ಮುಂಬೈ: ರಾಮಾಯಣವನ್ನು ನಾಟಕದಲ್ಲಿ ಅವಹೇಳ ಮಾಡಿದ್ದಾರೆ ಎನ್ನುವ ಕಾರಣಕ್ಕೆ ವಿದ್ಯಾರ್ಥಿಗಳಿಗೆ ದಂಡ ವಿಧಿಸಲಾಗಿದೆ. ಎಂಟು ವಿದ್ಯಾರ್ಥಿಗಳಿಗೆ ಮುಂಬೈ ಐಐಟಿ ಸಂಸ್ಥೆ 1.2ಲಕ್ಷ ರೂ ದಂಡ ಹೇರಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆ ಮಾರ್ಚ್ 31 ರಂದು ರಂಗೋತ್ಸವ ಆಯೋಜಿಸಿತ್ತು. ಈ ವೇಳೆ ವಿದ್ಯಾರ್ಥಿಗಳು ‘ರಾಹೋವಣ’ ಎಂಬ ನಾಟಕ ಪ್ರದರ್ಶನ ಮಾಡಿದ್ದರು. ರಾಮಾಯಣವನ್ನು ಸ್ಕಿಟ್ ಮೂಲಕ ಪ್ರದರ್ಶಿಸಿರುವ ಎಂಟು ವಿದ್ಯಾರ್ಥಿಗಳು ರಾಮಾಯಣಕ್ಕೆ ಅವಹೇಳನ ಮಾಡಿದ್ದಾರೆ.
ಈ ನಾಟಕದಲ್ಲಿ ಹಿಂದೂಗಳ ನಂಬಿಕೆಗಳು ಮತ್ತು ದೇವತೆಗಳ ಬಗ್ಗೆ ಅವಹೇಳನಕಾರಿ ಸಂಭಾಷಣೆ ಇದೆ ಎಂದು ಆರೋಪಿಸಿ ವಿದ್ಯಾರ್ಥಿಗಳ ಒಂದು ಗುಂಪು ಆಡಳಿತ ಮಂಡಳಿಗೆ ದೂರು ನೀಡಿತ್ತು.“ಸ್ತ್ರೀವಾದ”ದ ಹೆಸರಿನಲ್ಲಿ ರಾಮ, ಲಕ್ಷ್ಮಣ ಸೇರಿದಂತೆ ಪ್ರಮುಖ ಪಾತ್ರಗಳನ್ನು ಮತ್ತು ಸಾಂಸ್ಕೃತಿಕ ಮೌಲ್ಯಗಳ ಬಗ್ಗೆ ಕೇವಲವಾಗಿ ಸಂಭಾಷಣೆ ಬರೆಯಲಾಗಿದೆ.
ಇದನ್ನೂ ಓದಿ: ಕೆಲವರ ಅತ್ಯಾಚಾರ, ಹಲವರಿಗೆ ಗರ್ಭಪಾತ: ನೆಟ್‌ವರ್ಕಿಂಗ್ ಕೆಲಸದ ಹೆಸರಿನಲ್ಲಿ ನೂರಕ್ಕೂ ಹೆಚ್ಚಿನ ಹುಡುಗಿಯರ ಕಥೆ
ರಾಮನನ್ನು ‘ದೆವ್ವ’ ಎಂದು ಚಿತ್ರಿಸಲಾಗಿದೆ. ಸೀತಾ, ರಾಮ ಮತ್ತು ಲಕ್ಷ್ಮಣನ ಪಾತ್ರಗಳಲ್ಲಿ ಅನುಚಿತ ಭಾಷೆ ಮತ್ತು ಸನ್ನೆಗಳನ್ನು ಬಳಸಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದ್ದರು.
ಸಂಸ್ಥೆಯು ನಾಲ್ಕು ವಿದ್ಯಾರ್ಥಿಗಳಿಗೆ ತಲಾ 1.2 ಲಕ್ಷ ದಂಡವನ್ನು ವಿಧಿಸಿದ್ದು, ಮೊತ್ತವು ಸೆಮಿಸ್ಟರ್‌ನ ಬೋಧನಾ ಶುಲ್ಕದಂತೆಯೇ ಇರುತ್ತದೆ. ಉಳಿದ ನಾಲ್ವರು ವಿದ್ಯಾರ್ಥಿಗಳಿಗೆ ತಲಾ 40,000 ದಂಡ ವಿಧಿಸಲಾಗಿದೆ. ರಾಹೋವಣ’ದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆ ಶುರುವಾಗಿದೆ.
ಇದನ್ನೂ ನೋಡಿ: ನಿರಂಜನ 100 ಚಿರಸ್ಮರಣೆ | ಕಯ್ಯೂರು ವೀರರ ಕಥೆJanashakthi Media