ರಿಯಲ್ ಎಸ್ಟೇಟ್ ಬ್ಯುಸಿನೆಸ್‌ನಿಂದ ಬೆಂಗಳೂರು ಮುಳುಗುತ್ತಿದೆ! ಜನಪ್ರತಿನಿಧಿಗಳ ವಿರುದ್ಧ ರಮ್ಯಾ ಕಿಡಿ

ಬೆಂಗಳೂರು :  ಬೆಂಗಳೂರಿನಲ್ಲಿ  ಮಳೆ ಸೃಷ್ಟಿಸಿರೋ ಅವಾಂತರ ಹಾಗೂ ಅವ್ಯವಸ್ಥೆ ಬಗ್ಗೆ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಆಗಸ್ಟ್​​ 05 ರಂದು ಕಿಡಿಕಾರಿದ್ರು. ಇದೀಗ MLA, MPಗಳ ಬಗ್ಗೆ ರಮ್ಯಾ ಟ್ವೀಟ್​ ಮಾಡಿದ್ದು ಭಾರೀ ಸಂಚಲನ ಮೂಡಿಸಿದೆ. ಮಳೆಯಿಂದ ಸೃಷ್ಟಿ ಆಗಿರೋ ಅವಾಂತರಕ್ಕೆ ಶಾಸಕರು ಹಾಗೂ ಜನಪ್ರತಿನಿಧಿಗಳೇ ಕಾರಣ ಎಂದು ರಮ್ಯಾ ಸರಣಿ ಟ್ವೀಟ್​ ಮೂಲಕ ಕಿಡಿಕಾರಿದ್ದಾರೆ.

ಮಿತಿಮೀರಿದ ರಿಯಲ್ ಎಸ್ಟೇಟ್​ ಬ್ಯುಸಿನೆಸ್​ನಿಂದಲೇ ಬೆಂಗಳೂರು ಮುಳುಗುತ್ತಿದೆ ಎಂದು ಟ್ವೀಟ್ ಮಾಡಿರೋ ರಮ್ಯಾ ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕರ್ನಾಟಕದಲ್ಲಿ ಎಷ್ಟು ಮಂದಿ ಎಂಎಲ್‌ಎ ಹಾಗೂ ಎಂಪಿಗಳು ರಿಯಲ್‌ ಎಸ್ಟೇಟ್ ಬ್ಯುಸಿನೆಸ್ ಮಾಡುತ್ತಿದ್ದಾರೆ ಅನ್ನೋದು ನಿಮಗೆ ಗೊತ್ತಿದೆಯೇ? 28 ಮಂದಿ ಎಂಎಲ್‌ಎಗಳಲ್ಲಿ 26 ಮಂದಿ ಬಳಿ ರಿಯಲ್‌ ಎಸ್ಟೇಟ್ ಬ್ಯುಸಿನೆಸ್‌ ಇದೆ ಎಂದು ಯಾರೋ ಹೇಳಿದ್ರು. ಅಂತ ರಮ್ಯಾ ಟ್ವೀಟ್ ಮಾಡಿದ್ದಾರೆ.

ಕಳೆದ ಎರಡು ವಾರಗಳಿಂದ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರಿನ ಅನೇಕ ಪ್ರದೇಶಗಳು ಕೆರೆಗಳಂತಾಗಿವೆ. ಮನೆಗೆ ನೀರು ನುಗ್ಗಿ ಜನ ಜೀವನಕ್ಕೆ ಅಪಾರ ತೊಂದರೆ ಉಂಟಾಗಿದೆ. ವಾಹನ ಸವಾರರಿಗಂತೂ ನಿತ್ಯ ನರಕ. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿರುವ ರಮ್ಯಾ, ಬೆಂಗಳೂರು ಹೀಗೆ ಆಗುವುದಕ್ಕೆ ಕಾರಣ ಜನಪ್ರತಿನಿಧಿಗಳು. 28 ಎಂಎಲ್.ಎ ಗಳಿಗೆ 26 ಎಂಎಲ್‍ಎಗಳು ರಿಯಲ್ ಎಸ್ಟೇಟ್ ಮಾಡುತ್ತಿದ್ದಾರೆ. ಈ ಪ್ರಮಾಣದಲ್ಲಿ ಅವರೇ ಇದ್ದರೆ, ಬೆಂಗಳೂರನ್ನು ಕಾಪಾಡಲು ಹೇಗೆ ಸಾಧ್ಯ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ : ಮಳೆಯಿಂದ ಜನ ಹೈರಾಣರಾಗಿದ್ದರೂ, ಹೋಟೆಲ್ ದೋಸೆ ಸವಿಯಲು ಆಹ್ವಾನಿಸುವ ಸಂಸದ ತೇಜಸ್ವಿ ಸೂರ್ಯ

ಯೋಚನೆ ಮಾಡಿ ವೋಟ್ ಹಾಕಿ : ವೋಟ್ ಮಾಡುವಾಗ ಎಲ್ಲಾ ಯೋಚಿಸಬೇಕು, ವೋಟ್‌ಗೂ ಮುನ್ನ ಸಂಪೂರ್ಣ ತಿಳಿದುಕೊಳ್ಳಬೇಕು. ಉತ್ತಮ ಕೆಲಸ ಮಾಡುವ ವ್ಯಕ್ತಿಗಳ ಆಯ್ಕೆ ಇರಬೇಕು. ಒತ್ತುವರಿಯಿಂದ ಈ ರೀತಿಯ ಪರಿಸ್ಥಿತಿ ಬಂದಿದೆ.ರಾಜಕೀಯದಲ್ಲಿ ದುಡ್ಡಿದ್ದವರಿಗೆ, ರಿಯಲ್ ಎಸ್ಟೇಟ್​ನಲ್ಲಿದ್ದವರಿಗೆ ಟಿಕೆಟ್ ಸಿಕ್ತಿದೆ.  ಶಾಸಕ ಸ್ಥಾನಕ್ಕೆ ಸ್ಪರ್ಧಿಸೋರು 40 ಲಕ್ಷ ಖರ್ಚು ಮಾಡಲು ಅವಕಾಶ, ಆದ್ರೆ ಕೋಟಿ ಕೋಟಿ ಖರ್ಚು ಮಾಡಿ ಶಾಸಕರಾಗ್ತಾರೆ ಎಂದು ಬೆಂಗಳೂರಿನ ಇಂದಿನ ಸ್ಥಿತಿ ಬಗ್ಗೆ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಈ 26 ರಿಯಲ್‌ ಎಸ್ಟೇಟ್ ಎಂಎಲ್‌ಎಗಳನ್ನು ಆಯ್ಕೆ ಮಾಡಿದ್ದು ಜನರೇ. ಇವರೆಲ್ಲರೂ ಜನರ ಆಯ್ಕೆಯಾಗಿದ್ದಾರೆ. ಹೀಗಾಗಿ ಈ ಬಾರಿ ಮೊದಲು ಮತ ಚಲಾಯಿಸಿ. ಹಾಗೇ ಯೋಚನೆ ಮಾಡಿ ವೋಟ್ ಹಾಕಿ. ಕೆಲವರು ಮತವನ್ನೇ ಚಲಾಯಿಸುವುದಿಲ್ಲ. ಅದರಲ್ಲೂ ನಗರ ಪ್ರದೇಶಗಳಲ್ಲಿ ಜನರು ವೋಟ್ ಮಾಡುವುದಿಲ್ಲ. ಆ ಮೇಲೆ ನಾವು ದೋಷಿಸಲು ಆರಂಭಿಸುತ್ತೇವೆ. ಎಂದು ಟ್ವೀಟ್ ಮಾಡಿದ್ದಾರೆ ರಮ್ಯಾ.

Donate Janashakthi Media

Leave a Reply

Your email address will not be published. Required fields are marked *