ಸ್ಯಾಂಡಲ್‌ವುಡ್‌ ತಾರೆಯರ ಡ್ರಗ್ಸ್ ಸೇವನೆ: ಆರೋಪಿಗಳಿಗೆ ಮತ್ತೆ ಬಂಧನ ಭೀತಿ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲಾಗಿದ್ದ ಸ್ಯಾಂಡಲ್‌ವುಡ್ ತಾರೆಯರು ಮತ್ತು ಇತರೆ ಎಲ್ಲ ಆರೋಪಿಗಳು ಡ್ರಗ್ಸ್ ಸೇವಿಸಿರುವುದು ಹೈದರಾಬಾದ್‌ನ ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್‌ಎಸ್‌ಎಲ್) ವರದಿಯಿಂದ ದೃಢಪಟ್ಟಿವೆ ಎಂದು ಖಾತ್ರಿಯಾಗಿದೆ. ಆರೋಪಿಗಳಿಗೆ ಮತ್ತೆ ಬಂಧನದ ಭೀತಿಗೆ ಸಿಲುಕಿದ್ದಾರೆ. ಸದ್ಯ ಪ್ರಕರಣಕ್ಕೆ ತಾರ್ಕಿಕ ಅಂತ್ಯಗೊಳಿಸಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ.

ಬಾಲಿವುಡ್‌ ನಟ ಸುಶಾಂತ್ ಸಿಂಗ್ ಸಾವಿನ ಬಳಿಕ ಸಿನಿಮಾರಂಗದವರು ಮತ್ತು ಡ್ರಗ್ಸ್ ಪ್ರಕರಣದ ನಂಟು ಕನ್ನಡ ಚಿತ್ರರಂಗದವರು ಸಿಕ್ಕಿಬಿದ್ದ ಪ್ರಕರಣ ನಡೆದಿತ್ತು. ಡ್ರಗ್ಸ್‌ ಪ್ರಕರಣವು ದೇಶದ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯಾಗಿದ್ದವು.

ಡ್ರಗ್ಸ್‌ ಪ್ರಕರಣದ ತನಿಖೆ ನಡೆಸಿದ ಸಿಸಿಬಿ ಪೊಲೀಸರು ಸಾಲು-ಸಾಲು ಮಂದಿಗಳನ್ನು ಬಂಧನಕ್ಕೆ ಒಳಪಡಿಸಿದರು. ಹಲವು ಚಿತ್ರರಂಗದವರನ್ನು ಬಂಧಿಸಿ ವಿಚಾರಣೆ ನಡೆಸಿದರು. ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾತನಾಡಿ ʻಸಾಮಾನ್ಯವಾಗಿ ನಾವು ಯಾರೇ ಆದರೂ ಡ್ರಗ್ಸ್ ಸೇವನೆಯನ್ನು ಖಚಿತ ಪಡಿಸಲು ಮೊದಲಿಗೆ ರಕ್ತ ಹಾಗೂ ಮೂತ್ರದ ಸ್ಯಾಂಪಲ್‌ಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿಕೊಡುತ್ತಿದ್ದೇವು. ಆದರೆ, ರಕ್ತ ಮತ್ತು ಮೂತ್ರದ ಸ್ಯಾಂಪಲ್‌ಗಳಲ್ಲಿ ಒಂದೆರಡು ದಿನಗಳ ಹಿಂದೆ ಡ್ರಗ್ಸ್ ಸೇವಿಸಿದ್ದರೆ ಮಾತ್ರ ವರದಿಯಲ್ಲಿ ಪಾಸಿಟಿವ್ ಬರುತ್ತಿತ್ತು. ಆದರೆ ಹೊಸ ಅಧ್ಯಯನದ ಪ್ರಕಾರ ಕೂದಲಿನಲ್ಲಿ ಒಂದು ವರ್ಷದವರೆಗೂ ಡ್ರಗ್ಸ್ ಇರುತ್ತದೆ. ಆ ಕಾರಣದಿಂದ ಈ ಪ್ರಕರಣದಲ್ಲಿ ಕಳೆದ ವರ್ಷ ನಾವು ಆರೋಪಿಗಳ ಕೂದಲು ಸ್ಯಾಂಪಲ್ ಸಂಗ್ರಹಿಸಿ ಹೈದರಾಬಾದ್‌ನ ಸಿಎಫ್‌ಎಸ್ಎಲ್ ಲ್ಯಾಬ್‌ಗೆ ಕಳುಹಿಸಿದ್ದೇವು. ಕರ್ನಾಟಕದಲ್ಲಿ ಕೂದಲು ಸ್ಯಾಂಪಲ್ ತೆಗೆದುಕೊಂಡು ಲ್ಯಾಬ್‌ಗೆ ಕಳುಹಿಸಿರುವುದು ಇದೇ ಪ್ರಥಮ ಬಾರಿಗೆ. ಈಗ ವರದಿ ಕೈಸೇರಿದ್ದು, ಅದರಲ್ಲಿ ಆರೋಪಿಗಳು ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆʼ ಎಂದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ಕಾರ್ಯಾಚರಣೆಯನ್ನು ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರು ”ಪ್ರಕರಣದ ತನಿಖೆ ನಡೆಸಿದ ಅಧಿಕಾರಿಗಳು ಬಹಳ ದೃಢ ಮತ್ತು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಂಧಿತರಾಗಿದ್ದ ಎಲ್ಲರ ವರದಿಗಳು ಪಾಸಿಟಿವ್ ಬಂದಿವೆ. ಡ್ರಗ್ಸ್ ಸೇವಿಸಿರುವುದು ಧೃಡವಾಗಿವೆ ಅಲ್ಲದೆ, ಆರೋಪಿಗಳು ಡ್ರಗ್ಸ್ ತರಿಸಿಕೊಂಡಿರುವ ಬಗ್ಗೆಯೂ ಪೊಲೀಸರು ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ. ವಾಟ್ಸ್‌ಆಪ್ ಕಾಲ್, ವಿಡಿಯೋ ಕಾಲ್, ಚಾಟ್‌ಗಳು ಇನ್ನಿತರೆ ಎಲ್ಲ ವಿವರಗಳನ್ನು ಪರಿಶೀಲಿಸಲಾಗಿದೆ. ಎಲ್ಲ ದಾಖಲೆಗಳನ್ನು ನ್ಯಾಯಾಲಯದ ವಿಚಾರಣೆ ವೇಳೆ ನೀಡಲಾಗುತ್ತದೆ. ತೀರ್ಪು ನೀಡುವುದು ನ್ಯಾಯಾಲಯಕ್ಕೆ ಬಿಟ್ಟ ವಿಚಾರ” ಎಂದರು.

ಈ ಹಿಂದೆ ಸಿಸಿಬಿ  ಪೊಲೀಸರು 2500 ಪುಟಗಳ ಚಾರ್ಜ್​​ಶೀಟ್ ಸಲ್ಲಿಸಿತ್ತು. ಈಗ ಹೆಚ್ಚುವರಿ ತನಿಖಾ ವರದಿ ಸಲ್ಲಿಸಿರುವ ಸಿಸಿಬಿ ಎಫ್‌ಎಸ್‌ಎಲ್‌ ವರದಿ ಸಹಿತ 10 ಪುಟಗಳ ಹೆಚ್ಚುವರಿ ಚಾರ್ಜ್​​ಶೀಟ್ ಸಲ್ಲಿಸಿದೆ.

ನ್ಯಾಯಾಲಯದಲ್ಲಿ ಮುಂದಿನ ಪ್ರಕ್ರಿಯೆ ನಡೆಯಲಿದ್ದು, ನ್ಯಾಯಾಲಯ ಆರೋಪ ಪಟ್ಟಿ ಅಂಗೀಕಾರ ಮಾಡಲಿದೆ. ಬಳಿಕ ಆರೋಪಿಗಳಿಗೆ ಸಮನ್ಸ್​ ನೀಡಿ, ನ್ಯಾಯಾಲಯಕ್ಕೆ​ ಕರೆಸಿ ವಿಚಾರಣೆ ಮಾಡಲಾಗುತ್ತದೆ. ನಂತರ, ಎಲ್ಲಾ ಆರೋಪಿಗಳ ಮೇಲೆ ಆರೋಪ ನಿಗದಿ ಪಡಿಸಲಾಗುತ್ತದೆ.

ನಟಿ ಸಂಜನಾ ಗಲ್ರಾನಿ, ನಟಿ ರಾಗಿಣಿ ದ್ವಿವೇದಿ, ಅವರಲ್ಲದೆ ಡ್ರಗ್ಸ್ ಜಾಲದಲ್ಲಿ ಸಿಕ್ಕಿಬಿದ್ದಿದ್ದ ವಿರೇನ್ ಖನ್ನಾ, ರವಿಶಂಕರ್, ಲೂಮ್ ಪೆಪ್ಪರ್, ರಾಹುಲ್ ತೋನ್ಸೆ ಡ್ರಗ್ಸ್ ಸೇವಿಸಿರುವುದು ಪರೀಕ್ಷೆಯಲ್ಲಿ ದೃಡಪಟ್ಟಿದೆ.

ಡ್ರಗ್ಸ್ ಸೇವನೆ ಜಾಲದಲ್ಲಿ ಸಿಲುಕಿ ಬಂಧಿತರಾಗಿದ್ದವರ ಮೂತ್ರ ಹಾಗೂ ತಲೆ ಕೂದಲನ್ನು ಕಳೆದ 2020ರ ಅಕ್ಟೋಬರ್‌ನಲ್ಲಿ ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಸಂಗ್ರಹಿಸಿ ಮೊದಲ ಬಾರಿ ಕಳುಹಿಸಿದ್ದ ಎಫ್‌ಎಸ್‌ಎಲ್‌ಗೆ ಕೂದಲು ಮಾದರಿ ಕಳುಹಿಸಿದ್ದು ವಾಪಸು ಬಂದಿತ್ತು. ಎರಡನೇ ಬಾರಿ ಮಾದರಿ ಕಳುಹಿಸಲಾಗಿದ್ದ ಮಾದರಿಗಳ ಪರೀಕ್ಷೆಗಳಿಂದ ಆರೋಪಿಗಳು ಡ್ರಗ್ಸ್‌ ಸೇವನೆ ಮಾಡಿರುವುರುವುದು ದೃಢಪಟ್ಟಿವೆ.

ನಟಿ ಸಂಜನಾ ಗಲ್ರಾಣಿ, ನಟಿ ರಾಗಿಣಿ ದ್ವಿವೇದಿ ಸೇರಿದಂತೆ ಹಲವು ಪ್ರಭಾವಿಗಳನ್ನು ಈ ಪ್ರಕರಣದಲ್ಲಿ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಪ್ರಕರಣದಲ್ಲಿ ಸಂಪರ್ಕ ಇದ್ದವರನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ಕನ್ನಡ ಚಿತ್ರರಂಗದ ಲೂಸ್ ಮಾದ ಯೋಗಿ, ದಿಗಂತ್, ಐಂದ್ರಿತಾ ರೇ, ಸೌಂದರ್ಯ ಜಗದೀಶ್, ಅಕುಲ್ ಬಾಲಾಜಿ ಇನ್ನೂ ಹಲವಾರು ನಟ-ನಟಿಯರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಸಾಕಷ್ಟು ರಾಜಕೀಯ ಒತ್ತಡದ ನಡುವೆಯೂ ಸಿಸಿಬಿ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು.

ಡ್ರಗ್ಸ್‌ ವ್ಯವಹಾರಗಳಿಗೆ ವಿರೇನ್ ಖನ್ನಾ ಸೂತ್ರಧಾರನಾಗಿದ್ದ. ಆತ ನಟಿಯರಾದ ಸಂಜನಾ ಮತ್ತು ರಾಗಿಣಿ ಮೂಲಕ ಯುವಜನತೆಯನ್ನು ಸೆಳೆಯುತ್ತಿದ್ದರು. ಸೆಲೆಬ್ರಿಟಿಗಳು ಪಾರ್ಟಿಯಲ್ಲಿ ಭಾಗಿಯಾಗ್ತಾರೆ ಎನ್ನುವುದನ್ನೆ ಬಂಡವಾಳ ಮಾಡಿಕೊಂಡು ಐಶಾರಾಮಿ ಹೋಟೆಲ್ ಬುಕ್ ಮಾಡುತಿದ್ದ ಎನ್ನಲಾಗಿದೆ.

ಕಳೆದ 2018 ರಿಂದ ಸಕ್ರಿಯವಾಗಿದ್ದ ಈ ಜಾಲದಿಂದ ಬಾಣಸವಾಡಿಯಲ್ಲಿ ವಶಪಡಿಸಿಕೊಂಡಿದ್ದ ಡ್ರಗ್ಸ್ ಮೌಲ್ಯವೇ ಸುಮಾರು ಒಂದೂವರೆ ಕೋಟಿ ರೂಪಾಯಿ ಆಗಿತ್ತು.

Donate Janashakthi Media

Leave a Reply

Your email address will not be published. Required fields are marked *