ಕೊಪ್ಪಳ: ಗಂಗಾವತಿ ತಾಲ್ಲೂಕಿನ ಬಹಳಷ್ಟು ಖಾಸಗಿ ಶಾಲೆಗಳು ಮಕ್ಕಳನ್ನು ಕರೆ ತರಲು ಅವಧಿ ಮೀರಿದ ವಾಹನಗಳನ್ನು ಬಳಸುತ್ತಿದ್ದಾರೆ ಎಂದು ಪೋಷಕರು ಮತ್ತು ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿವೆ.
ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ಇರವ ದೋಣಿಪುಡಿ ಎಂಬ ಖಾಸಗಿ ಶಾಲೆಯು L.K.G, UKG ಹಾಗೂ 1 ರಿಂದ 8 ನೇ ತರಗತಿವರಿಗೆ ಮಕ್ಕಳನ್ನು ಶಾಲೆಗೆ ಕರೆತರಲು ಸ್ವತಃ ಖಾಸಗಿ ಶಾಲೆಯು ಪಾಲಕರಿಂದ ಪ್ರತಿಯೊಬ್ಬ ವಿದ್ಯಾರ್ಥಿಯಿಂದ ವರ್ಷಕ್ಕೆ 7000 ರೂಪಾಯಿ ಹಣ ಪಡೆದು ಅವಧಿ ಮೀರಿದ ಬಸ್ ಬಿಟ್ಟಿದ್ದಾರೆ. ಈ ಬಸ್ ಬೇಡ, ಚೆನ್ನಾಗಿ ಇರವ ಬಸ್ ಬಿಡಿ ಎಂದು ಕೊಟ್ನಕಲ್ ಗ್ರಾಮದ ಗ್ರಾಮಸ್ಥರು ಇಂದು ಬಸ್ ತಡೆಹಿಡಿದು ನಿಲ್ಲಿಸಿ ಶಾಲೆಯ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಇದನ್ನೂ ಓದಿ: ನಗರದಲ್ಲಿಯೆ ಸರ್ಕಾರಿ ಕಾನೂನು ಕಾಲೇಜ್ ಸ್ಥಾಪಿಸಿ – ಎಸ್ಎಫ್ಐ ಆಗ್ರಹ
ಸರಕಾರ ಶಿಕ್ಷಣ ಇಲಾಖೆ, ಪೋಲಿಸ್ ಇಲಾಖೆ ಹಾಗೂ ಸಾರಿಗೆ ಇಲಾಖೆ ಮೂಲಕ ಖಾಸಗಿ ಶಾಲೆಯ ಮುಖ್ಯಸ್ಥರಿಗೆ ಹಲವಾರು ಭಾರಿ ಸಾಕಷ್ಟು ಸುರಕ್ಷಿತ ಕ್ರಮಕೊಳ್ಳಿ ಎಂದು ಹೇಳಿದರು ಹಣದಾಹಕ್ಕೆ ಮುಂದಾಗಿರಿವ ಇಂತಹ ಖಾಸಗಿ ಶಾಲೆಗಳಿಂದ ಮಕ್ಕಳ ಸುರಕ್ಷತೆ ಇಲ್ಲದಂತಾಗಿದೆ ಎಂದು ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಮರೇಶ್ ಕಡಗದ್ ಆರೋಪಿಸಿದ್ದಾರೆ.
ನಿರ್ಲಕ್ಷ್ಯ ವಹಿಸಿ ಬೇಜವಾಬ್ದಾರಿತನದಿಂದ ವರ್ತನೆ ಮಾಡವುದು ಶಿಕ್ಷಣ ಸಂಸ್ಥೆಯ ಮಾಲೀಕರ ವಿರುದ್ಧ ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ ಹಾಗೂ ಪೋಲಿಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಹಾಗೂ ಅವಧಿ ಮೀರಿದ ಬಸ್ ಓಡಾಟದಿಂದ ಅಪಘಾತ ಜರಗವು ಸಂಭವನೀಯ ಇದ್ದು ಈಗಾಗಲೇ ಇದೇ ಬಸ್ ಬೆನ್ನೂರಿಂದ ಶಾಲೆ ಮಕ್ಕಳನ್ನು ಕರೆತರುವಾಗ ಸ್ವಲ್ಪದರಲ್ಲಿ ಅಪಾಯದಿಂದ ಪಾರಾಗಿದೆ ಎಂದು ತಿಳಿದುಬಂದಿದೆ ಎಂದು ಅಮರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಸ್ ಕೊಟ್ನಕಲ್, ಬರಗೂರು, ಜಮಾಪುರ, ಸೇರಿದಂತೆ ಇನ್ನಿತರ ಗ್ರಾಮದ ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಹೋಗುತ್ತದೆ. ಮಕ್ಕಳ ಸುರಕ್ಷಿತ ಹಿತದೃಷ್ಟಿಯಿಂದ ಈ ಕೂಡಲೇ ಸಾರಿಗೆ ಇಲಾಖೆ ನಿಯಮ ಉಲ್ಲಂಘನೆ ಹಾಗೂ ಶಿಕ್ಷಣ ಇಲಾಖೆಯ ನಿಯಮಗಳ ಉಲ್ಲಂಘನೆ ಆದರದ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಇದನ್ನೂ ನೋಡಿ: ವಚನಾನುಭವ – 02| ದೇಹಾರಕ್ಕೆ ಆಹಾರವೆ ನಿಚ್ಚಣಿಗೆ – ಡಾ. ಮೀನಾಕ್ಷಿ ಬಾಳಿJanashakthi Media