ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಾಲ ನೀಡಲು ಧಾವಿಸಿದ್ದೂ, ಭವಿಷ್ಯ ನಿಧಿ (ಪಿಎಫ್) ಮತ್ತು ಇಂಧನ ಬಾಕಿ ಪಾವತಿಗೆ ಸರ್ಕಾರದ ಖಾತರಿಯೊಂದಿಗೆ ಹಣಕಾಸು ಸಂಸ್ಥೆಗಳಿಂದ 2 ಸಾವಿರ ಕೋಟಿ ರೂ. ಸಾಲ ಪಡೆಯಲು ಸಾರಿಗೆ ಸಂಸ್ಥೆಗಳಿಗೆ ಸರ್ಕಾರ ಅನುಮೋದನೆ ನೀಡಿತು.
ಅದರಂತೆ ಬಿಎಂಟಿಸಿಯು 589.20 ಕೋಟಿ ರೂ. ಸಾಲ ಕೋರಿ ಫೆ.6 ರಂದು ಟೆಂಡರ್ ಕರೆದಿತ್ತು. ಈಗ, ಪಂಜಾಬ್ ನ್ಯಾಷನಲ್ ಬ್ಯಾಂಕ್ ವಾರ್ಷಿಕ ಶೇ.7.58 ಬಡ್ಡಿ ದರದಲ್ಲಿ ಸಾಲ ನೀಡಲು ಮುಂದೆ ಬಂದಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 623.80 ಕೋಟಿ ರೂ., ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 589.20 ಕೋಟಿ ರೂ., ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 646 ಕೋಟಿ ರೂ. ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ 141 ಕೋಟಿ ರೂ. ಸೇರಿದಂತೆ ಒಟ್ಟು 2,000 ಕೋಟಿ ಸಾಲ ಎತ್ತುವಳಿ ಮೂಲಕ ಇಂಧನ ಬಾಕಿ ಮೊತ್ತ ಮತ್ತು ಭವಿಷ್ಯ ನಿಧಿಗೆ ಅನುದಾನ ಬಳಸಿಕೊಳ್ಳಲು ಸರ್ಕಾರದ ಅನುಮೋದನೆ ನೀಡಿತ್ತು.
ಇದನ್ನೂ ಓದಿ: ಬಿಜೆಪಿಯವರು ದೇಶವನ್ನು ಒಡೆದು ಎರಡು ಭಾಗ ಮಾಡಲು ಹೊರಟಿದ್ದಾರೆ- ಶರತ್ ಬಚ್ಚೇಗೌಡ
ಅದರಂತೆ ಹಳೆಯ ಬಾಕಿ ತೀರಿಸಲು ರಾಷ್ಟ್ರೀಕೃತ ಮತ್ತು ವಾಣಿಜ್ಯ ಬ್ಯಾಂಕ್‌ಗಳಿಂದ 7 ವರ್ಷಗಳ ಅವಧಿಗೆ ಕೆಲವು ಷರತ್ತುಗಳನ್ನು ವಿಧಿಸಿ 589.20 ಕೋಟಿ ಸಾಲ ಕೋರಿ ಟೆಂಡರ್ ಕರೆದಿತ್ತು. ಅದರಂತೆ ಈಗ ಬಿಎಂಟಿಸಿಗೆ ಸಾಲ ನೀಡಲು ಕೆನರಾ ಬ್ಯಾಂಕ್ ವಾರ್ಷಿಕ ಶೇ.10ರಷ್ಟು ಬಡ್ಡಿ ದರದಲ್ಲಿ ಸಾಲು ನೀಡಲು ಬೆಡ್ ಮಾಡಿತ್ತು. ಕೆನರಾ ಬ್ಯಾಂಕ್‌ಗಿಂತ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಾರ್ಷಿಕ ಶೇ.7.58 ಬಡ್ಡಿ ದರದಲ್ಲಿ ಸಾಲ ನೀಡಲು ಮುಂದು ಬಂದಿರುವುದರಿಂದ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ ಸಾಲ ಪಡೆಯುವುದು ಖಚಿತವಾಗಿದೆ ಎಂದು ಬಿಎಂಟಿಸಿ ಅಧಿಕಾರಿವೊಬ್ಬರು ಮಾಹಿತಿ ನೀಡಿದ್ದಾರೆ.
ರಾಜ್ಯ ಸರ್ಕಾರದ ಅನುಮತಿಯೊಂದಿಗೆ ಬಿಎಂಟಿಸಿಯು ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ರಾಷ್ಟ್ರೀಕೃತ ಮತ್ತು ವಾಣಿಜ್ಯ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಫೆ.6 ರಂದು ಕೆಲವು ಷರತ್ತುಗಳನ್ನೂ ವಿಧಿಸಿ ಟೆಂಡರ್ ಕರೆದಿತ್ತು. ಒಂದೇ ಕಂತಿನಲ್ಲಿ ಸಾಲ ನೀಡಬೇಕು. ಮರು ಪಾವತಿ ಅವಧಿ 7 ವರ್ಷ ಸಮಯ ನೀಡಬೇಕು, ಪ್ರಾಥಮಿಕ ಹಾಗೂ ಮೇಲಾಧಾರ ಭದ್ರತೆಯನ್ನು ರಾಜ್ಯ ಸರ್ಕಾರದಿಂದ ಒದಲಾಗಿಸುವುದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಿತ್ತು.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನೌಕರರ ಭವಿಷ್ಯ ನಿಧಿ ಪಾವತಿ 400 ಕೋಟಿ ರೂ., ಇಂಧನ ವೆಚ್ಚ ಪಾವತಿ ಅಂದಾಜು 180 ಕೋಟಿ ರೂ.ಗಿಂತ ಹೆಚ್ಚಿದೆ. ಈಗ ಬ್ಯಾಂಕ್‌ಗಳು 589.20 ಕೋಟಿ ರೂ. ಸಾಲ ನೀಡಿದರೆ, ಬಿಎಂಟಿಸಿ ನೌಕರರ ಭವಿಷ್ಯ ನಿಧಿ ಪಾವತಿ, ಇಂಧನ ವೆಚ್ಚದ ಪಾವತಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಬಿಎಂಟಿಸಿಯಿಂದ ಬರುವ ಆದಾಯದಿಂದ ಸಾಲ ಮರುಪಾವತಿ ಮಾಡಲಾಗುದು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ನೋಡಿ: ಪಹಲ್‍ಗಾಂಮ್ ಹತ್ಯಾಕಾಂಡ| ಕುಟುಂಬದವರನ್ನು ಕಳೆದುಕೊಂಡವರ ಪ್ರಶ್ನೆಗಳಿಗೆ ಉತ್ತರಿಸುವಿರಾ? Janashakthi Media