SIR ಕರ್ನಾಟಕ | ಮೂರು ದಿನದಲ್ಲಿ 1.12 ಕೋಟಿ ಗಣತಿ ನಮೂನೆ ವಿತರಣೆ

ಬೆಂಗಳೂರು: ರಾಜ್ಯದಲ್ಲಿ ಜೂನ್ 30ರಿಂದ ಆರಂಭವಾಗಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಅಭಿಯಾನದ ಮೂರನೇ ದಿನದ ಅಂತ್ಯದ ವೇಳೆಗೆ 1,12,65,893 ಎಣಿಕೆ ನಮೂನೆಗಳನ್ನು (Enumeration Forms) ಬಿಎಲ್‌ಒಗಳು ವಿತರಿಸಿದ್ದಾರೆ. ಇದು ರಾಜ್ಯದ ಒಟ್ಟು 5,54,32,314 ಮತದಾರರ ಪೈಕಿ ಶೇ.20.32ರಷ್ಟಾಗಿದೆ. ಇದೇ ವೇಳೆ 6,12,618 ನಮೂನೆಗಳನ್ನು ಡಿಜಿಟೈಸೇಶನ್ ಮಾಡಲಾಗಿದ್ದು, ಇದು ಶೇ.1.11ರಷ್ಟಾಗಿದೆ.

ಎರಡನೇ ದಿನ (ಜುಲೈ 1) ಸಂಜೆ 6 ಗಂಟೆಯ ವೇಳೆಗೆ 70,94,506 ನಮೂನೆಗಳು ವಿತರಣೆಗೊಂಡಿದ್ದವು. ಮೂರನೇ ದಿನದಲ್ಲಿ ಹೆಚ್ಚುವರಿಯಾಗಿ 41,71,387 ನಮೂನೆಗಳನ್ನು ವಿತರಿಸುವ ಮೂಲಕ ಒಟ್ಟು ಸಂಖ್ಯೆ 1,12,65,893ಕ್ಕೆ ಏರಿಕೆಯಾಗಿದೆ. ಡಿಜಿಟೈಸೇಶನ್ ಪ್ರಕ್ರಿಯೆಯೂ ಎರಡನೇ ದಿನದ 3,70,636ರಿಂದ ಮೂರನೇ ದಿನದ ಅಂತ್ಯಕ್ಕೆ 6,12,618ಕ್ಕೆ ತಲುಪಿದ್ದು, ಒಂದೇ ದಿನದಲ್ಲಿ 2,41,982 ನಮೂನೆಗಳನ್ನು ಹೆಚ್ಚುವರಿಯಾಗಿ ಡಿಜಿಟೈಸ್ ಮಾಡಲಾಗಿದೆ.

ಇದೇ ಅವಧಿಯಲ್ಲಿ ಮತದಾರರು ಆನ್‌ಲೈನ್ ಮೂಲಕ ಸಲ್ಲಿಸಿದ ನಮೂನೆಗಳ ಸಂಖ್ಯೆ 34,681ರಿಂದ 37,783ಕ್ಕೆ ಏರಿಕೆಯಾಗಿದೆ. ಮೃತಪಟ್ಟ ಮತದಾರರು 3,967, ಶಾಶ್ವತವಾಗಿ ಸ್ಥಳಾಂತರಗೊಂಡವರು 2,637, ಈಗಾಗಲೇ ನೋಂದಾಯಿತರಾಗಿರುವವರು 821, ಪತ್ತೆಯಾಗದ ಅಥವಾ ಗೈರಾದವರು 97 ಹಾಗೂ ಇತರೆ ಕಾರಣಗಳಿಂದ 60 ಪ್ರಕರಣಗಳನ್ನು ಗುರುತಿಸಲಾಗಿದೆ. ಒಟ್ಟಾರೆ 7,582 ಪ್ರಕರಣಗಳನ್ನು ASDDO ಎಂದು ಗುರುತಿಸಲಾಗಿದೆ.

ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿರುವಂತೆ, ಮನೆ ಮನೆಗೆ ಭೇಟಿ ನೀಡಿ ಎಣಿಕೆ ನಮೂನೆಗಳ ವಿತರಣೆ ಹಾಗೂ ಸಂಗ್ರಹ ಕಾರ್ಯ ಮತ್ತು ಡಿಜಿಟೈಸೇಶನ್ ಪ್ರಕ್ರಿಯೆ ಜೂನ್ 30ರಿಂದ ಜುಲೈ 29ರವರೆಗೆ ನಡೆಯಲಿದೆ.

 

Donate Janashakthi Media

Leave a Reply

Your email address will not be published. Required fields are marked *