ಧರ್ಮರಾಜಕಾರಣಕ್ಕೊಂದು ಶವ ಬೇಕಾಗಿದೆ; ಡಾ.ಕೆ.ಷರೀಫಾ

– ಡಾ.ಕೆ.ಷರೀಫಾ

ಇಂದು ನೇಹಾ, ರುಕ್ಸಾನಾ, ಮತ್ತು ಏರ್ ಹೊಸ್ಟೇಸ್ ಆಗಿದ್ದ ಅಯಾನಾರಂತಹ ಅಮಾಯಕರ ಜೀವ ನುಂಗಿದ ಹಂತಕರಿಗೆ ಶಿಕ್ಷೆಯಾಗಲಿ. ಬೇರೆ ಜಾತಿಯವರನ್ನು ಪ್ರೀತಿಸಿದ ಕಾರಣಕ್ಕೆ ಹೆತ್ತವರೇ ತಮ್ಮ ಮಕ್ಕಳನ್ನು ಕೊಂದು ಹಾಕಿದ ಹಲವಾರು ಪ್ರಕರಣಗಳಿವೆ. ಪ್ರೇಮ ನಿರಾಕರಣೆ ಸಹಿಸದೇ ಆಸಿಡ್ ಎರಚಿದ ಹಲವಾರು ಪ್ರಕರಣಗಳು ನಡೆದಿವೆ. ಆದರೆ ಯಾರದೇ ಸಾವನ್ನು ರಾಜಕೀಯಕ್ಕೆ ದಯವಿಟ್ಟು ಬಳಸಿಕೊಳ್ಳಬೇಡಿ. ಹೆಣಗಳ ಮೇಲೆ ರಾಜಕಾರಣ ಮಾಡುವವರು ಕೊಲೆಗಡುಕರಿಗಿಂತ ಕ್ರೂರಿಗಳು. ಧರ್ಮರಾಜಕಾರಣ

ಪಿತೃ ಪ್ರಧಾನತೆಯು ಈ ಸಮಾಜದ ವಾಸ್ತವ. ಆದರೂ ಬಹಳಷ್ಟು ಜನ ಇದನ್ನು ಅಲ್ಲಗಳೆಯುತ್ತಾರೆ. ಮತ್ತು ಪುರುಷರ ದೌರ್ಜನ್ಯವು ಸಮಾಜದ ಬಹುದೊಡ್ಡ ಸಮಸ್ಯೆಯಾಗಿರುವುದನ್ನೂ ನಿರಾಕರಿಸುತ್ತಾರೆ. ಎಲ್ಲ ಪುರುಷರೂ ಕ್ರೂರಿಗಳಾಗಿರುವುದಿಲ್ಲ ಎನ್ನುತ್ತಾರೆ. ಅಂತೂ ನಮ್ಮ ಸಮಾಜ ಪುರುಷರು ಮಹಿಳೆಯರ ಮೇಲೆ ಮಾನಸಿಕವಾಗಿಯಾಗಲಿ, ದೈಹಿಕವಾಗಿಯಾಗಲಿ ದೌರ್ಜನ್ಯ ನಡೆಸುವುದು ಅವನ ಜನ್ಮಸಿದ್ಧ ಹಕ್ಕು ಎಂದು ನಂಬಿಸುತ್ತಲೇ ಬರಲಾಗಿದೆ. ಯಾವುದೇ ಧರ್ಮದ ತಾಯಂದಿರಾಗಲಿ ಅವರು ತಮ್ಮ ಮಗ ‘ನಿಜವಾದ ಗಂಡಸಾಗಬೇಕು’ ಎಂದು ಬಯಸುವುದು ತಪ್ಪಲ್ಲವೆ?. ಇದನ್ನು ನಮ್ಮ ತಾಯಂದಿರು ಇಂದು ತಮಗೆ ತಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ. ಧರ್ಮರಾಜಕಾರಣ

ನಮ್ಮ ಪುರುಷ ಪ್ರಧಾನ ಸಮಾಜದ ಪುರುಷ ಒಬ್ಬ ಹೆಣ್ಣಿನ ತಿರಸ್ಕಾರವನ್ನು ಎಂದಿಗೂ ಸಹಿಸಲಾರ. ತನ್ನ ಮೇಲರಿಮೆಯಿಂದ ಕೊಳೆತ ಮನೋಸ್ಥಿತಿಯ ಪುರುಷ ತನ್ನ ತಿರಸ್ಕಾರವನ್ನು ಎಂದಿಗೂ ಸೈರಿಸಲಾರ. ಪುರುಷ ತನ್ನ ಅಹಂಕಾರ, ಕ್ರೌರ್ಯದ ನಡೆ, ದರ್ಪದ ಮನೋಭೂಮಿಕೆಯನ್ನು ತ್ಯಜಿಸುವುದು ಯಾವಾಗ? ಕ್ರೌರ್ಯ, ಹಿಂಸೆ, ಅಸಹನೆ, ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಯಾವುದೇ ಜಾತಿ ಧರ್ಮದ ಹಂಗಿಲ್ಲ. ಒಬ್ಬ ಅಮಾಯಕ ಹೆಣ್ಣುಮಕ್ಕಳ ಸಾವನ್ನೂ, ರಾಜಕೀಯಕ್ಕೆ ಬಳಸಿಕೊಳ್ಳುವ ನೀಚತನಕ್ಕೆ ಧಿಕ್ಕಾರವಿರಲಿ. ಧರ್ಮರಾಜಕಾರಣ

ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಬಿಸಿಎ ಓದುತ್ತಿರುವಾಗ ಈ ಸಹಪಾಠಿಗಳಲ್ಲಿ ಮೂಡಿದ ಪ್ರೇಮ ಫಲಿಸುವ ಮುನ್ನವೇ ಕೊನೆಯುಸಿರೆಳೆದ್ದದ್ದು ಒಂದು ದುರಂತದ ಕಥೆಯಾಗಿದೆ. ಕಾಲೇಜಿನ ಆವರಣದಲ್ಲಿ ಹಾಡು ಹಗಲೇ ದಿನಾಂಕ 18-04-2024ರಂದು ಮಟಮಟ ಮಧ್ಯಾಹ್ನದಲ್ಲಿ ಫಯಾಜ್ ಎಂಬ ಹುಚ್ಚು ಪ್ರೇಮಿಯಿಂದ ನಡೆದೇ ಹೋಗಿತ್ತು ಅಮಾಯಕಳಾದ 23 ವರ್ಷದ ನೇಹಾ ಹಿರೇಮಠಳ ಕೊಲೆ. ಈ ಘಟನೆಯಿಂದ ರಾಜ್ಯದ ಜನರು ಬೆಚ್ಚಿ ಬಿದ್ದಿದ್ದಾರೆ. ಫಯಾಜನ ಪ್ರೀತಿಯನ್ನು ನಿರಾಕರಿಸಿದ್ದೇ ಅವಳ ಸಾವಿಗೆ ಕಾರಣವಾಗಬೇಕೇ? ಚಾಕುವಿನಿಂದ ಹಲವಾರು ಬಾರಿ ಇರಿದು ಕೊಲೆ ಮಾಡಿದ್ದಾನೆ ಕಿರಾತಕ. ಅವನ ತಂದೆ, ಹಿಂದೂ ಮತ್ತು ಮುಸ್ಲಿಂ ಸಂಘಟನೆಗಳೂ ಘೋರ ಅಪರಾಧ ಎಸಗಿರುವ ವ್ಯಕ್ತಿಗೆ ಕಠಿಣ ಶಿಕ್ಷೆ ವಿಧಿಸಲು ಅಗ್ರಹಿಸುತ್ತಿವೆ. ಆ ಅಮಾಯಕ ಜೀವ ನೇಹಾಳಿಗೆ ನ್ಯಾಯ ಸಿಗಬೇಕು. ಈ ಘೋರ ಕೃತ್ಯ ಎಸಗುವ ಮೂಲಕ ಫಯಾಜನೂ ಕೂಡ ಬದುಕು ಕಳೆದುಕೊಂಡಿದ್ದಾನೆ. ಈ ಮಕ್ಕಳು ಪ್ರೀತಿಸುತ್ತಿದ್ದ ವಿಷಯವನ್ನು ಫಯಾಜ್ ತನ್ನ ತಾಯಿಗೆ ತಿಳಿಸಿದ್ದ.ಧರ್ಮರಾಜಕಾರಣ

ಈ ಘಟನೆಗೆ ವ್ಯಾಪಕವಾದ ಚರ್ಚೆ, ಮಾಧ್ಯಮಗಳ ಪ್ರಚಾರ ನಡೆದಿದೆ. ಇದು ಆಗಲೂಬೇಕಾದ ಕೆಲಸವೆ. ಆದರೆ ಕೇವಲ 15 ದಿನಗಳ ಹಿಂದೆಯಷ್ಟೇ ಈ ಕೊಲೆಗಿಂತಲೂ ಭೀಕರವಾಗಿ ಕೊಲೆಯಾಗಿರುವ ರುಕ್ಸಾನಾರನ್ನು ಮದುವೆಯಾಗಿ ಒಂದು ಮಗು ಮಾಡಿದ ಪ್ರದೀಪ ಎನ್ನುವಾತ ರುಕ್ಸಾನಾಳನ್ನು ಕೊಲೆ ಮಾಡಿ ಸುಟ್ಟು ಹಾಕಿದಾಗ, ಮಗುವನ್ನು ಅನಾಥವಾಗಿ ತಳ್ಳು ಬಂಡಿಯ ಮೇಲಿಟ್ಟು ಓಡಿ ಹೋದಾಗ, ಪ್ರದೀಪನ ಬಗ್ಗೆ ಯಾವುದೇ ಪತ್ರಿಕೆ, ಟಿವಿ, ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಲಿಲ್ಲ. ಕೆಲವು ತಿಂಗಳ ಹಿಂದೆ ಪ್ರವೀಣ ಚೌಗಲೆ ಎನ್ನುವಾತ ತಾನು ಮದುವೆಯಾಗಿ ಮಕ್ಕಳಿದ್ದರೂ ಸಹ ಅಯನ್ನಾರನ್ನು ಪ್ರೀತಿಸಿದ. ಆ ಮುಸ್ಲಿಂ ಹುಡುಗಿ ಅವನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ, ಅವಳ ತಾಯಿ ಹಾಗೂ ಇಬ್ಬರು ಸೋದರರನ್ನು ಬರ್ಬರವಾಗಿ ಕೊಂದು ಹಾಕಿದಾಗ ಈ ಸಂಘಪರಿವಾರದವರಾಗಲಿ ಮಾಧ್ಯಮದವರಾಗಲಿ ಹೆಚ್ಚು ಸುದ್ದಿ ಮಾಡಲೇ ಇಲ್ಲ. ಯಾವುದೇ ಅಮಾನವೀಯ ಘಟನೆ ನಡೆದಾಗ ಅವರ ಜಾತಿ, ಧರ್ಮ, ಪಕ್ಷ, ಪ್ರದೇಶಗಳನ್ನು ನೋಡದೇ ನಾವು ಕೇವಲ ಮನುಷ್ಯರಾಗಿ ಇಂತಹ ಘಟನೆಗಳನ್ನು ನೋಡಬೇಕಾಗಿದೆ. ಅಮಾನುಷ ಕೊಲೆಗಳನ್ನು ವಿರೋಧಿಸಲೇಬೇಕಾಗಿದೆ. ಧರ್ಮರಾಜಕಾರಣ

ಇದನ್ನು ಓದಿ : ಬಿಜೆಪಿ ಸಂಸದ ಪಿಸಿ ಮೋಹನ್‌ ಕ್ಷೇತ್ರದಲ್ಲಿ ನೀರಿನ ಬಿಕ್ಕಟ್ಟು; ಕುಸಿಯುತ್ತಿರುವ ಮೂಲಸೌಕರ್ಯ

ಫಯಾಜನ ತಾಯಿಯವರಾದ ಮುಮ್ತಾಜ್ ಮಾಧ್ಯಮದ ಮುಂದೆ ಮಾತನಾಡಿ “ನನ್ನ ಮಗ ಮಾಡಿರುವ ತಪ್ಪಿಗೆ ರಾಜ್ಯದ ಜನರ ಮುಂದೆ ಕ್ಷಮೆಯಾಚಿಸುತ್ತೇನೆ. ನನ್ನ ಮಗ ಫಯಾಜ್ ಗೆ ನೇಹಾ ಪ್ರಪೋಸ್ ಮಾಡಿದ್ದಳು. ನನ್ನ ಬಳಿ ಅವನು ಹೇಳಿದಾಗ ಈ ಪ್ರೀತಿ ಪ್ರೇಮ ಬೇಡ ಎಂದು ಅವನಿಗೆ ಬುಧ್ಧಿ ಹೇಳಿದ್ದೆ. ನನ್ನ ಮಗ ಮಾಡಿದ ತಪ್ಪಿಗೆ ಅವನಿಗೆ ತಕ್ಕ ಶಿಕ್ಷೆ ಆಗಬೇಕು” ಎಂದಿದ್ದಾರೆ. “ಮಗ ಕೆಎಎಸ್ ಅಧಿಕಾರಿ ಆಗಬೇಕೆಂದು ಕನಸು ಕಂಡಿದ್ದೆ. ಆದರೆ ಈ ರೀತಿ ಆಗಿದ್ದಕ್ಕೆ ಬಹಳ ಸಂಕಟ ಆಗುತ್ತೆ. ನೇಹಾ ತುಂಬಾ ಒಳ್ಳೆಯ ಹುಡುಗಿ, ಫಯಾಜ್ ನೇಹಾ ಮದುವೆ ಆಗಬೇಕು ಅಂತ ಇದ್ದರು. ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕು” ಎಂದಿದ್ದಾರೆ. ಫಯಾಜ್ ತಂದೆ ಬಾಬಾಸಾಹೇಬ್ ಕೂಡ ಮಾಧ್ಯಮದವರ ಮುಂದೆ “ನನ್ನ ಮಗನಿಗೆ ಯಾವುದೇ ದೊಡ್ಡ ಶಿಕ್ಷೆ ನೀಡಿದರೂ ಸ್ವಾಗತ. ಹೆಣ್ಣುಮಕ್ಕಳು ಎಂದರೆ ದೇವರೆಂದು ಭಾವಿಸುವ ದೇಶ ನಮ್ಮದು. ಹೆಣ್ಣು ಮಕ್ಕಳು ಎಂದರೆ ಪೂಜಿಸುತ್ತೇವೆ. ಈ ಘಟನೆಯಿಂದ ನಮ್ಮ ಊರಿಗೆ (ಮುನವಳ್ಳಿ) ಕಪ್ಪು ಚುಕ್ಕೆ ಬಂದಿದೆ. ರಾಜ್ಯದ ಜನತೆ ಹಾಗೂ ಮನವಳ್ಳಿಯ ಯುವಕರು ಶಾಂತಿ ಕಾಪಾಡಬೇಕು” ಎಂದು ಮನವಿ ಮಾಡಿದ್ದಾರೆ. ಇದು ಬಹಳ ತೂಕದ ಮಾತಾಗಿದೆ.

ಬೆಳಗಾವಿಯ ಮುನವಳ್ಳಿಯವರಾದ ಬಾಬಾಸಾಹೇಬರು ಮುಂದುವರಿಯುತ್ತಾ ಹೇಳುತ್ತಾರೆ “ಎರಡು ವರ್ಷದಿಂದ ನಮ್ಮ ಮಗ ನಮ್ಮ ಬಳಿ ಇಲ್ಲ. ಓದಲೆಂದು ಹುಬ್ಬಳ್ಳಿಗೆ ಹೋಗಿದ್ದನು. ನೇಹಾ ನನ್ನ ಮಗಳಿದ್ದ ಹಾಗೆ. ಅವರ ಮಗಳಿಗೆ ಆದ ಕೃತ್ಯ ನಮ್ಮ ಮಗಳ ಮೇಲೆಯೂ ಆಗಬಹುದು. ಈ ಘಟನೆಯನ್ನು ಖಂಡಿಸಿ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸೋದು ತಪ್ಪಲ್ಲ. ಯಾವ ಹೆಣ್ಣು ಮಕ್ಕಳ ಮೇಲೆ ಯಾರೂ ಕಣ್ಣು ಹಾಕಬಾರದು” ಎಂದು ತನ್ನ ಮಗನ ಕೃತ್ಯವನ್ನು ನಿಷ್ಟುರ ಶಬ್ದಗಳಲ್ಲಿ ಖಂಡಿಸಿದ್ದಾರೆ. “ನಾನು ಕರ್ನಾಟಕದ ಜನತೆಗೆ ಕ್ಷಮೆ ಕೇಳುತ್ತೇನೆ. ಕಾನೂನು ಯಾವ ಶಿಕ್ಷೆ ಕೊಟ್ಟರೂ ಅದನ್ನು ನಾನು ಸ್ವಾಗತಿಸುತ್ತೇನೆ. ದಯವಿಟ್ಟು ನೇಹಾ ಕುಟುಂಬದವರು ರಾಜ್ಯದ ಜನ ಹಾಗೂ ಮುನವಳ್ಳಿಯ ಜನತೆ ನನ್ನನ್ನು ಕ್ಷಮಿಸಬೇಕು” ಎಂದು ಕೇಳುತ್ತಾ ಬಾಬಾಸಾಹೇಬ್ ಕಣ್ಣೀರು ಹಾಕುತ್ತಾರೆ.ಧರ್ಮರಾಜಕಾರಣ

ನೇಹಾಳ ತಂದೆ ಹುಬ್ಬಳ್ಳಿಯ ಕಾರ್ಪೋರೇಟರ್ ನಿರಂಜನ ಹಿರೇಮಠರು “ನನ್ನ ಮಗಳ ಗೌರವಕ್ಕೆ ಕಳಂಕ ತರಬೇಡಿ” ಎಂದು ವಿನಂತಿಸುತ್ತಿದ್ದಾರೆ. ನೇಹಾಳ ತಂದೆಯೂ ಫಯಾಜನ ತಂದೆ ತಾಯಿಗಳಿಗೆ ತಮ್ಮ ಮಗಳಿಂದ ದೂರ ಇರುವಂತೆ ಹೇಳಿದ್ದಾರೆ. ಹಾಗೂ ತಮ್ಮ ಮಗಳಿಗೂ ಬುಧ್ಧಿವಾದ ಹೇಳಿದ್ದಾರೆ. ಇದರಿಂದಾಗಿ ನೇಹಾ ಫಯಾಜನನ್ನು ನಿರ್ಲಕ್ಷ ಮಾಡಿದ್ದಾಳೆ. ಮನೆಯಲ್ಲಿ ನೇಹಾಳ ತಂದೆ ಮಗಳಿಗೆ ಸಂಬAಧ ಹುಡುಕಲು ಶುರು ಮಾಡಿದ್ದಾರೆ. ಇದರಿಂದ ನೊಂದಿರುವ ಯುವಕ ಹತ್ಯೆಯ ವಿಕೃತ ಮನಸ್ಸು ಮಾಡಿದ್ದಾನೆ. ಇದು ಒಂದು ಕಡೆಯಾದರೆ ನೇಹಾಳ ಶವವಿದ್ದ ಕಿಮ್ಸ್ ಆಸ್ಪತ್ರೆಗೆ ಬಂದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಈ ಘಟನೆಗೆ ಕೋಮು ಬಣ್ಣ ಬಳಿಯುವ ‘ಲವ್ ಜಿಹಾದ್’ ಅಥವಾ ಮತಾಂತರ ಪ್ರಕರಣವಾಗಿ ಮಾಡಲು ಹೊರಟಿದ್ದಾರೆ. ಅದಕ್ಕೆ ಪ್ರತಿಭಟಿಸಲು ಎಬಿವಿಪಿಯ ಹುಡುಗರು ಮುಂದಾಗಿದ್ದಾರೆ. ಎನೇ ಆಗಲಿ ನೇಹಾಳ ಹಂತಕ ಸಿಕ್ಕಿದ್ದಾನೆ. ಅವನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ಹಿಂದೂ ಮುಸ್ಲಿಂ ಎಲ್ಲ ಸಂಘ, ಸಂಸ್ಥೆಗಳು ಒತ್ತಾಯ ಮಾಡಿವೆ. ಆದರೆ ಕೆಲವು ಕೋಮುವಾದಿ ಪಕ್ಷಗಳು, ಸಂಘ, ಸಂಸ್ಥೆಗಳು ಈ ಸಾವಿಗೆ ಚುನಾವಣೆಗಳನ್ನು ಮುಂದಿಟ್ಟುಕೊAದು ರಾಜಕೀಯ ಬಣ್ಣ ಬಳಿಯುತ್ತಿರುವುದು ಎಂತಹ ನೋವಿನ ಸಂಗತಿಯಲ್ಲವೇ?ಧರ್ಮರಾಜಕಾರಣ

ಇಂದು ನೇಹಾ, ರುಕ್ಸಾನಾ, ಮತ್ತು ಏರ್ ಹೊಸ್ಟೇಸ್ ಆಗಿದ್ದ ಅಯಾನಾರಂತಹ ಅಮಾಯಕರ ಜೀವ ನುಂಗಿದ ಹಂತಕರಿಗೆ ಶಿಕ್ಷೆಯಾಗಲಿ. ಬೇರೆ ಜಾತಿಯವರನ್ನು ಪ್ರೀತಿಸಿದ ಕಾರಣಕ್ಕೆ ಹೆತ್ತವರೇ ತಮ್ಮ ಮಕ್ಕಳನ್ನು ಕೊಂದು ಹಾಕಿದ ಹಲವಾರು ಪ್ರಕರಣಗಳಿವೆ. ಪ್ರೇಮ ನಿರಾಕರಣೆ ಸಹಿಸದೇ ಆಸಿಡ್ ಎರಚಿದ ಹಲವಾರು ಪ್ರಕರಣಗಳು ನಡೆದಿವೆ. ಆದರೆ ಯಾರದೇ ಸಾವನ್ನು ರಾಜಕೀಯಕ್ಕೆ ದಯವಿಟ್ಟು ಬಳಸಿಕೊಳ್ಳಬೇಡಿ. ಹೆಣಗಳ ಮೇಲೆ ರಾಜಕಾರಣ ಮಾಡುವವರು ಕೊಲೆಗಡುಕರಿಗಿಂತ ಕ್ರೂರಿಗಳು. ಇಂದು ಅವರ ಮಗಳು, ನಾಳೆ ನಮ್ಮ ಮಗಳು, ನಾಡಿದ್ದು ನಿಮ್ಮ ಮಗಳಿಗೆ ಹೀಗಾಗಬಹುದು. ರಾಜಕಾರಣಿಗಳೇ, ಧರ್ಮರಕ್ಷಕರೇ ಅಧರ್ಮದ ನಡೆಯನ್ನು ನಿಮ್ಮದಾಗಿಸಿಕೊಳ್ಳಬೇಡಿ. ಈ ಘಟನೆಯಿಂದ ನೇಹಾಳ ಕುಟುಂಬವೂ ನೋವಿನಲ್ಲಿದೆ. ಈ ಕೊಲೆ ಮಾಡಿದ ಕಾರಣಕ್ಕೆ ಮಗನಿಗೆ ಐಎಎಸ್ ಮಾಡಿಸಬೇಕೆಂಬ ತಂದೆ ತಾಯಿಗಳ ಒಡಲಿಗೂ ಬೆಂಕಿ ಬಿದ್ದಿದೆ. ನೊಂದಿರುವ ಎರಡೂ ಕುಟುಂಬದವರ ನೋವನ್ನು ಕೋಮುವಾದಿ ರಾಜಕಾರಣ ಇನ್ನಷ್ಟು ಹೆಚ್ಚಿಸದಿರಲಿ.ಧರ್ಮರಾಜಕಾರಣ

ಇದನ್ನು ನೋಡಿ : ಗ್ಲೆನ್‌ಮಾರ್ಕ್ ನಿಂದ ಚುನಾವಣಾ ಬಾಂಡ್ ಖರೀದಿ : ಕೇಂದ್ರ ಸರ್ಕಾರದ ಕೊಲೆಗಡುಕತನ ಬಯಲು – ಬಾನು ಮುಷ್ತಾಕ್

Donate Janashakthi Media

Leave a Reply

Your email address will not be published. Required fields are marked *