ಹೌದು, ಸಂಸತ್ತು ಅಧಿವೇಶನ ಆರಂಭಿಸಿರುವಾಗ,‘ಪ್ರಶ್ನೋತ್ತರ ಕಾಲ’ ಯಾಕಿಲ್ಲ?
ಯಾಕೆಂದರೆ, ಇದು ಕೊವಿಡ್ ಕಾಲ – ಇದು ಸರಕಾರದ, ಭಕ್ತವೃಂದದ ಉತ್ತರ

ಕೊವಿಡ್ ಕಾಲವಾದರೇನು? ಪ್ರಶ್ನೆ ಕೇಳಿದರೆ ಕೊರೊನಾ ಹರಡುತ್ತದೆ ಎಂದೇನಾದರೂ ರಿಸರ್ಚ್ ಆಗಿದೆಯೇ?

ಹಾಗೇನಿಲ್ಲ, ಆದರೂ….
ವಾಸ್ತವವಾಗಿ , “ಇದು ನಿನ್ನ ಸುರಕ್ಷಿತತೆಗಾಗಿಯೇ!”

ಆದರೆ ಪ್ರಜಾಪ್ರಭುತ್ವದ ಉಳಿವಿನ ಪ್ರಶ್ನೆ ತಾನೇ?

ಇದು ಪ್ರಜಾಪ್ರಭುತ್ವವೇ? ಆ ಬಗ್ಗೆ ಪ್ರಶ್ನೆಯೇ ಇಲ್ಲ!

ಹಾಗಿದ್ದರೆ ಪ್ರಶ್ನೋತ್ತರ ಕಾಲದ ಪ್ರಶ್ನೆ ಏಕೆ?
ಅಲ್ಲದೆ, ನಿಮ್ಮ ಎಲ್ಲ ಪ್ರಶ್ನೆಗಳಿಗೂ ಇಲ್ಲಿ ಉತ್ತರ ಇರುವಾಗ
ಏಕೆ ವೃಥಾ ಕಾಲಹರಣ?

ಏನದು ಉತ್ತರ? “ಅದು ನೆಹರೂ ಮಾಡಿದ ತಪ್ಪು”!
ಆದರೂ …??? .ಪ್ರಶ್ನೆ ಉಳಿದೇ ಉಳಿದಿದೆ …..
ವೈಟ್ ವಾಶ್ ಏಕೆ? ಎಂಬ ಪ್ರಶ್ನೆ!
