ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಶುಲ್ಕ ಹೆಚ್ಚಳ ಖಂಡಿಸಿ ಎಸ್‌ಎಫ್‌ಐ ಪ್ರತಿಭಟನೆ

ವಿಜಯನಗರ: ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಶುಲ್ಕ ಹೆಚ್ಚಳ ಮಾಡಿರುವ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ವಿರೋಧಿ ನೀತಿ ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಷನ್‌ (SFI) ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಉದ್ದೇಶಿಸಿ ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಮರೇಶ್‌ ಕಡಗದ್‌ ಮಾತನಾಡಿ,  2022- 23 ಸಾಲಿನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯ M.A, ಕನ್ನಡ, ರಾಜ ಶಾಸ್ತ್ರ, ಸಮಾಜ ಶಾಸ್ತ್ರ, ಇತಿಹಾಸ, M.COM, MSC, ಹಾಗೂ ಪದವಿಯ B.A, B.COM, BSC ಸೇರಿದಂತೆ ವಿವಿಧ ಕೋರ್ಸ್ ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯವು ಈ ಶೈಕ್ಷಣಿಕ ವರ್ಷದಲ್ಲಿ ದಿಢೀರನೆ ಹೆಚ್ಚಳ ಮಾಡಿರಿವು ದಾಖಲಾತಿ ಶುಲ್ಕ ದಿಂದ ವಿ.ವಿ ಕ್ಯಾಂಪಸ್ ನಲ್ಲಿ ಕೆಲವು ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಗೆ ದಾಖಲಾತಿ ಮಾಡಲಾರದೆ ಶಿಕ್ಷಣವನ್ನು ಅರ್ಧಕ್ಕೆ ಮೊಟಕ್ಕೊಳಿಸಿದ್ದಾರೆ ಎಂದು ವಿವಿ ನಡೆಯನ್ನು ಖಂಡಿಸಿದರು.

ಇದನ್ನೂ ಓದಿ : ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯ | ಭರ್ಜರಿ ಗೆಲುವು ಸಾಧಿಸಿದ ಎಸ್‌ಎಫ್‌ಐ ಮೈತ್ರಿ

ವಿ.ವಿಯ ವಿದ್ಯಾರ್ಥಿ ವಿರೋಧಿ  ಆಡಳಿತದಿಂದಾಗಿ ಅನೇಕ ವಿದ್ಯಾರ್ಥಿಗಳು ತಮ್ಮ ಪದವಿ ಶಿಕ್ಷಣವನ್ನು ಮುಂದವರಿಸಬೇಕಾ ಅಥವಾ ನಿಲ್ಲಿಸಿಬೇಕಾ ಎಂಬ ಗೊಂದಲದಲ್ಲಿ ಇದ್ದಾರೆ ರೂಪಾಯಿ 4000 ಇದ್ದ ದಾಖಲಾತಿ ಶುಲ್ಕವನ್ನು  ಬರಗಾಲದ ಸಂದರ್ಭದಲ್ಲಿಯು ವಿಶ್ವವಿದ್ಯಾಲಯವು ದಿಢೀರನೆ  ರೂ.18500.ಗೆ  ಹೆಚ್ಚಳ ಮಾಡಿರವುದನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಸಂಘಟನೆ ಬಲವಾಗಿ ಖಂಡಿಸುತ್ತದೆ, ರೂ,18500 ರೂಪಾಯಿ ಶುಲ್ಕವನ್ನು ಕಟ್ಟಿ ವಿದ್ಯಾಭ್ಯಾಸವನ್ನು ಮುಂದುವರಿಸಲಾರದ ಹಲವು ವಿದ್ಯಾರ್ಥಿಗಳು ಒಂದಿಲ್ಲದ ಒಂದು ಸಮಸ್ಯೆಗಳನ್ನು  ಎದುರಿಸುತ್ತಿದ್ದಾರೆ, ಪದವಿ ದ್ವಿತೀಯ ವರ್ಷದ ಮೂರನೇ ಸೆಮಿಸ್ಟರ್ ವಿದ್ಯಾರ್ಥಿಗಳು ಈಗಾಗಲೇ ದಾಖಲಾತಿ ಮಾಡಸಿದ್ದರು ವಿದ್ಯಾರ್ಥಿಗಳಿಗೆ ಇಂದಿನವರೆಗೂ UUCMS ನಲ್ಲಿ ಮರು ಸಂದೇಶ ಬಂದಿರಿವುದಿಲ್ಲ ಮತ್ತು ಆರ್ಥಿಕ ಸಮಸ್ಯೆಯಿಂದ ಹಾಗೂ ಹಾಸ್ಟೆಲ್ ಸಿಗದ ಕಾರಣ ವಿದ್ಯಾಭ್ಯಾಸ ಮುಂದುವರಿಸಲು ಕೆಲವು ವಿದ್ಯಾರ್ಥಿಗಳು ಕಾಲೇಜ್ ಬದಲಾವಣೆ ಮಾಡಿಕೊಳ್ಳಲು ಸುಮಾರು ಒಂದು ವಾರದಿಂದ ವಿವಿಧ ಕಾಲೇಜುಗಳಿಗೆ ಹಾಗೂ ವಿಶ್ವವಿದ್ಯಾಲಯಕ್ಕೆ ಬಂದು ಹೇಳಿದರು ಸಮಸ್ಯೆಗೆ ಪರಿಹಾರ ದೊರಕಿರುವುದಿಲ್ಲ, ದಾಖಲಾತಿಯ ದಿನಾಂಕ ವಿಸ್ತರಣೆ ಮಾಡಲು ಸೇರಿದಂತೆ ಅನೇಕ ವಿವಿಧ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ ಎಂದರು

ಕಲಪತಿಗಳು ಮತ್ತು ಕುಲಸಚಿವರು  ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿಶ್ವವಿದ್ಯಾಲಯ ವ್ಯಾಪ್ತಿಯ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸಬೇಕು ಹಾಗೂ ತುರ್ತಾಗಿ  ವಿ.ವಿ ವ್ಯಾಪ್ತಿಯ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಹಾಗೂ ಎಸ್‌ಎಫ್‌ಐ ಸಂಘಟನೆಯ  ಜಂಟಿ ಸಭೆ ಕರೆದು ಸಮಸ್ಯೆ ಗಳ ಕುರಿತು ಚರ್ಚಿಸಬೇಕು ಎಂದರು.

ಮನವಿ ಸ್ವೀಕರಿಸಿದ ಅಧಿಕಾರಿಗಳು ಸಭೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.  ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯ  ಶಿವರಡ್ಡಿ, ಮುಂಖಡರಾದ ಪವನಕುಮಾರ, ಅಮರಯ್ಯ ಹೀರೆಮಠ, ಮಹೇಶ ಮಾರುತಿ, ಅಮರಯ್ಯ ಇತರರು ಇದ್ದರು.

ಈ ವಿಡಿಯೋ ನೋಡಿನ್ಯಾಯ ಕೇಳಿದ ಕಾರ್ಮಿಕರನ್ನು ಕೂಡಿ ಹಾಕಿದ ಬಾಲಾಜಿ ಗಾರ್ಮೆಂಟ್ಸ್ ವಿರುದ್ಧ ಆಕ್ರೋಶ Janashakthi Media

 

Donate Janashakthi Media

Leave a Reply

Your email address will not be published. Required fields are marked *