi Media

Leave a Reply

Your email address will not be published. Required fields are marked *