ಪೆರಿಯಾರ್ ರಾಮಸ್ವಾಮಿ ಅವರ ಜನ್ಮದಿನದ ಪ್ರಯುಕ್ತ ಅವರದೊಂದು ಕವನ….
ದೊಡ್ಡ ದೇಶವೊಂದು
ಚಿಕ್ಕ ದೇಶವನ್ನು ಶೋಷಿಸಿದೊಡೆ,
ನಾನು
ಚಿಕ್ಕ ದೇಶದ ಪರವಾಗಿ ನಿಲ್ಲುತ್ತೇನೆ
ಚಿಕ್ಕ ದೇಶದ ಬಹುಸಂಖ್ಯಾತ ಧರ್ಮವೊಂದು
ಅಲ್ಪಸಂಖ್ಯಾತ ಧರ್ಮವನ್ನು ಶೋಷಿಸಿದೊಡೆ,
ನಾನು
ಅಲ್ಪಸಂಖ್ಯಾತ ಧರ್ಮದ ಪರವಾಗಿ ನಿಲ್ಲುತ್ತೇನೆ
ಅಲ್ಪಸಂಖ್ಯಾತ ಧರ್ಮದಲ್ಲಿ ಜಾತಿಯಿದ್ದು,
ಒಂದು ಜಾತಿ ಮತ್ತೊಂದು ಜಾತಿಯನ್ನು
ಶೋಷಿಸಿದೊಡೆ,
ನಾನು
ಶೋಷಿತ ಜಾತಿಯ ಪರವಾಗಿ ನಿಲ್ಲುತ್ತೇನೆ
ಶೋಷಿತ ಜಾತಿಯಲ್ಲಿನ ಮಾಲೀಕ
ತನ್ನ ನೌಕರನನ್ನು ಶೋಷಿಸಿದೊಡೆ,
ನಾನು
ನೌಕರನ ಪರವಾಗಿ ನಿಲ್ಲುತ್ತೇನೆ.
ನೌಕರ ಮನೆಗೆ ತೆರಳಿ
ತನ್ನ ಹೆಂಡತಿಯನ್ನು ಶೋಷಿಸಿದೊಡೆ,
ನಾನು
ಆ ಮಹಿಳೆಯ ಪರವಾಗಿ ನಿಲ್ಲುತ್ತೇನೆ
ಒಟ್ಟಾರೆ,
ಶೋಷಣೆಯೇ ನನ್ನ ಶತ್ರು