ಮಹಾರಾಷ್ಟ್ರದಲ್ಲಿ ರೈತರ ಆತ್ಮಹತ್ಯೆಯಲ್ಲಿ ತೀವ್ರ ಏರಿಕೆ: 8 ತಿಂಗಳಲ್ಲಿ 1,800+ ಸಾವು

ಮುಂಬೈ: ರಾಜ್ಯ ಪರಿಹಾರ ಮತ್ತು ಪುನರ್ವಸತಿ ಇಲಾಖೆ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ ಈ ವರ್ಷದ ಜನವರಿಯಿಂದ ಆಗಸ್ಟ್ ನಡುವೆ ಮಹಾರಾಷ್ಟ್ರದ 1,875 ರೈತರು ಆತ್ಮಹತ್ಯೆಗೆ  ಶರಣಾಗಿದ್ದಾರೆ ಎಂದು ಟೈಮ್ಸ್ ಆಫ್‌ ಇಂಡಿಯಾ ವರದಿ ಮಾಡಿದೆ.

2021ರ ಇದೇ ಅವಧಿಯಲ್ಲಿ 1605 ಮಂದಿ ಸಾಲದ ಹೊರೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿಂದೆ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ಮಹಾ ವಿಕಾಸ ಅಗಾಡಿ ಸರ್ಕಾರ ಹಲವು ಸಾಲ ಮನ್ನಾ ಯೋಜನೆಗಳನ್ನು ಪ್ರಕಟಿಸಿದ ಹೊರತಾಗಿಯೂ ರೈತರ ಆತ್ಮಹತ್ಯೆ ಸರಣಿ ಮುಂದುವರಿದಿದೆ. ಇತ್ತೀಚೆಗೆ ಮುಖ್ಯಮಂತ್ರಿ ಏಕನಾಥ ಶಿಂಧೆ ಮಹಾರಾಷ್ಟ್ರವನ್ನು ರೈತರ ಆತ್ಮಹತ್ಯೆ ಮುಕ್ತ ರಾಜ್ಯವನ್ನಾಗಿ ಮಾಡುವ ಭರವಸೆ ನೀಡಿದ್ದರು.

ರೈತರ ಉತ್ಪನ್ನಗಳಿಗೆ ಕಡಿಮೆ ಬೆಲೆ, ಒತ್ತಡ ಹಾಗೂ ಕುಟುಂಬ ಜವಾಬ್ದಾರಿಗಳು, ಸರ್ಕಾರದ ನಿರ್ಲಕ್ಷ್ಯ, ನೀರಾವರಿ ಸೌಲಭ್ಯದ ಕೊರತೆ, ಸಾಲದ ಹೊರೆ, ಸಬ್ಸಿಡಿಯಲ್ಲಿ ಭ್ರಷ್ಟಾಚಾರ, ಅತಿವೃಷ್ಟಿ ಬೆಳೆ ಹಾನಿ ರೈತರು ಇಂಥ ನಿರ್ಧಾರಕ್ಕೆ ಬರಲು ಪ್ರಮುಖ ಕಾರಣಗಳು ಎಂದು ಹಲವು ಸಾಮಾಜಿಕ ಸಂಘಟನೆಗಳು ಮತ್ತು ಸರ್ಕಾರಿ ಏಜೆನ್ಸಿಗಳು ನಡೆಸಿದ ಅಧ್ಯಯನದಿಂದ ದೃಢಪಟ್ಟಿದೆ.

ಅಮರಾವತಿಯಲ್ಲಿ 2022ರಲ್ಲಿ 725 ಮತ್ತು 2021ರಲ್ಲಿ 662 ರೈತರ ಆತ್ಮಹತ್ಯೆಗಳು ನಡೆದಿವೆ. ಔರಂಗಾಬಾದ್ ಪ್ರದೇಶವು 661 ಮತ್ತು 532 ರೊಂದಿಗೆ ಎರಡನೇ ಸ್ಥಾನದಲ್ಲಿದೆ, ಮತ್ತು 252 ಮತ್ತು 201 ನೊಂದಿಗೆ ನಾಸಿಕ್ ಮೂರನೇ ಸ್ಥಾನದಲ್ಲಿದೆ. ನಾಗ್ಪುರ ಪ್ರದೇಶವು 2022 ರಲ್ಲಿ 225 ಮತ್ತು 2021 ರಲ್ಲಿ 199, ಪುಣೆ 12 ಮತ್ತು 11 ಪ್ರಕರಣಗಳನ್ನು ದಾಖಲಾಗಿವೆ. ಈ ಎರಡು ವರ್ಷಗಳಲ್ಲಿ ಕೊಂಕಣ ಪ್ರದೇಶದಲ್ಲಿ ಯಾವುದೇ ರೈತರ ಆತ್ಮಹತ್ಯೆ ನಡೆದಿಲ್ಲ.

ಶಿಂಧೆ ನೆರವು ನೀಡುವುದಾಗಿ ಭರವಸೆ ನೀಡಿದ್ದರೂ, ತಳಮಟ್ಟದಲ್ಲಿ ಸರ್ಕಾರ ನೀಡುತ್ತಿರುವ ಸೌಲಭ್ಯಗಳು  ರೈತರಿಗೆ ತಲುಪಿಲ್ಲ ಎಂದು ತಿವಾರಿ ಆರೋಪಿಸಿದ್ದಾರೆ. ಈ ಜಿಲ್ಲೆಗಳಲ್ಲಿ ನಮಗೆ ಉದ್ದೇಶಿತ ವಿಧಾನದ ಅಗತ್ಯವಿದೆ. “ಆತ್ಮಹತ್ಯೆ ಪೀಡಿತ ಜಿಲ್ಲೆಗಳಲ್ಲಿ ಯಾವುದೇ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಲಾಗಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ” ಎಂದು ಅವರು ಹೇಳಿದ್ದಾರೆ.

 

 

Donate Janashakthi Media

Leave a Reply

Your email address will not be published. Required fields are marked *