ಡಾ.ವಸುಂದರಾ ಭೂಪತಿಯವರಿಂದ 8 ಪುಸ್ತಕಗಳ ಗುಚ್ಛ ಬಿಡುಗಡೆ

ಡಾ.ವಸುಂದರಾ ಭೂಪತಿಯವರು 8 ಪುಸ್ತಕಗಳ ಗುಚ್ಛವನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇಂದು ನಡೆಯುವ ಸಮಾರಂಭದಲ್ಲಿ ಬಿಡುಗಡೆ ಮಾಡಲಿದ್ದಾರೆ. ಡಾ.ಕೆ.ಶರೀಫಾ ಅವರ ‘ಬಯಲಿಗೂ ಬಾಗಿಲು’ (ಕಥಾ ಸಂಕಲನ) ಮತ್ತು ನಿರೋಳಗಣ ಕಿಚ್ಚು’, ಪ್ರಭಾಕರನ್ ಕೆ ಅನುವಾದಿಸಿರುವ ಆರ,ವಿ.ಆಚಾರಿ ಅವರ ‘ವಾಸ್ತುಶಾಸ್ತ್ರ : ತಿರುಳೋ, ತಿಳಿಗೇಡಿತನವೋ’, ಡಾ.ಕೆ.ಸುಶೀಲಾ ಅವರ ‘ಆಧುನಿಕ ಕಾಯಿಲೆಗಳ ವಿಸ್ಮಯ ಲೋಕ’, ‘ವೈದ್ಯೆಯೊಬ್ಬರ ನೆನಪಿನಂಗಳಿಂದ’, ‘ಮಾಸ್ಕೊದ ಆ ದಿನಗಳು’, ಚಂದ್ರಕಾಂತ ಪೋಕಳೆ ಅನುವಾದಿಸಿರುವ ಇರಾವತಿ ಕರ್ವೆ ಅವರ ‘ಸಾರ್ಥಕತೆ’, ಚಂಪಾ ಜೈಪ್ರಕಾಶ್ ಅವರ’ ಸುಬ್ಬರಾಯನ ಕುಂಟೆ’ (ಕಾದಂಬರಿ) – ಬಿಡುಗಡೆಯಾಗಲಿರುವ ಪುಸ್ತಕಗಳು. ಕ್ರಿಯಾ ಮಾಧ್ಯಮ ಮತ್ತು ಚಿಂತನ ಪುಸ್ತಕ ಜಂಟಿಯಾಗಿ ಈ ಸಮಾರಂಭವನ್ನು ಆಯೋಜಿಸಿದೆ

ಸಂಜೆ 4.00 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಡಾ.ವಸುಂದರಾ ಭೂಪತಿ, ಡಾ.ಎಚ್.ಎಸ್.ಸತ್ಯನಾರಾಯಣ, ಟಿ.ಸುರೇಂದ್ರ ರಾವ್, ಡಾ.ಎಚ್.ಜಿ.ಜಯಲಕ್ಷ್ಮಿ, ಜಹಿದಾ ಶಿರಿನ್ ಪುಸ್ತಕ ಪರಿಚಯ ಮಾಡಲಿದ್ದಾರೆ.

ಬೆಂಗಳೂರಿನ ಹೊರಗಿನವರು ಝೂಮ್ ನಲ್ಲೂ ಭಾಗವಹಿಸಬಹುದು. ಜನಶಕ್ತಿ ಮೀಡಿಯಾ ಫೇಸ್ ಬುಕ್ ಮತ್ತು ಯೂ ಟ್ಯೂಬ್ ನಲ್ಲಿ ಲೈವ್ ಪ್ರಸಾರವೂ ಇರುತ್ತದೆ.

 

Donate Janashakthi Media

Leave a Reply

Your email address will not be published. Required fields are marked *