ಅಧಿಕಾರಿಗಳನ್ನು ಜೈಲಿಗೆ ಹಾಕಿದರೆ ಆಮ್ಲಜನಕ ಬರುವುದೆ: ಸುಪ್ರೀಂ ಕೋರ್ಟ್‌

ನವದೆಹಲಿ: ‘ಅಧಿಕಾರಿಗಳನ್ನು ಜೈಲಿಗೆ ಕಳುಹಿಸಿದರೆ ದೆಹಲಿಯಲ್ಲಿ ತೀವ್ರ ಬಿಕ್ಕಟ್ಟು ಎದುರಾಗಿರುವ ಆಮ್ಲಜನಕ ಕೊರತೆ ನೀಗುವುದೇ, ಮೊದಲು ಜನರ ಜೀವ ಉಳಿಸುವ ಕಾರ್ಯ ಮುಖ್ಯವಾಗಿದೆ’ ಎಂದು ಸುಪ್ರೀಂ ಕೋರ್ಟ್‌ ಇಂದು ಹೇಳಿದೆ.

ದೆಹಲಿ ಹೈಕೋರ್ಟ್‌ ನೀಡಿದ ನ್ಯಾಯಾಂಗ ನಿಂದನೆ ನೋಟಿಸ್‌ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತು. ನ್ಯಾಯಾಲಯ ಅರ್ಜಿಯ ವಿಚಾರಣೆ ನಡೆಸುವ ಸಂದರ್ಭದಲ್ಲಿ ಈ ಅಭಿಪ್ರಾಯ ನೀಡಿದೆ.

ಇದನ್ನು ಓದಿ: ಆಮ್ಲಜನಕ ಕೊರತೆ-ಇದು ನರಮೇಧಕ್ಕೆ ಸಮ: ಅಲಹಾಬಾದ್‌ ಹೈಕೋರ್ಟ್‌

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಡ್ ರೋಗಿಗಳ ಆರೈಕೆಗಾಗಿ ಆಮ್ಲಜನಕದ ಪೂರೈಕೆ ಕುರಿತಂತೆ ಸರಿಯಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳ ವಿರುದ್ಧ ದೆಹಲಿ ಹೈಕೋರ್ಟ್‌ ಇತ್ತೀಚಿಗೆ ನ್ಯಾಯಾಂಗ ನಿಂದನೆ ನೋಟಿಸ್  ನೀಡಿತ್ತು.

ಮೇ 3ರವರೆಗೆ ರಾಷ್ಟ ರಾಜಧಾನಿ ದೆಹಲಿಗೆ ಎಷ್ಟು ಆಮ್ಲಜನಕವನ್ನು ಪೂರೈಸಲಾಗಿದೆ ಎಂಬ ಸಂಪೂರ್ಣವಾದ ವಿವರವನ್ನು ಸಲ್ಲಿಸಲು ನ್ಯಾಯಾಲಯ ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ದೆಹಲಿಯಲ್ಲಿ ಕೋವಿಡ್‌ ಬಿಕ್ಕಟ್ಟು ತೀವ್ರರೀತಿಯ ಪರಿಣಾ ಬೀರುತ್ತಿರುವುದರಿಂದ ಮೇ 3ರಿಂದಲೇ ಪ್ರತಿ ದಿನ 700 ಮೆಟ್ರಿಕ್‌ ಟನ್‌ ಆಮ್ಲಜನಕವನ್ನು ಪೂರೈಸಬೇಕು ಎಂದು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ನೇತೃತ್ವದ ಪೀಠವು ಇದೇ ಸಂದರ್ಭದಲ್ಲಿ ಆದೇಶಿದೆ.

ಇದನ್ನು ಓದಿ: ಆಕ್ಸಿಜನ್‌ಗಾಗಿ ನಿಲ್ಲದ ಹಾಹಾಕಾರ – ಕರ್ನಾಟಕದಲ್ಲಿ ಆಕ್ಸಿಜನ್‌ ಉತ್ಪಾದನೆ ಹೇಗಿದೆ?

ಈ ಸಂದರ್ಭದಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಇದು ವಿರೋಧಿ ದಾವೆಯಲ್ಲ ಬದಲಾಗಿ ಜನರಿಂದ ಆಯ್ಕೆಯಾದ ಕೇಂದ್ರ ಹಾಗೂ ದೆಹಲಿ ಸರ್ಕಾರಗಳು ಕೋವಿಡ್ -19 ನಿಯಂತ್ರಣದಲ್ಲಿ ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದೆ ಎಂದು ನ್ಯಾಯಾಲಯಕ್ಕೆ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *