ಬೆಂಗಳೂರು; ಜ, 12 : ಹೊಸ ಸಚಿವರ ಸೇರ್ಪಡೆಗೆ ಮುಹೂರ್ತ ಸಿದ್ದಪಡಿಸಿದ್ದು, ನಾಳೆ ಸಂಜೆ 4 ಗಂಟೆಗೆ ರಾಜಭವನದಲ್ಲಿ ಪ್ರಮಾಣವಚನ ಸಮಾರಂಭ ನಡೆಯಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ನಾಳೆ ರಾಜಭವನದಲ್ಲಿ ಹೊಸ ಸಚಿವರ ಸೇರ್ಪಡೆಗೆ ಮುಹೂರ್ತ ಸಿದ್ದಪಡಿಸಿದ್ದು, ಸಂಜೆ 4 ಗಂಟೆಗೆ ಪ್ರಮಾಣವಚನ ಸಮಾರಂಭ ನಡೆಯಲಿದೆ. 7 ಅಥವಾ 8 ಜನ ಹೊಸಬರಿಗೆ ಸಚಿವ ಸ್ಥಾನ ನೀಡಲು ವರಿಷ್ಠರು ಒಪ್ಪಿಗೆ ನೀಡಿದ್ದಾರೆ ಎಂದು ಬಿಎಸ್ ವೈ ಹೇಳಿದ್ದಾರೆ. ಈ ಪ್ರಕ್ರಿಯೇ ಸಚಿವಗಿರಿಗಾಗಿ ಲಾಬಿ ನಡೆಯುತ್ತಿದ್ದು, ಸಂಪುಟ ವಿಸ್ತರಣೆಯೋ ಅಥವಾ ಪನರ್ ರಚನೆ ಎಂಬ ಗೊಂದಲಗಳು ಉಂಟಾಗಿವೆ.
ನಾಳೆ ಸಚಿವ ಸಂಪುಟ ವಿಸ್ತರಣೆಯ ಜೊತೆಗೆ ಕೆಲವು ಪ್ರಮುಖ ಸಚಿವರ ಖಾತೆಗಳನ್ನು ಬದಲಾಯಿಸುವ ಆಲೋಚನೆ ಹೊಂದಿದ್ದಾರೆಂದು ಅವರ ಆಪ್ತ ವಲಯದಲ್ಲಿಯೇ ಕೇಳಿ ಬರುತ್ತಿದೆ.
ಸಚಿವ ಸಂಪುಟದಲ್ಲಿ ಮುಖವಾಗಿ ಹಿರಿಯ ಸಚಿವರುಗಳ ಖಾತೆಗಳನ್ನು ಬದಲಾಯಿಸುವ ಲೆಕ್ಕಾಚಾರ ಹಾಕಿಕೊಂಡಿರುವ ಬಿಎಸ್ ವೈ , ಬಿಜೆಪಿ ಸರ್ಕಾರ ರಚನೆಯಲ್ಲಿ ಕೈ ಜೊಡಿಸಿದವರಿಗೆ ಕೇಳಿದ ಖಾತೆ ನೀಡುವ ಮಾತು ಕೇಳಿಬರುತ್ತಿದೆ. ಕೆಲವರ ಖಾತೆಗಳನ್ನು ಬದಲಾವಣೆ ಮಾಡುವ ಇಂಗಿತವನ್ನು ಮುಖ್ಯಮಂತ್ರಿ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.
ಇದರ ಮಧ್ಯೆ ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಈ ಸಲ ಮಂತ್ರಿಯಾಗುವುದು ಫಿಕ್ಸ್ ಎಂದು ಹೇಳಲಾಗುತ್ತಿದ್ದು, ನಾಳೆ ಇವರ ಬರುವುಕೆಗೆ ಬುಲರಾ ಬುಕ್ ಮಾಡಲಾಗಿದೆ ಎಂದು ಕೇಳಿಬರುತ್ತಿದೆ.