ರಾಜಾಜಿನಗರ ಮೆಟ್ರೋ ಟ್ರ್ಯಾಕ್‌ ಮೇಲೆ ಜಿಗಿದ ಮಹಿಳೆ, 10 ನಿಮಿಷ ಸಂಚಾರ ವ್ಯತ್ಯಯ

ಬೆಂಗಳೂರು: ನಗರದ ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಜುಲೈ 4ರ ಮಧ್ಯಾಹ್ನ ಮಹಿಳೆಯೊಬ್ಬರು ಟ್ರ್ಯಾಕ್‌ಗೆ ಹಾರಿ ಬಿದ್ದ ಘಟನೆ ಸಂಭವಿಸಿ, ಗ್ರೀನ್ ಲೈನ್ ಮೆಟ್ರೋ ಸಂಚಾರದಲ್ಲಿ ಕ್ಷಣಿಕ ವ್ಯತ್ಯಯ ಉಂಟಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜಾಜಿನಗರ

ಈ ಘಟನೆ ಮಧ್ಯಾಹ್ನ ಸುಮಾರು 12.25ರ ವೇಳೆಗೆ ನಡೆದಿದೆ.

ಮೆಟ್ರೋ ರೈಲು ಸಮೀಪಿಸುತ್ತಿದ್ದಾಗ ಮಹಿಳೆ ಟ್ರ್ಯಾಕ್‌ಗೆ ಹಾರಿದನ್ನು ಗಮನಿಸಿದ ಚಾಲಕ ತಕ್ಷಣ ಬ್ರೇಕ್ ಹಾಕಿದ್ದು, ತುರ್ತು ಟ್ರಿಪ್ ಸಿಸ್ಟಮ್ (ETS) ಸಕ್ರಿಯಗೊಂಡಿದೆ. ಪರಿಣಾಮವಾಗಿ ಮಹಿಳೆಯನ್ನು ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಬರ ಪರಿಸ್ಥಿತಿ ಎದುರಿಸಲು ತಕ್ಷಣ ಪರಿಹಾರ ಘೋಷಿಸಿ: ಸರ್ಕಾರಕ್ಕೆ ಆರ್‌. ಅಶೋಕ್ ಆಗ್ರಹ

ಬಿಎಂಆರ್‌ಸಿಎಲ್ ಪ್ರಕಟಣೆಯ ಪ್ರಕಾರ, ಸ್ಟೇಷನ್ ಕಂಟ್ರೋಲರ್ ಹಾಗೂ ಭದ್ರತಾ ಸಿಬ್ಬಂದಿ ತಕ್ಷಣವೇ ತುರ್ತು ಪ್ರೋಟೋಕಾಲ್ ಅನುಸರಿಸಿ ಕ್ರಮ ಕೈಗೊಂಡಿದ್ದಾರೆ.

“ಪ್ರಯಾಣಿಕೆಯನ್ನು ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ರಕ್ಷಿಸಲಾಗಿದೆ. ಈ ಘಟನೆ ಹಿನ್ನೆಲೆ ಮೆಟ್ರೋ ಸಂಚಾರದಲ್ಲಿ ಸುಮಾರು 10 ನಿಮಿಷಗಳ ವಿಳಂಬ ಉಂಟಾಯಿತು,” ಎಂದು ಪ್ರಕಟಣೆ ತಿಳಿಸಿದೆ.

ಟ್ರ್ಯಾಕ್ ಕ್ಲಿಯರ್ ಮಾಡುವುದು ಸೇರಿದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಪೂರ್ಣಗೊಳಿಸಿದ ಬಳಿಕ ಮಧ್ಯಾಹ್ನ 12.34ರ ವೇಳೆಗೆ ಮೆಟ್ರೋ ಸಂಚಾರ ಸಾಮಾನ್ಯಗೊಂಡಿತು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಇದನ್ನೂ ನೋಡಿ: ನವ ಉದಾರವಾದಿ ಆರ್ಥಿಕತೆಯಲ್ಲಿ ನಿರುದ್ಯೋಗದ ಬಿಕ್ಕಟ್ಟು -ನಾಗರಾಜ ಶಾನಭೋಗ Janashakthi Media

Donate Janashakthi Media

Leave a Reply

Your email address will not be published. Required fields are marked *