ಲೋಕಸಭಾ ಚುನಾವಣೆಯಲ್ಲಿ ಸಹೋದರಿಯ ವಿರುದ್ಧ ಪತ್ನಿಯನ್ನು ಕಣಕ್ಕಿಳಿಸಿ ತಪ್ಪು ಮಾಡಿದೆ – ಅಜಿತ್ ಪವಾರ್

ಮುಂಬೈ: ‘ಲೋಕಸಭಾ ಚುನಾವಣೆಯಲ್ಲಿ ಸಹೋದರಿ ಸುಪ್ರಿಯಾ ಸುಳೆ ವಿರುದ್ಧ ಪತ್ನಿ ಸುನೇತ್ರ ಪವಾರ್ ರನ್ನು ಕಣಕ್ಕಿಳಿಸಿ ತಪ್ಪು ಮಾಡಿದೆ‘ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್, ಜನ್ ಸಮ್ಮಾನ್ ಯಾತ್ರೆ ವೇಳೆ ‘ಜೈ ಮಹಾರಾಷ್ಟ್ರ’ ಸುದ್ದಿ ವಾಹಿನಿಯೊಂದಿಗೆ ಮಾತನಾಡಿ, ವಿಷಾದ ವ್ಯಕ್ತಪಡಿಸಿದರು. ಅವರು ‘ರಾಜಕೀಯ ಮನೆ ಪ್ರವೇಶಿಸಲು ಬಿಡಬಾರದಿತ್ತು’ ಎಂದು ಹೇಳಿದರು.

‘ನಾನು ನನ್ನ ಎಲ್ಲಾ ಸಹೋದರಿಯರನ್ನು ಪ್ರೀತಿಸುತ್ತೇನೆ. ರಾಜಕೀಯ ಮನೆ ಪ್ರವೇಶಿಸಲು ಬಿಡಬಾರದಿತ್ತು. ತಂಗಿಯ ಎದುರು ಪತ್ನಿಯನ್ನು ಕಣಕ್ಕಿಳಿಸಿ ತಪ್ಪು ಮಾಡಿದೆ. ಇದು ನಡೆಯಬಾರದಿತ್ತು. ಆದರೆ ಎನ್‌ಸಿಪಿಯ ಸಂಸದೀಯ ಮಂಡಳಿ ಈ ನಿರ್ಧಾರ ಮಾಡಿತ್ತು. ಈಗ ಇದು ತಪ್ಪು ಎನಿಸುತ್ತಿದೆ’ ಎಂದರು.

ಇದನ್ನೂ ಓದಿ: ಕೈಯಲ್ಲಿ ಯಾವುದೇ ಕೆಲಸವಿಲ್ಲ, ಸಾಲದ ಸುಳಿಯಲ್ಲಿ ನಟ, ಊಟ ತಿನ್ನದೆ ತಿಂಗಳಾಯ್ತು.. ಮನಬಿಚ್ಚಿ ಮಾತನಾಡಿದ ಹಿಂದಿ ನಟ

ಮುಂದಿನ ವಾರ ರಕ್ಷಾ ಬಂಧನದ ದಿನದಂದು ಸುಪ್ರಿಯಾ ಸುಳೆ ಅವರನ್ನು ಭೇಟಿಯಾಗುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಇದೀಗ ನಾನು ರಾಜ್ಯ ಪ್ರವಾಸದಲ್ಲಿದ್ದೇನೆ. ಆ ದಿನ ನಾನು ಅಲ್ಲಿದ್ದರೆ(ಸುಪ್ರಿಯಾ ಇರುವ ಸ್ಥಳದಲ್ಲಿ) ಖಂಡಿತ ಭೇಟಿಯಾಗುತ್ತೇನೆ’ ಎಂದು ಹೇಳಿದರು.

‘ರೈತರು, ಮಹಿಳೆಯರು, ಕಲ್ಯಾಣ ಯೋಜನೆಗಳ ಬಗ್ಗೆ ಮಾತ್ರ ನಾನು ಮಾತನಾಡುತ್ತೇನೆ. ಟೀಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ’ ಎಂದು ಇದೇ ವೇಳೆ ಹೇಳಿದರು.

ಲೋಕಸಭಾ ಚುನಾವಣೆ ವೇಳೆ ಅಜಿತ್ ಪವಾರ್ ಚಿಕ್ಕಪ್ಪ ಶರದ್‌ ಪವಾರ್ ಅವರ ಪುತ್ರಿ, ಹಾಲಿ ಸಂಸದೆ ಸುಪ್ರಿಯಾ ಸುಳೆ ವಿರುದ್ಧ ಬಾರಾಮತಿ ಕ್ಷೇತ್ರದಿಂದ ಸುನೇತ್ರ ಪವಾರ್ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಸುನೇತ್ರ ಅವರು ಸೋತಿದ್ದರು. ನಂತರ ರಾಜ್ಯಸಭಾ ಸದಸ್ಯೆಯಾಗಿ ಆಯ್ಕೆಯಾದರು.

ಇದನ್ನೂ ನೋಡಿ: ‘ಆಕಾಶಕ್ಕೆ ಏಣಿ ಹಾಕು’ ಕವನ ಸಂಕಲನದ ಕುರಿತು ಎಸ್. ಜಿ.‌ಸಿದ್ದರಾಮಯ್ಯ ಮಾತುಗಳುJanashakthi Media

Donate Janashakthi Media

Leave a Reply

Your email address will not be published. Required fields are marked *